samarasa editorial
0
ಸೆಪ್ಟೆಂಬರ್ 19, 2017
ಇಂದು ಏನಿದ್ದರೂ ಬೆಳೆದಿರುವ ಸಮೂಹ ಮಾಧ್ಯಮಗಳ ಪ್ರಪಂಚ ದಿನಬೆಳಗಾದರೆ ಆಬಾಲ ವೃದ್ದರಾಗಿ ಸಮಾಜದ ಪ್ರತಿಯೊಬ್ಬರಲ್ಲೂ ಮೂಡಿಸಿರುವ ಬದಲಾವಣೆಗಳು ಏರುಗತಿಯಲ್ಲಿದೆ. ವಿವಿಧ ವಿಭಾಗಗಳಲ್ಲಾಗಿ ನಾವು ಸಂವಾದಿಸುವ ನಮ್ಮ ಪ್ರಕ್ರಿಯೆಗಳು ಅಪರಿಮಿತಗೊಂಡು ಜಗತ್ತನ್ನು ನಿಕಟಗೊಳಿಸಿದೆ. ಹಲವು ಪಾರಂಪರಿಕತೆಗಳು ಹೊಸತನದ ಲೇಪದೊಂದಿಗೆ ಮತ್ತೆಮತ್ತೆ ಚಚರ್ೆ, ಸಮವಾದಗಳನ್ನು ಸೃಷ್ಟಿಸುತ್ತಿದೆ. ವ್ಯಕ್ತಿಯ ಈ ಬದಲಾವಣೆ ಖಾಸಗೀತನದ ಆಚೆಗೆ ಸರಿದು ಯೋಚನೆಗೀಡು ಮಾಡುತ್ತಿದೆ ಕೂಡಾ.
ಇಂದು ನಮ್ಮಲ್ಲಿರುವ ದೊಡ್ಡ ಯಕ್ಷಪ್ರಶ್ನೆಯೆಂದರೆ ಯಾವುದನ್ನು ಸಮೂಹದೊಡನೆ ಹಂಚಬೇಕು,ಯಾಕೆ ಹಂಚಬೇಕು ಮತ್ತು ಎಷ್ಟು ಹಂಚಬೇಕೆಂಬ ನಿಧರ್ಾರಗಳಿರದೆ ಗಾಳಿಸುವಿಕೆ ಇಲ್ಲದ ಜೊಳ್ಳು-ಹೊಟ್ಟುಗಳಿಂದ ಕೂಡಿದ ವಿಷಯ ಹಂಚಿಕೆ ಸಾಮಾಜಿಕ ಅಸ್ತಿರತೆಯನ್ನು ಸೃಸ್ಟಿಸಿತ್ತಿರುವುದನ್ನೂ ಗಮನಿಸಬೇಕಾದ ಅನಿವಾರ್ಯತೆಯಿದೆ. ಅರಿವಿನಿಂದಾಚೆಗಿನ ಯೋಚನೆ, ಸಂವಾದಗಳು ಇಂದಿನ ಟ್ರೆಂಡ್ ಆಗಿದ್ದರೂ, ಅದರ ಸಾಧಕ ಬಾಧಕಗಳ ಚಿಂತನೆ ಆಗಬೇಕಿದೆ.
ಈ ಹಿನ್ನೆಲೆಯಲ್ಲಿ ನನ್ನ ವ್ಯಾಪ್ತಿಯೊಳಗೆ-ಮಿತಿಯೊಳಗೆ ಸಾಮಾಜಿಕ ಸಂವಾದಗಳನ್ನು ಹೊಸ ದಿಶೆಯಲ್ಲಿ ಮೂಡಿಸುವ ಯತ್ನದ ಭಾಗವಾಗಿ "ಸಮರಸಸುದ್ದಿ" ಬ್ಲಾಗಿನದ ಬಾಗಿಲನ್ನು ನಿಯಮಿತವಾಗಿ ಆರಂಭಿಸುತ್ತಿದ್ದೇನೆ. ನಿಮ್ಮೆಲ್ಲರ ಸಹಾಯ, ಸಹಕಾರದ ನಿರೀಕ್ಷೆ ಇದ್ದೇ ಇದೆ. ಇದು ವ್ಯಾಪಾರೀ ದೃಷ್ಟಿ ರಹಿತವಾಗಿ ಕೇವಲ ಸಾಮಾಜಿಕ ಬದಲಾವಣೆಗೆ ನನ್ನ ಒಳತೋಟಿಯನ್ನು ಹಂಚುವ ಯತ್ನ ಮಾತ್ರ.
by...Editor