ಯಾವುದೇ ಶೀರ್ಷಿಕೆಯಿಲ್ಲ
0
ಸೆಪ್ಟೆಂಬರ್ 25, 2017
ಹಿರಿಯ ತಲೆಮಾರಿನ ಕಲಾವಿದರ ಸ್ಮರಣೆ ಪ್ರಸ್ತುತ-ನ್ಯಾ.ಕೆ.ಶ್ರೀಕಾಂತ್
ಬದಿಯಡ್ಕ: ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನವು ಈ ಮಣ್ಣಿನ ಸಂಸ್ಕಾರದ ಭಾಗ. ಯುವ ತಲೆಮಾರಿಗೆ ಪುರಾಣ, ಚರಿತ್ರೆಗಳನ್ನು ಕಲಿಸುವಲ್ಲಿ ಜನಸಾಮಾನ್ಯರಿಗೆ ಪೂರಕವಾಗಿ ಯಕ್ಷಗಾನ ಕಲೆ ಬೆಳೆದುಬಂದು ಸಾಮಾಜಿಕ, ಸಾಂಸ್ಕೃತಿಕ ನೆಲೆಗಟ್ಟನ್ನು ಭದ್ರಗೊಳಿಸಿದೆ ಎಂದು ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಅಭಿಪ್ರಾಯ ವ್ಯಕ್ತಪಡಿಸಿದರು.
ನೀಚರ್ಾಲು ಸಮೀಪದ ಮಾನ್ಯದ ಯಕ್ಷಾಭಿಮಾನಿಗಳು ಮಾನ್ಯ ಸಂಘಟನೆ ಭಾನುವಾರ ಹಮ್ಮಿಕೊಂಡ ಮಾನ್ಯ ರಾಮ ಸಂಸ್ಮರಣೆ, ಯಕ್ಷಗಾನ ಬಯಲಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಪರಂಪರೆ ಮತ್ತು ಶಾಸ್ತ್ರೀಯತೆಯ ಕಾರಣಗಳಿಂದ ಕಥೆಗಳನ್ನು ಅತ್ಯಂತ ಮನೋಜ್ಞವಾಗಿ ಬಿಂಬಿಸುವಲ್ಲಿ ಯಕ್ಷಗಾನಕ್ಕೆ ಸರಿಸಾಟಿಯಾದುದು ಬೇರೊಂದಿಲ್ಲ ಎಂದು ತಿಳಿಸಿದ ಅವರು ಆಧುನಿಕ ವ್ಯವಸ್ಥೆಗಳ ಮಧ್ಯೆ ಯಕ್ಷಗಾನ ಪ್ರಸಿದ್ದಗೊಂಡು ಬೆಳೆಯುತ್ತಿರುವುದು ಅತ್ಯಂತ ಸಂತಸಕರ ಎಂದು ತಿಳಿಸಿದರು. ಹಿರಿಯ ತಲೆಮಾರಿನ ಸಾಧಕ ಕಲಾವಿದರ ಸಂಸ್ಮರಣೆ ಪ್ರಸ್ತುತವಾಗಿದ್ದು, ಅವರ ಮೇಲ್ಪಂಕ್ತಿ ವರ್ತಮಾನವನ್ನು ಮುನ್ನಡೆಸುವುದು ಎಂದು ತಿಳಿಸಿದರು.
ಜ್ಯೋತಿಷಿ ಕೃಷ್ಣಮೂತರ್ಿ ಪುದುಕೋಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರಾವಳಿಯ ಸಾಂಸ್ಕೃತಿಕತೆಯ ದ್ಯೋತಕವಾಗಿ ಬೆಳೆದುಬಂದಿರುವ ಯಕ್ಷಗಾನವನ್ನು ಪರಂಪರೆಗೆ ಹಾನಿಯಾಗದಂತೆ ಬೆಳೆಸುವ ಅಗತ್ಯ ಇಂದಿದೆ ಎಂದು ತಿಳಿಸಿದರು. ಸಹೃದಯ ಪ್ರೇಕ್ಷಕರು ಮತ್ತು ಕಲಾವಿದರ ಅನುಸಂಧಾನ ಹೆಚ್ಚಿದಷ್ಟು ಪ್ರೇರಣಾತ್ಮಕವಾಗಿ ಕಲೆ ಉಳಿದುಬೆಳೆಯುವುದು, ಜೊತೆಗೆ ಹಿರಿಯ ತಲೆಮಾರಿನ ಮಾರ್ಗದರ್ಶನ, ಆ ನೆನಪುಗಳು ಕ್ರಿಯಾತ್ಮಕವಾಗಿ ಬೆಳೆಸುತ್ತದೆ ಎಂದು ತಿಳಿಸಿದರು.
ಪಾತರ್ಿಸುಬ್ಬ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು, ಉದ್ಯಮಿಗಳಾದ ಆರ್.ಕೆ. ಭಟ್ ಬೆಳ್ಳಾರೆ, ದಿನಕರ ಭಟ್ ಮಾವೆ, ವೇಣುಗೋಪಾಲ ತತ್ವಮಸಿ, ಮಂಜುನಾಥ ಡಿ.ಮಾನ್ಯ, ಸಂತೋಷ್ ಕುಮಾರ್ ಮಾನ್ಯ ಉಪಸ್ಥಿತರಿದ್ದು ಮಾತನಾಡಿದರು. ಕೆ.ಮಾನ ಮಾಸ್ತರ್ ಹಿರಿಯ ತಲೆಮಾರಿನ ಖ್ಯಾತ ಯಕ್ಷಗಾನ ಕಲಾವಿದ ಮಾನ್ಯ ರಾಮರ ಬಗ್ಗೆ ಸಂಸ್ಮರಣಾ ಭಾಷಣಗೈದರು. ಶ್ಯಾಮಪ್ರಸಾದ್ ಮಾನ್ಯ ಸ್ವಾಗತಿಸಿ, ವಿಜಯಕುಮಾರ್ ಮಾನ್ಯ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಮೊದಲು ಮತ್ತು ಬಳಿಕ ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದರ ಕೂಡುವಿಕೆಯಲ್ಲಿ ವಿವಿಧ ಕಥಾನಕಗಳ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.