ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 29, 2017
ಕುಂಬಳೆಯಲ್ಲಿ ಪ್ರತಿಭಾ ಕೇಂದ್ರ ಉದ್ಘಾಟನೆ
ಕುಂಬಳೆ: ಕುಂಬಳೆ ಗ್ರಾಮ ಪಂಚಾಯತು ಹಾಗೂ ಬ್ಲಾಕ್ ಸಂಪನ್ಮೂಲ ಕೇಂದ್ರ(ಬಿ ಆರ್ ಸಿ)ದ ನೇತೃತ್ವದಲ್ಲಿ ಕುಂಬಳೆ ಕುಂಟ0ಗೇರಡ್ಕ ಹಿಂದುಳಿದ ವಿಭಾಗ(ಎಸ್ ಟಿ) ಕಾಲನಿಯ ಸಮುದಾಯ ಭವನದಲ್ಲಿ ಹಿಂದುಳಿದ ವರ್ಗ ಹಾಗು ವಿಭಾಗದ ಎರಡರಿಂದ ಏಳನೆ ತರಗತಿವರೆಗೆ ಕಲಿಯುತ್ತಿರುವ ಮಕ್ಕಳಿಗೆ ಅವರ ಕಲಿಕೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ಅವರಿಗೆ ಇರುವ ವಿಶೇಷ ಸಾಮಾಥ್ಯ9ವನ್ನು ಪತ್ತೆ ಹಚ್ಚಿ ಮುಖ್ಯಧಾರೆಗೆ ಕರೆತರಲು ವಿಶೇಷ ಯೋಜಯಾದ ಪ್ರತಿಭಾ ಕೇಂದ್ರದ ಉದ್ಘಾಟನೆಯನ್ನು ಕುಂಬಳೆ ಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ .ಕೆ.ಎಲ್ ಭಾನುವಾರ ನೆರವೇರಿಸಿದರು.
ಪ್ರತಿಭಾ ಕೇಂದ್ರ ಉದ್ಘಾಟಿಸಿದ ಕೆ.ಎಲ್ ಪುಂಡರೀಕಾಕ್ಷ ಮಾತನಾಡಿ, ಮಕ್ಕಳ ಕಲಿಕೆಗೆ ಆಸ್ಪದ ನೀಡಿ ಬಿಡುವಿನ ಸಮಯದಲ್ಲಿ ಅವರವರ ಸೃಜನಾತ್ಮಕತೆಯನ್ನು ಒರೆಗೆ ಹಚ್ಚುವಲ್ಲಿ ಕೇಂದ್ರ ಸಹಾಯಕವಾಗಲಿ ಎಂದು ಹಾರೈಸಿದರು.
ಬಿ ಆರ್ ಸಿ ಸಂಯೋಜಕ ಕೇಶವ ಮಾಸ್ತರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಯೋಜನೆಯ ವಿವರಗಳನ್ನು ನೀಡಿದರು.ಈ ಸಂದರ್ಭ ವಿಶೇಷ ಕಲಿಕಾ ಸಾಮಥ್ರ್ಯ ತೊರಿಸಿದ ವಿದ್ಯಾಥರ್ಿಗಳನ್ನು ಅಭಿನಂದಿಸಲಾಯಿತು. ಜಿಡಬ್ಲುಎಲ್ಪಿ ಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರ ಭಟ್ ಸ್ವಾಗತಿಸಿ, ಅಧ್ಯಾಪಿಕೆ ಸೌಮ್ಯ ವ0ದಿಸಿದರು.