ಯಾವುದೇ ಶೀರ್ಷಿಕೆಯಿಲ್ಲ
0
ಸೆಪ್ಟೆಂಬರ್ 20, 2017
ನಿಲ್ಲದ ಪಯಣ
ಯಾಕೆ ನಿನಗೆ ನೆನಪಿಲ್ಲ
ನನ್ನ ನೆನಪಿನ ಆತ್ಮ
ನಾನಿಲ್ಲಿ ಕಾದಿರುವೆ ನಿನ್ನೊಂದು ಕರೆಗಾಗಿ
ತೆರೆದ ಕಿಣಕಿಯೆಡೆ ನಿನ್ನ ನಾ ಕಂಡಾಗ
ನಿನ್ನ ಹೂನಗೆ ಚೆಲ್ಲಿ
ನನ್ನ ಹೃದಯವ ಕಲಕಿದೆ
ನೀನು ಮತ್ತೆ ಕರೆಯುವೆಯೆಂದು
ಮತ್ತೆ ಮತ್ತೆಯು ಕಾದೆ
ನಿನ್ನ ಸುಳಿವೇ ಇಲ್ಲ ಮತ್ತೆ ನೀನೇನಾದೆ
ನಿನ್ನ ನೆನಪಿನ ದೋಣಿ ನನ್ನ
ತೇಲಿಸಿ ಓಲಾಡುವುದು
ನಿಲ್ಲದೀ ಪಯಣ ನೀ ಸಿಗುವವರೆಗೆ//
..............................
ಬಲೆ
ಮತ್ತೆ ಮತ್ತದೇ ನೆನಪುಗಳು
ದುಷ್ಯಂತ ಶಾಕುಂತಲೆಯೋ
ಶಿವೆಗಾಗಿ ಕಾತರಿಸಿಹ ಶಿಖಿಯೋ
ಎಷ್ಟೊಂದು ಸುಳ್ಳುಗಳು
ಒಂದು ಕೇಳದ ಮಾತು
ಇನ್ನೊಂದು ಮರೆತೋದ ಮಾತು
ಆಗಲೂ ಮತ್ತೀಗಲೂ
ಕಾಲನೆಸೆದ ಮಹಾ ಮೋಸದಾಟವೋ
ಅರ್ಥವಾಗದ ಪ್ರಶ್ನೆ
ಯಾವ ಮೋಸದ ಬಲೆಯೊ...ಅಬಲೆಯೊ//
.......................................
ಯಾವುದೋ ದುಗುಡಗಳು
ಹೊತ್ತಿ ಉರಿಯುತಿವೆ ಒಳಗೆ
ಒಡಲೊಳಗೆ
ಯಾವುದೋ ತುಮುಲಗಳು
ಗೊತ್ತು ಗುರಿಯಿಲ್ಲದೆಡೆಗೆ
ಪ್ರಪಾತದಡಿಗೆ
ಇರುವನೆಲ್ಲವ ಮರೆತು
ಕಣ್ಮುಚ್ಚಿದೊಡೆ
ಹೊಗೆದಾಡುವ ಕರಿಹೊಗೆಯ
ಮಾರ್ಮಲೆವ ಕರಿಮೋಡದುಡುಗೆ//
...........................................