ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 11, 2017
ಜನವರಿಯಲ್ಲಿ 105ನೇ ಭಾರತೀಯ ವಿಜ್ಞಾನ ಸಮ್ಮೇಳನ
ಕೊಯಂಬತ್ತೂರು : ಮುಂದಿನ ವರ್ಷ ಜನವರಿ 3ರಂದು ಹೈದರಾಬಾದ್ನಲ್ಲಿ ನಡೆಯಲಿರುವ 105ನೇ ಭಾರತೀಯ ವಿಜ್ಞಾನ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.
ಐದು ದಿನ ನಡೆಯುವ ಈ ಸಮ್ಮೇಳನದಲ್ಲಿ ದೇಶ ವಿದೇಶಗಳ ಸಂಶೋಧಕರು, ವಿಜ್ಞಾನಿಗಳು ಪಾಲ್ಗೊಳ್ಳಲಿದ್ದಾರೆ. ಕೃಷಿ, ಗ್ರಾಮೀಣ ಅಭಿವೃದ್ಧಿ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಚಚರ್ಿಸಿ, ಪರಿಹಾರಗಳಿಗೆ ಸಲಹೆ ನೀಡುತ್ತಾರೆ ಎಂದು ಭಾರತೀಯ ವಿಜ್ಞಾನ ಸಮ್ಮೇಳ ಸಂಘಟನೆ (ಐಎಸ್ಸಿಎ) ಅಧ್ಯಕ್ಷ ಡಾ. ಮನೋಜ್ ಕುಮಾರ್ ಚಕ್ರವತರ್ಿ ತಿಳಿಸಿದ್ದಾರೆ.
ಯುವವಿಜ್ಞಾನಿಗಳಿಗೆ ಪ್ರೋತ್ಸಾಹ ನೀಡುವ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲು ಪ್ರತ್ಯೇಕ ಗೋಷ್ಠಿ ಇರುತ್ತದೆ. ಅತ್ಯುತ್ತಮ ಸಂಶೋಧನಾ ಪ್ರಬಂಧಗಳಿಗೆ ?25,000 ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ.
ಲಿಥಿಯಂ ಬೇಡ, ಜಲಜನಕ ಇಂಧನ ಬಳಸಿ: ಮಾಧವನ್ ನಾಯರ್ ಸಲಹೆ
ಜಲಜನಕ ಆಧರಿತ ಇಂಧನವೇ ಮುಂದಿನ ತಲೆಮಾರುಗಳಲ್ಲಿ ಮುಖ್ಯ ಇಂಧನವಾಗಿ ಬಳಕೆಯಾಗಲಿದೆ. ಹಾಗಾಗಿ ದೂರಗಾಮಿ ದೃಷ್ಟಿಕೋನದಿಂದ ಪಯರ್ಾಯ ಇಂಧನವಾಗಿ ಇದನ್ನು ಬಳಸುವುದೇ ಸರಿಯಾದ ಕ್ರಮ ಎಂದು ಹಿರಿಯ ವಿಜ್ಞಾನಿಗಳು ಹೇಳಿದ್ದಾರೆ. ಬ್ಯಾಟರಿ ಚಾಲಿತ ವಾಹನ ಬಳಕೆಗೆ ಕೇಂದ್ರ ಸಕರ್ಾರವು ಭಾರಿ ಪ್ರೋತ್ಸಾಹ ನೀಡುತ್ತಿರುವುದರ ನಡುವೆಯೇ ಈ ಅಭಿಪ್ರಾಯ ವ್ಯಕ್ತವಾಗಿದೆ.
ಭಾರತೀಯ ಬಾಹ್ಯಾಕಾಶ ಸಂಸ್ಥೆಯು (ಇಸ್ರೊ) ಪ್ರಾತ್ಯಕ್ಷಿಕೆಗಾಗಿ ಜಲಜನಕ ಆಧರಿತ ಬಸ್ಸೊಂದನ್ನು ಅಭಿವೃದ್ಧಿಪಡಿಸಿದೆ ಎಂದು ಇಸ್ರೊದ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಹೇಳಿದ್ದಾರೆ. ಹಲವು ವರ್ಷಗಳ ಸಂಶೋಧನೆ ಬಳಿಕ ಇಸ್ರೊ ಮತ್ತು ಟಾಟಾ ಮೋಟಸರ್್ ಜತೆಯಾಗಿ ಈ ಬಸ್ಸನ್ನು ಅಭಿವೃದ್ಧಿಪಡಿಸಿವೆ ಎಂದು ಅವರು ತಿಳಿಸಿದರು.
