ಯಾವುದೇ ಶೀರ್ಷಿಕೆಯಿಲ್ಲ
0
ಸೆಪ್ಟೆಂಬರ್ 25, 2017
ಅಖಿಲ ಭಾರತ ಸಾ"ತ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರೊ.ಚಂಪಾ ಆಯ್ಕೆ*
ಕುಂಬಳೆ: ಮೈಸೂರಿನಲ್ಲಿ ನಡೆಯಲಿರುವ ಅಖಿಲ ಭಾರತ 83 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅವರು ಬಹುಮತದಿಂದ ಆಯ್ಕೆ ಆಗಿದ್ದಾರೆ. ಮಂಗಳೂರಿನಲ್ಲಿ ಸೋಮವಾರ ಮುಂಜಾನೆ ನಡೆದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಆಯ್ಕೆ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ವೀಣಾ ಸಾಂತೇಶ್ವರ ಧಾರವಾಡ, ಡಾ. ಚೆನ್ನಣ್ಣ ವಾಲೀಕಾರ ರಾಯಚೂರು, ಡಾ. ಎನ್.ಆರ್.ನಾಯಕ ಉತ್ತರ ಕನ್ನಡ, ಸಾರಾ ಅಬೂಬಕ್ಕರ್ ಮಂಗಳೂರು ಮುಂತಾದವರ ಹೆಸರು ಪ್ರಸ್ತಾಪವಾಗಿ ಕೊನೆಗೆ ಬಹುಮತದಲ್ಲಿ ಪ್ರೊ. ಚಂಪಾ ಹೆಸರನ್ನು ರಾಜ್ಯಾಧ್ಯಕ್ಷರು ಘೋಶಿಸಿದರು. ಸಭೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಕ.ಸಾ.ಪ. ಅಧ್ಯಕ್ಷರು, ಹೊರ ರಾಜ್ಯ ಘಟಕಗಳ ಅಧ್ಯಕ್ಷರು ಪಾಲ್ಗೊಂಡಿದ್ದರು.