HEALTH TIPS

ಯಾವುದೇ ಶೀರ್ಷಿಕೆಯಿಲ್ಲ

`ಡಾ.ಕಯ್ಯಾರರ ಕಾವ್ಯ ಸಮಕಾಲೀನ ಸ್ಥಿತಿಗತಿಗೆ ಕನ್ನಡಿ ಹಿಡಿಯುತ್ತದೆ' ಬದಿಯಡ್ಕ: ಶ್ರೀ ದೇವಿಯು ತನ್ನ ಒಂದೊಂದು ಅವತಾರಗಳಲ್ಲೂ ಒಂದೊಂದು ಸಂದೇಶವನ್ನು ನಮಗೆ ನೀಡುತ್ತಾಳೆ. ಈ ಪ್ರಪಂಚದಲ್ಲಿ ಸತ್ಯ, ನಿಷ್ಠೆ, ನ್ಯಾಯ, ಧರ್ಮಗಳನ್ನು ಅನುಸರಿಸಿ ಬಾಳುವವನಿಗೆ ನೆಮ್ಮದಿಯಿಂದ ಬದುಕಲು ಸಾಧ್ಯ. ಅಧರ್ಮದ ಮೇಲಿನ ಜಯವೇ ಈ ಆಚರಣೆಗಳು ಸಾರಿ ಹೇಳುವ ಸಂದೇಶಗಳಲ್ಲಿ ಅಡಕವಾಗಿರುವುದು. ಆರಾಧನೆಯ ಮಹತ್ವ ಹಾಗೂ ವೈಶಿಷ್ಟ್ಯತೆಗಳನ್ನು ಅಂತೆಯೇ ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಿದಾಗ ಮಾತ್ರ ಧಾಮರ್ಿಕ ಪ್ರಜ್ಞೆ ನೆಲೆನಿಲ್ಲಲು ಸಾಧ್ಯ ಎಂದು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು. ದಸರಾ ನಾಡಹಬ್ಬ ಸಮಿತಿ ಬದಿಯಡ್ಕ ಇದರ ಆಶ್ರಯದಲ್ಲಿ ರಾಮಲೀಲಾ ಯೋಗ ಶಿಕ್ಷಣ ಕೇಂದ್ರ ಬದಿಯಡ್ಕದಲ್ಲಿ ನಡೆದ ದಸರಾ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಾಬು ಮಾಸ್ತರ್ ಚಂಬಲ್ತಿಮಾರ್ ಅಧ್ಯಕ್ಷತೆ ವಹಿಸಿದ್ದು ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ನಾಡೋಜ ಡಾ.ಕಯ್ಯಾರ ಕಿಞಣ್ಣ ರೈ-ಒಂದು ನೆನಪು ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಅವರು ಮಾತನಾಡಿ, ಕರಾವಳಿಯ ಆಧುನಿಕ ಮಹಾಕವಿ ನಾಡೋಜ ಡಾ.ಕಯ್ಯಾರ ಕಿಞಣ್ಣ ರೈಗಳ ಕಾವ್ಯ ಸಮಕಾಲೀನ ಸ್ಥಿತಿಗತಿಗೆ ಕನ್ನಡಿ ಹಿಡಿಯುತ್ತಾ ಸಾರ್ವಕಾಲಿಕವಾಗಿ ಸಲ್ಲುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಯ್ಯಾರರ ಜೀವನ ಮತ್ತು ಸಾಧನೆ, ಉದಾತ್ತವಾದ ಆಶಯ ಮತ್ತು ಸಂದೇಶಗಳನ್ನೊಳಗೊಂಡಿದೆ. ಕವಿಯಾಗಿ, ಪತ್ರಿಕೋದ್ಯಮಿಯಾಗಿ, ಅಧ್ಯಾಪಕನಾಗಿ, ಕನ್ನಡ ಹೋರಾಟಗಾರನಾಗಿ, ಸಮಾಜಸೇವಕನಾಗಿ ಬಹುಮುಖೀ ಸಾಧನೆ ಮಾಡಿದವರು. ಅವರು ಒಬ್ಬ ವ್ಯಕ್ತಿ ಅಲ್ಲ, ಕನ್ನಡ ನಾಡು ಕಂಡ ಮಹಾನ್ ಶಕ್ತಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಸನ್ನ ರೈ ಕೆ. ಉಪಸ್ಥಿತರಿದ್ದರು. ನಂತರ ಕಾವ್ಯ ವಾಚನ-ವ್ಯಾಖ್ಯಾನವನ್ನು ವಿದ್ವಾನ್ ಸುಬ್ರಹ್ಮಣ್ಯ ಭಟ್ ಉಪ್ಪಂಗಳ ಹಾಗೂ ಬೆಳ್ಳಿಗೆ ನಾರಾಯಣ ಮಣಿಯಾಣಿ ನಡೆಸಿಕೊಟ್ಟರು. ಬಳಿಕ ಬಾಲಕೃಷ್ಣ ಮಾಸ್ತರ್ ಮಂಜೇಶ್ವರರ ಶಿಷ್ಯೆಯಾದ ಅನೀಶಾ ಕನಕಪ್ಪಾಡಿ ಅವರಿಂದ ಭರತನಾಟ್ಯ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries