ಯಾವುದೇ ಶೀರ್ಷಿಕೆಯಿಲ್ಲ
0
ಸೆಪ್ಟೆಂಬರ್ 17, 2017
< ಕುಂಬಳೆಯಲ್ಲಿ ಶೌಚಾಲಯ ನಿಮರ್ಾಣಕ್ಕೆ ಪ್ರಧಾನಿಗೆ ಪತ್ರ-ಶೀಘ್ರ ನಿಮರ್ಿಸಲು ಆದೇಶ
ಕುಂಬಳೆ: ದಿನೇದಿನೇ ಬೆಳೆಯುತ್ತಿರುವ ಕುಂಬಳೆ ಪೆಟೆಯ ಜನದಟ್ಟಣೆಯ ಮಧ್ಯೆ ಸೂಕ್ತ ಶೌಚಾಲಯ ವ್ಯವಸ್ಥೆಯ ಕೊರತೆ ಜನಸಾಮಾನ್ಯರನ್ನು ಹೈರಾಣಗೊಳಿಸುತ್ತಿದೆ. ಈ ಸಮಸ್ಯೆಯನ್ನು ಮನಗಂಡು ಬಂಬ್ರಾಣದ ಸಮನ್ವಯ ಸಮಿತಿ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಜಯರಾಮ ಪೂಜಾರಿ ಕುಂಬಳೆಯಲ್ಲಿ ಶೌಚಾಲಯ ನಿಮರ್ಾಣಗೊಳಿಸಲು ಪರಿಹಾರ ನೀಡಬೇಕೆಂದು ಆಗ್ರಹಿಸಿ ಪ್ರಧಾನಿ ನರೇಂದ್ರಮೋದಿಯವರಿಗೆ ಪತ್ರ ರವಾನಿಸಿದ್ದರು. ಇದೀಗ ಜಯರಾಮ ಪೂಜಾರಿಯವರ ಪತ್ರಕ್ಕೆ ಸ್ಪಂದಿಸಿದ ಪ್ರಧಾನಮಂತ್ರಿಗಳ ಕಾಯರ್ಾಲಯದಿಂದ ಕುಂಬಳೆ ಗ್ರಾಮ ಪಂಚಾಯತು ಅಧಿಕೃತರಿಗೆ ಶೀಘ್ರ ಶೌಚಾಲಯ ವ್ಯವಸ್ಥೆ ಕಲ್ಪಿಸಲು ಆದೇಶ ಪತ್ರ ಬಂದಿರುತ್ತದೆ.
ಈ ಹಿಂದೆ ಕುಂಬಳೆ ಬಸ್ ನಿಲ್ದಾಣ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಶೌಚಾಲಯವೊಂದು ಕಾಯರ್ಾಚರಿಸುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ನಿರ್ವಹಣೆಯ ಕೊರತೆ ಮತ್ತು ಇದೀಗ ನಿಲ್ದಾಣದ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಡ ಮುರಿದು ಬೀಳುವ ಸ್ಥಿತಿಯಲ್ಲಿರುವುದರಿಂದ ಅದನ್ನು ಗ್ರಾಮ ಪಂಚಾಯತು ಅಧಿಕೃತರು ಸಂಪೂರ್ಣ ಮುಚ್ಚುಗಡೆಗೊಳಿಸಿದ್ದರು. ನೂತನ ಬಸ್ ನಿಲ್ದಾಣ ಶಾಫಿಂಗ್ ಕಾಂಪ್ಲೆಕ್ಸ್ ನಿಮರ್ಾಣ ಪ್ರಕ್ರಿಯೆ ಆಮೆಗತಿಯಲ್ಲಿರುವ ಕಾರಣ ಶೌಚಾಲಯ ವ್ಯವಸ್ಥೆ ನೆನೆಗುದಿಗೆ ಬಿದ್ದಿದೆ. ಈ ಕಾರಣದಿಂದ ಬೇಸತ್ತು ಜಯರಾಮ ಪೂಜಾರಿ ಪ್ರಧಾನಿಗೆ ಆ.28 ರಂದು ಪತ್ರಬರೆದಿದ್ದರು. ಇದೀಗ ಪ್ರಧಾನಿ ಕಾಯರ್ಾಲಯ ರಾಜ್ಯದ ಮುಖ್ಯ ಕಾರ್ಯದಶರ್ಿಗೆ ಪತ್ರರವಾನಿಸಿ ಸ್ವಚ್ಚಭಾರತ ಯೋಜನೆಯಡಿ ಶೀಘ್ರ ಶೌಚಾಲಯ ನಿಮರ್ಿಸಿಕೊಡಲು ಆದೇಶಿಸಿದೆ. ಅದರಂತೆ ರಾಜ್ಯ ಮುಖ್ಯ ಕಾರ್ಯದಶರ್ಿಗಳು ಕುಂಬಳೆ ಗ್ರಾಮ ಪಂಚಾಯತು ಕಾರ್ಯದಶರ್ಿಗೆ ಈ ಬಗ್ಗೆ ಕ್ರಮಕೈಗೊಳ್ಳಲು ಆದೇಶ ನೀಡಿರುತ್ತದೆ. ಈ ಆದೇಶ ಪತ್ರದ ಪ್ರತಿಯನ್ನು ಶನಿವಾರ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎಲ್ ಪುಂಡರೀಕಾಕ್ಷ ರವರು ಜಯರಾಮ ಪೂಜಾರಿಯವರಿಗೆ ಹಸ್ತಾಂತರಿಸಿದರು.
.........................................................................................................................