ಯಾವುದೇ ಶೀರ್ಷಿಕೆಯಿಲ್ಲ
0
ಸೆಪ್ಟೆಂಬರ್ 19, 2017
http://samarasasudhi.blogspot.in/2017/09/blog-post_19.html
ಮರೆಯಾಗದಿರಲಿ ನಮ್ಮ ನಾಡಹಬ್ಬ
ಕೇರಳದ ನಾಡು ನುಡಿಯ ಹಬ್ಬವಾದ ಓಣಂ ಈ ವರ್ಷ ವ್ಯಾಪಕ ಪ್ರಮಾಣದಲ್ಲಿ ಆಚರಿಸಲ್ಪಡುವ ಮೂಲಕ ಮೈಲುಗಲ್ಲನ್ನೇ ಸ್ಥಾಪಿಸಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಕಾರಣ ಗಡಿನಾಡು ಕಾಸರಗೋಡಿನ ಬಹುತೇಕ ಶಾಲೆಗಳಲ್ಲಿ ಕಳೆದ ಬಾರಿಗಿಂತಲೂ ಅದ್ದೂರಿಯಾಗಿ ಓಣಂ ಆಚರಿಸಲ್ಪಟ್ಟಿದೆ. ಕೇರಳ ರಾಜ್ಯದೊಳಗಿದ್ದು ಇದು ಸಾದುವಾದರೂ, ಗಡಿನಾಡು ಕಾಸರಗೋಡಿನ ಅಲ್ಪಸಂಖ್ಯಾತ ಕನ್ನಡಿಗರ ಮೇಲೆ ಮಲೆಯಾಳ ಭಾಷೆ, ಸಂಸ್ಕೃತಿಯನ್ನು ಅರಿವಿಲ್ಲದಂತೆ ಹೇರುವ ಭಾಗವಾಗಿ ಈ ಆಚರಣೆಯನ್ನು ಇಲ್ಲಿಯ ಕನ್ನಡ ಶಾಲೆಗಳಲ್ಲೂ ಮಾಡಿಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಂಡಿರುವರೇ ಎಂಬ ಅನುಮಾನ ಜಿಲ್ಲೆಯಾದ್ಯಂತ ದಟ್ಟವಾಗಿದೆ.
ನಾಡಹಬ್ಬ ಮರೆಯಾಗುವ ಭೀತಿ:
ಕಾಸರಗೋಡಿನ ಬಹುತೇಕ ಶಾಲೆಗಳಲ್ಲಿ ಒಂದೆರಡು ದಶಕಗಳ ಹಿಂದೆ ನವರಾತ್ರಿ ದೀಪಾವಳಿಯ ಸಂದರ್ಭ ನಾಡಹಬ್ಬವಾಗಿ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳು ವಿಫುಲವಾಗಿ ನಡೆಯುತ್ತಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಇದು ಬಹುತೇಕ ಕುಂಠಿತಗೊಂಡಿರುವುದು ಇಲ್ಲಿಯ ಕನ್ನಡದ ಸಾಂಸ್ಕೃತಿಕ ಅಧಃಪತನದ ಸೂಚಕವಾಗಿ ಕೆಲವರು ಗುರುತಿಸುತ್ತಾರೆ. ಪ್ರಸ್ತುತ ಕೆಲವು ವರ್ಷಗಳಿಂದ ಪೈವಳಿಕೆ, ಕಾಸರಗೋಡು ಸರಕಾರಿ ಕಾಲೇಜು, ಬದಿಯಡ್ಕದಲ್ಲಿ ಮಾತ್ರ ನಾಡಹಬ್ಬ ಆಚರಿಸಲ್ಪಡುತ್ತಿದ್ದು, ಜಿಲ್ಲೆಯ ಸುಮಾರು 180ಕ್ಕಿಂತಲೂ ಮಿಕ್ಕಿರುವ ಕನ್ನಡ ಶಾಲೆಗಳಲ್ಲಿ ನಾಡಹಬ್ಬದ ಏನೊಂದು ಚಟುವಟಿಕೆಗಳೂ ನಡೆಯುತ್ತಿಲ್ಲ.
