ಯಾವುದೇ ಶೀರ್ಷಿಕೆಯಿಲ್ಲ
0
ಸೆಪ್ಟೆಂಬರ್ 23, 2017
ಇಂದು ಕಾಸರಗೋಡು ದಸರಾ ಉತ್ಸವ
ಕಾಸರಗೋಡು: ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ನೇತೃತ್ವದಲ್ಲಿ ಕೂಡ್ಲು ಶ್ರೀ ಚಾಮುಂಡೇಶ್ವರಿ ಕಾಲಬೈರವ ದೇವಸ್ಥಾನದಲ್ಲಿ ಸೆ.24 ರಂದು ಕಾಸರಗೋಡು ದಸರಾ ಮಹೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬೆಳಗ್ಗೆ 11 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಚಾಮುಂಡೇಶ್ವರಿ ಕಾಲಬೈರವ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಈಶ್ವರ ಎಡನೀರು ಅಧ್ಯಕ್ಷತೆ ವಹಿಸುವರು. ಕಾಸರಗೋಡು ಉಪಜಿಲ್ಲಾಧಿಕಾರಿ ಕೆ.ಶಶಿಧರ ಶೆಟ್ಟಿ ಸಮಾರಂಭವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತು ಸದಸ್ಯೆ ಲೀಲಾ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉಪಸ್ಥಿತರಿರುವರು.
ಕನ್ನಡ ಹೋರಾಟ ಸಮಿತಿಯ ಪ್ರಧಾನ ಕಾರ್ಯದಶರ್ಿ ಕೆ.ಭಾಸ್ಕರ ಅವರು ದಸರಾ ಕುರಿತು ವಿಶೇಷ ಉಪನ್ಯಾಸ ನೀಡುವರು. ಶ್ರೀ ಚಾಮುಂಡೇಶ್ವರಿ ಕಾಲಬೈರವ ದೇವಸ್ಥಾನ ಸೇವಾ ಸಮಿತಿಯ ಕಾರ್ಯದಶರ್ಿ ಉದಯ ಕುಮಾರ್ ಮಂಗಳೂರು, ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ, ಕನ್ನಡ ಜಾಗೃತಿ ಸಮಿತಿಯ ಅಧ್ಯಕ್ಷ ಸತ್ಯನಾರಾಯಣ ಅಮೈ , ಪಾರೆಕಟ್ಟೆ ಸಪ್ತಗಿರಿ ಭಜನಾ ಸಂಘದ ಕಾರ್ಯದಶರ್ಿ ಕಾವ್ಯ ಕುಶಲ ಮೊದಲಾದವರು ಪಾಲ್ಗೊಳ್ಳುವರು.
ಕಾಸರಗೋಡು ದಸರಾ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ದಿವಾಕರ ಪಿ.ಅಶೋಕನಗರ, ಧ್ರುವರಾಜ್ ಮತ್ತು ಬಳಗದಿಂದ ಗಾಯನ, ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕ ಇವರಿಂದ ಮಕ್ಕಳ ಯಕ್ಷಗಾನ ಕೂಟ `ಕಣರ್ಾಜರ್ುನ' ನಡೆಯಲಿದೆ.