ಯಾವುದೇ ಶೀರ್ಷಿಕೆಯಿಲ್ಲ
0
ಸೆಪ್ಟೆಂಬರ್ 24, 2017
ವಿದ್ಯಾದಶಮಿ ಸಂಗೀತೋತ್ಸವ
ಬದಿಯಡ್ಕ: ಬಳ್ಳಪದವು ಸ್ವಗರ್ೀಯ ನಾರಾಯಣ ಉಪಾಧ್ಯಾಯ ಸಂಸ್ಮರಣ ಸಂಗೀತ ಪ್ರತಿಷ್ಠಾನ ಉಬ್ರಂಗಳ ಇದರ ನೇತೃತ್ವದಲ್ಲಿ ಬಳ್ಳಪದವು ನಾರಾಯಣೀಯಂ ಸಂಗೀತ ಕ್ಯಾಂಪಸ್ ವೀಣಾವಾದಿನಿಯಲ್ಲಿ ಸೆ.30 ರಂದು ವಿದ್ಯಾದಶಮಿ ಸಂಗೀತೋತ್ಸವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಂಗವಾಗಿ ಬೆಳಿಗ್ಗೆ 8.30ಕ್ಕೆ ಡಾ.ರಾಧಾಕೃಷ್ಣ ಭಟ್ ಮೈಕಾನರಿಂದ ಸರಸ್ವತೀ ಪೂಜೆ ನಡೆಯಲಿದೆ. ಬಳಿಕ ವಿವಿಧ ಸಂಗೀತ ವಿಭಾಗಗಳಿಗೆ ವಿದ್ಯಾರಂಭ, 10 ಗಂಟೆಗೆ ನಡೆಯಲಿರುವ ಸಂಗೀತೋತ್ಸವವನ್ನು ವಿಟ್ಲದ ಸುರಕ್ಷಾ ಹೆಲ್ತ್ ಸೆಂಟರಿನ ಡಾ.ಗೀತಾ ಪ್ರಕಾಶ್ ಎ. ಉದ್ಘಾಟಿಸುವರು. ಬಳಿಕ ನಡೆಯುವ ನಾದೋಪಾಸನೆಯಲ್ಲಿ ವಿದಾತ್ರಿ ಭಟ್ ಹಾಡುಗಾರಿಕೆ ನಡೆಸುವರು. ಕೊಳಲಿನಲ್ಲಿ ಅಭಿಷೇಕ್ ಎಂ.ಬಿ, ವಯೋಲಿನ್ ನಲ್ಲಿ ಪ್ರಭಾಕರ ಕುಂಜಾರು, ಮೃದಂಗದಲ್ಲಿ ಶ್ರೀಧರ ಭಟ್ ಬಡಕ್ಕೆಕರೆ ಹಾಗು ಬಳ್ಳಪದವು ಯೋಗೀಶ ಶಮರ್ಾ ಮತ್ತು ಘಟಂ ನಲ್ಲಿ ಕೃಷ್ಣನುಣ್ಣಿ ಕೈದಪ್ರಂ ಸಹಕರಿಸುವರು. ಅಪರಾಹ್ನ 12 ಗಂಟೆಗೆ ಸಮಾರಂಭದ ಅಂಗವಾಗಿ "ರ್ಯಾಲಿಪೋರ್ ರಿವಸರ್್" ಅವೇನರ್ೆಸ್(ನದಿಗಳ ರಕ್ಷಣೆಗೆ ಜಾಗೃತಿ ರ್ಯಾಲಿ) ಆಯೋಜಿಸಲಾಗಿದೆ ಎಂದು ನಾರಾಯಣೀಯಂ ನ ನಿದರ್ೇಶಕ ಯೋಗೀಶ ಶಮರ್ಾ ಬಳ್ಳಪದವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.