ಕೋಟ್ಸ್:
ಗಡಿನಾಡ ಕನ್ನಡಿಗರಲ್ಲಿ ಅಂತಸ್ಸತ್ವದ ಪ್ರಜ್ಞೆಯ ಕೊರತೆಯಿದೆ. ಕನ್ನಡ ನಾಡು-ನುಡಿಯ ಬಗ್ಗೆ ಗೌರವಾಧಾರಗಳು ಕುಂದುತ್ತಿರುವ ಕಾರಣ ದಸರಾ, ದೀಪಾವಳಿ ಹಬ್ಬಗಳ ಬಗ್ಗೆ ಆಸಕ್ತಿಯಿಲ್ಲ. ಓಣಂ ಆಚರಿಸಬಾರದೆಂದಲ್ಲ. ಆದರೆ ಅತಿ ಮೀರಿದ ಮಹತ್ವದಿಂದ ಶಾಲೆ ಶಾಲೆಗಳಲ್ಲಿ ಆಚರಿಸುವ ಅಗತ್ಯತೆ ಇಲ್ಲ.ನಮ್ಮದೇ ಹಬ್ಬಾಚರಣೆಗಳಿರುವಾಗ ಅದನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಜೊತೆಗೆ ಅದಕ್ಕೆ ಗಿಡನೆಡುವುದು, ಆರೋಗ್ಯ ಅರಿವು ಕಾರ್ಯಕ್ರಮ, ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮುಂತಾದ ಸಾಮಾಜಿಕ ಚಟುವಟಿಕೆಗಳನ್ನು ಜೋಡಿಸಿ ಹೆಚ್ಚು ಸಮಾಜಮುಖಿಯಾಗಿ ಆಚರಿಸಬೇಕು. ಇದಕ್ಕಾಗಿ ಸ್ಥಳೀಯ ಸಂಘಟನೆಗಳು ಕೈಜೋಡಿಸಬೇಕು. ಹೀಗಾದರೆ ಮಾತ್ರ ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಉಳಿದು ಬೆಳೆಯಬಲ್ಲುದು.
ಡಾ.ನರೇಶ್ ಮುಳ್ಳೇರಿಯಾ
ಸಾಹಿತಿ, ಬರಹಗಾರ, ಕನ್ನಡ ಹೋರಾಟಗಾರ.
......................................................................................................................................................
ಕೋಟ್ಸ್:
ನಮ್ಮದೇ ಹಬ್ಬಗಳು ದೀಪಾವಳಿ ಮತ್ತು ದಸರಾ ನಾಡುಹಬ್ಬಗಳಿರುವಾಗ ಅದಕ್ಕೆ ಯಾವುದೇ ಮಹತ್ವ ನೀಡದೆ ರಾಜ್ಯ ಭಾಷೆಯೆಂಬ ಕುರುಡು ಪ್ರೇಮದಿಂದ ಓಣಂ ಆಚರಿಸುವುದರಿಂದ ಏನೂ ಸಾಧಿಸಿದಮತಾಗುವುದಿಲ್ಲ. ಪ್ರತಿಯೊಬ್ಬ ಕನ್ನಡಿಗನೂ ಕನ್ನಡ ಭಾಷೆ ಸಂಸ್ಕೃತಿಯ ಮೇಲೆ ಅಪರಿಮಿತ ಶ್ರದ್ದೆಯಿಂದ ಮುಂದಿನ ತಲೆಮಾರಿಗೆ ಅದನ್ನು ದಾಟಿಸುವ ಜವಾಬ್ದಾರಿಯ ಪರಿಕಲ್ಪನೆಯಡಿ ದಸರಾ ನಾ ಹಬ್ಬ, ದೀಪಾವಳಿಯನ್ನು ಆಚರಿಸಬೇಕು. ಓಣಂ ಬೇಡವೆಂದಲ್ಲ. ಮಿತಿಗೊಳಪಟ್ಟಿದ್ದರೆ ಸಾಕು.
