ಯಾವುದೇ ಶೀರ್ಷಿಕೆಯಿಲ್ಲ
0
ಸೆಪ್ಟೆಂಬರ್ 22, 2017
ಪರಿಸರ ದಿನಾಚರಣೆಗೆ ನೆಡುವ ಗಿಡಗಳ ನಾಟಿಗೆ ಚಾಲನೆ
ಬದಿಯಡ್ಕ : ಬದಿಯಡ್ಕ ಗ್ರಾಮ ಪಂಚಾಯತು ಮಹಾತ್ಮಾಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಭಾಗವಾಗಿ 2018 ಜೂನ್ ತಿಂಗಳ 5 ರಂದು ಪರಿಸರ ದಿನಾಚರಣೆಯ ಅಂಗವಾಗಿ ವಿತರಿಸಲಿರುವ ಗಿಡಗಳನ್ನು ಬೆಳೆಯಲು ಗ್ರಾಮ ಪಂಚಾಯತು ಮಟ್ಟದಲ್ಲಿ ಪ್ರಾರಂಭಿಸಿದ ನರ್ಸರಿಗಳ ಉದ್ಘಾಟನೆಯನ್ನು ಗುರುವಾರ ವಿದ್ಯಾಗಿರಿ ಎಸ್.ಎ.ಎಮ್.ಪಿ.ಯು.ಪಿ.ಎಸ್ ಶಾಲೆಯ ಪರಿಸರದಲ್ಲಿ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಝೈಬುನ್ನೀಸಾ ಅಧ್ಯಕ್ಷತೆ ವಹಿಸಿದರು. ವಿದ್ಯಾಗಿರಿ ಶಾಲಾ ಮುಖ್ಯೋಪಾಧ್ಯಾಯಿನಿ ಲಲಿತಾಂಬಿಕಾ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸುಧಾಕರನ್, ಅನಿತ, ಗ್ರಾಮ ವಿಸ್ತರಣಾಧಿಕಾರಿ ರತೀಶ್, ಉದ್ಯೋಗ ಖಾತರೀ ಯೋಜನೆಯ ಆರತಿ, ಸುಹೈಲ್, ರಜಿತ, ಅನ್ನಮ್ಮ ಹಾಗೂ ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳು ಉಪಸ್ಥಿತರಿದ್ದರು. ಕಾರ್ಯದಶರ್ಿ ವಿ.ಆರ್.ಮನೋಜ್ ಸ್ವಾಗತಿಸಿ, ಗ್ರಾ.ಪಂ. ಸದಸ್ಯ ಬಾಲಕೃಷ್ಣ ಶೆಟ್ಟಿ ವಂದಿಸಿದರು.
ಯೋಜನೆ ಏನು:
ವಿಶ್ವಪರಿಸರ ದಿನದಂದು ಈವರೆಗೆ ಎಲ್ಲಾ ಗ್ರಾಮ ಪಂಚಾಯತುಗಳಿಗೂ ಅರಣ್ಯ ಇಲಾಖೆ ವಿವಿಧ ಸಸಿಗಳನ್ನು ನೆಡಲು ರವಾನಿಸುತ್ತಿತ್ತು. ಆದರೆ ಬದಿಯಡ್ಕ ಗ್ರಾಮ ಪಂಚಾಯತು ತಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಮುಂದಿನ ವರ್ಷದಿಂದ ಪರಿಸರ ದಿನದ ಪೂರ್ವಭಾವಿಯಾಗಿ ಸಸಿಗಳನ್ನು ಪೋಶಿಸಿ ವಿತರಿಸಲು ಯೋಜನೆ ಸಿದ್ದಪಡಿಸಿದ್ದು, ಉದ್ಯೋಗ ಖಾತರಿ ಯೋಜನೆಯಲ್ಲಿ ಈ ಬಗ್ಗೆ 2 ಲಕ್ಷ ರೂ.ಗಳನ್ನು ಮೀಸಲಿರಿಸಲಾಗಿದೆ. ಹಲಸು, ಮಾವು, ತೇಗ, ದೇವದಾರ ಸಹಿತ ಉತ್ತಮ ಮೌಲ್ಯಗಳ ಮರಗಳನ್ನು ನೆಡಲು ಬೆಳೆಸಲಾಗುತ್ತದೆ. ಅರಣ್ಯ ಇಲಾಖೆ ಈ ಸಸಿಗಳನ್ನು ಒದಗಿಸಲಿದ್ದು, ಅವುಗಳ ಆರೈಕೆ, ಪೋಷಣೆ ಶಾಲಾ ವಿದ್ಯಾಥರ್ಿಗಳ ಮೂಲಕ ಉದ್ಯೋಗ ಖಾತರಿ ಯೋಜನೆಯ ಕಾರ್ಯಕರ್ತರ ಮೇಲುಸ್ತುವಾರಿಯಲ್ಲಿ ನಡೆಯಲಿದೆ.
ತೆಂಗು ಸೇರ್ಪಡೆ:
ಮುಂದಿನ ಪರಿಸರ ದಿನದಂದು ಹೊಸತಾಗಿ ತೆಂಗು ನಾಟಿಗೂ ಮಹತ್ವ ನೀಡಿ, ತೆಂಗಿನ ಗಿಡಗಳನ್ನು ವಿತರಿಸಲು ಯೋಜನೆ ಸಿದ್ದಪಡಿಸಲಾಗಿದೆ ಎಂದು ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಪತ್ರಿಕೆಗೆ ತಿಳಿಸಿರುವರು.ಈ ವರೆಗೆ ವಿವಿಧ ವರ್ಗದ ಇತರ ಸಸಿಗಳನ್ನಷ್ಟೆ ಪರಿಸರ ದಿನದಂದು ವಿತರಿಸಿ ನೆಡಲಾಗುತ್ತಿತ್ತು. ಆದರೆ ಗ್ರಾ.ಪಂ. ನ ವಿಶೇಷ ಕೇಳಿಕೆಯ ಮೇರೆಗೆ ಅರಣ್ಯ ಇಲಾಖೆಯು ತೆಂಗಿನ ನಾಟಿಗೂ ಅವಕಾಶ ಕಲ್ಪಿಸಿದ್ದು, ಉತ್ತಮ ಗುಣಮಟ್ಟದ ತೆಂಗಿನ ಸಸಿಗಳು ಮುಂದಿನ ಜೂ. ತಿಂಗಳಲ್ಲಿ ವಿತರಿಸಲಾಗುವುದೆಂದು avru thilisiruvaru.