ಯಾವುದೇ ಶೀರ್ಷಿಕೆಯಿಲ್ಲ
0
ಸೆಪ್ಟೆಂಬರ್ 23, 2017
ಹೆಲ್ಪ್ ಡೆಸ್ಕ್ ಆರಂಭ
ಉಪ್ಪಳ: ನಿಲುಗಡೆಗೆ ಅವಕಾಶವಿಲ್ಲದಿರುವ ಕಾರಣ ಉಪ್ಪಳ ರೈಲ್ವೇ ನಿಲ್ದಾಣದಲಲಿ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯ ಸೌಲಭ್ಯ ಇಲ್ಲದಿರುವುದರಿಂದ ಉಪ್ಪಳ ರೈಲ್ವೇ ನಿಲ್ದಾಣದಲ್ಲಿ ಉಪ್ಪಳ ರೈಲು ನಿಲ್ದಾಣ ಕ್ರಿಯಾ ಸಮಿತಿಯಾದ ಸೇವ್ ಉಪ್ಪಳ ರೈಲ್ವೇ ಸ್ಟೇಶನ್ ಸಮಿತಿ ಹೆಲ್ಪ್ಲೈನ್ ಕೇಂದ್ರ ಆರಂಭಿಸಲು ತೀಮರ್ಾನಿಸಲಾಯಿತು. ಅಕ್ಟೋಬರ್ 2 ರಿಂದ ಪ್ರತಿನಿತ್ಯ ಬೆಳಿಗ್ಗೆ 7 ರಿಂದ ಸಂಜೆ 5ರ ವರೆಗೆ ಹೆಲ್ಪ್ಡೆಸ್ಕ್ ಸಹಾಯ ಕೇಂದ್ರ ಕಾಯರ್ಾಚರಿಸಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಜೊತೆಗೆ ಅ. 2 ರಂದು ಗಾಂಧೀ ಜಯಂತಿಯ ಅಂಗವಾಗಿ ಶುಚೀಕರಣ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಶುಕ್ರವಾರ ಉಪ್ಪಳ ವ್ಯಾಪಾರಿ ಭವನದಲ್ಲಿ ನಡೆದ ಕ್ರಿಯಾ ಸಮಿತಿ ಸಭೆಯಲ್ಲಿ ಅಧ್ಯಕ್ಷ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಆರ್ ರಮಣನ್ ಮಾಸ್ತರ್, ಎಂ.ಕೆ.ಅಲಿ ಮಾಸ್ತರ್, ಎಸ್.ಎಂ.ಎ.ತಂಙಳ್, ಹನೀಫ್ ರೈನ್ಬೋ, ಇಬ್ರಾಹಿಂ, ನಾಫಿ ಬಪ್ಪಾಯಿತೊಟ್ಟಿ ಮೊದಲಾದವರು ಸಭೆಯಲ್ಲಿ ಮಾತನಾಡಿದರು. ಪ್ರಧಾನ ಕಾರ್ಯದಶರ್ಿ ಮೊಹಮ್ಮದ್ ಅಝೀಂ ಮಣಿಮುಂಡ ಸ್ವಾಗತಿಸಿ, ವಂದಿಸಿದರು.