ಎರಡು ವರ್ಷಗಳ ಹಿಂದೆ ಜಿಲ್ಲಾ ಶಿಕ್ಷಣ ಉಪನಿದರ್ೇಶಕರು ಗಡಿನಾಡಿನ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಕಳಿಸಿದ್ದು, ಅದರಲ್ಲಿ ದಸರಾ ನಾಡಹಬ್ಬವನ್ನು ಕಡ್ಡಾಯವಾಗಿ ಕನಿಷ್ಠ ಒಂದು ದಿನವಾದರೂ ಆಚರಿಸಲು ಆದೇಶಿಸಿದ್ದರು. ಅವರ ಆದೇಶ ಎಲ್ಲೂ ಜಾರಿಗೊಂಡಿಲ್ಲ. ಬೆರಳೆಣಿಕೆಯ ಶಾಲೆಗಳು, ಅದೂ ಆದೇಶ ಬರುವ ಮೊದಲೇ ಆಚರಿಸುತ್ತಿದ್ದ ಶಾಲೆಗಳಲ್ಲಿ ದಸರಾ ನಾಡಹಬ್ಬ ನಡೆದುಬರುತ್ತಿದೆ. ಈ ಬಗ್ಗೆ ಜಾಗೃತಿ ಅಗತ್ಯವಿದೆ.
ಎಸ್.ವಿ. ಭಟ್
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷರು.ಕಾಸರಗೋಡು.
(ಪೋಟೋದ ಬಗ್ಗೆ:ಬಿಡಿಕೆ_06 ಸೆಪ್ಟಂಬರ್_01(1) ಪೋಟೋದಲ್ಲಿ ಓಣಂ ನಾಯಕನೆಂದೇ ಜನಜನಿತವಾಗಿರುವ ಮಾವೇಲಿ(ಮಹಾಬಲಿ) ಗೆ ಮಹತ್ವವಿದ್ದು, ಮಾವೇಲಿಯ ವೇಶಧರಿಸಿ ಮನೆಮನೆ ಭೇಟಿ ಸಹಿತ ವಿವಿಧ ಕಾರ್ಯಕ್ರಮಗಳು ಕೇರಳದಾತ್ಯಂತ ನಡೆಯುತ್ತವೆ. ಆದರೆ ಈ ಹಿಂದೆ ಮಾವೇಲಿ ತಿರುವನಂತಪುರದಿಂದ ಕಣ್ಣೂರಿನ ವರೆಗೆ ಮಾತ್ರ ತನ್ನ ಕಾರ್ಯ ವ್ಯಾಪ್ತಿಹೊಂದಿದವನಾಗಿದ್ದು, ಕಾಸರಗೋಡು ಮೂಲತಃ ಕನರ್ಾಟಕದೊಳಗಿನ ಭಾಗವಾಗಿದ್ದು, ಬಳಿಕ ಕೇರಳಕ್ಕೆ ಸೇರಿದ್ದರೂ ಕನ್ನಡಿಗರು ಕೇರಳದ ಹಬ್ಬಕ್ಕೆ ಅಷ್ಟೊಂದು ಮಹತ್ವ ನೀಡದಿರುವುದರಿಂದ ಗಡಿನಾಡಿನತ್ತ ಮುಖ ಮಾಡುತ್ತಿರಲಿಲ್ಲ. ಆದರೆ ವರ್ಷದಿಂದ ವರ್ಷಕ್ಕೆ ಕಾಸರಗೋಡಿನಲ್ಲೂ ಜನಪ್ರೀಯವಾಗುತ್ತಿರುವ ಓಣಂ ಆಚರಣೆಯ ಕಾರಣ ನಿವರ್ಾಹವಿಲ್ಲದೆ ಮಾವೇಲಿ ಗಡಿನಾಡಿಗೂ ಸಂದರ್ಶನ ನಡೆಸಬೇಕಾಗಿದ್ದುರಿಂದಲೋ ಏನೋ......ಬಹಳ ಸುಸ್ತಾದವನಂತೆ ಮಲಗಿರುವ ಚಿತ್ರ........)