2030ರ ಹೊತ್ತಿಗೆ ದೇಶದಲ್ಲಿರುವ ಎಲ್ಲ ಕಾರುಗಳು ಬ್ಯಾಟರಿ ಚಾಲಿತ ಆಗಬೇಕು ಎಂಬ ಗುರಿಯನ್ನು ಸಕರ್ಾರ ಹಾಕಿಕೊಂಡಿದೆ. ಇಂಧನ ಆಮದು ಪ್ರಮಾಣ ಮತ್ತು ವಾಹನಗಳ ನಿರ್ವಹಣಾ ವೆಚ್ಚ ಕಡಿಮೆ ಮಾಡುವುದು ಇದರ ಉದ್ದೇಶ. ಇದಕ್ಕಾಗಿ ಬ್ಯಾಟರಿ ಚಾಲಿತ ವಾಹನಗಳ ಮಾರಾಟಕ್ಕೆ ಸಕರ್ಾರ ಒತ್ತು ನೀಡುತ್ತಿದೆ. ಅದಕ್ಕಾಗಿ ಫೇಮ್ ಇಂಡಿಯಾದಂತಹ ಯೋಜನೆಗಳನ್ನೂ ಹಾಕಿಕೊಳ್ಳಲಾಗಿದೆ.
10 ಸಾವಿರ ವಿದ್ಯುತ್ ಚಾಲಿತ ಬಸ್ಗಳನ್ನು ಖರೀದಿ ಮಾಡುವುದಾಗಿ ಸಕರ್ಾರಿ ಸ್ವಾಮ್ಯದ ಎನಜರ್ಿ ಎಫೀಷಿಯೆನ್ಸಿ ಸವರ್ಿಸಸ್ ಲಿ. (ಇಇಎಸ್ಎಲ್) ಕಳೆದ ತಿಂಗಳು ಹೇಳಿತ್ತು. 2030ಕ್ಕೆ ದೇಶದಲ್ಲಿರುವ ಎಲ್ಲ ವಾಹನಗಳು ವಿದ್ಯುತ್ ಚಾಲಿತ ಆಗಿರಬೇಕು ಎಂಬ ಗುರಿ ಸಕರ್ಾರಕ್ಕೆ ಇದೆ ಎಂದು ಇತ್ತೀಚಿನವರೆಗೆ ವಿದ್ಯುತ್ ಸಚಿವರಾಗಿದ್ದ ಪೀಯೂಷ್ ಗೋಯಲ್ ಹೇಳಿದ್ದರು.
ಪರಿಸರಸ್ನೇಹಿ, ಪಯರ್ಾಯ ಇಂಧನ ಬಳಕೆಯ ವಾಹನಗಳನ್ನು ಅಭಿವೃದ್ಧಿಪಡಿಸುವಂತೆ ವಾಹನ ತಯಾರಕರಿಗೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಲಹೆ ನೀಡಿದ್ದರು. ಸಕರ್ಾರದ ನಿಲುವು ಸ್ಪಷ್ಟವಾಗಿದೆ. ಪಯರ್ಾಯ ಮಾರ್ಗವನ್ನು ಅನುಸರಿಸಿದ್ದರೆ ವಾಹನ ತಯಾರಿಕಾ ಕಂಪೆನಿಗಳಿಗೆ ಉಳಿಗಾಲವಿಲ್ಲ. ಮತ್ತೆ ಸಕರ್ಾರವನ್ನು ದೂರಿ ಪ್ರಯೋಜನವಾಗದು ಎಂಬ ಅರ್ಥದ ಮಾತನ್ನು ಗಡ್ಕರಿ ಆಡಿದ್ದರು.
ಆದರೆ, ಲಿಥಿಯಂ ಅಯಾನ್ ಬ್ಯಾಟರಿ ಬಳಸುವ ವಾಹನಗಳ ಬಳಕೆ ಹೆಚ್ಚಾದಂತೆ ಭಾರಿ ಸಮಸ್ಯೆ ಸೃಷ್ಟಿಯಾಗಬಹುದು ಎಂಬ ಎಚ್ಚರಿಕೆಯನ್ನು ನಾಯರ್ ಅವರು ಈಗ ನೀಡಿದ್ದಾರೆ. ಲಿಥಿಯಂ ಅಪಾಯಕಾರಿಯಾಗಿದ್ದು ಅದನ್ನು ಎಲ್ಲೆಂದರಲ್ಲಿ ಎಸೆಯುವುದಕ್ಕೆ ಸಾಧ್ಯವಿಲ್ಲ. ಅದು ಅತ್ಯಂತ ಮಾಲಿನ್ಯ ಕಾರಕ ವಸ್ತು. ಅದನ್ನು ಸಂಗ್ರಹಸಿ, ಸಂಸ್ಕರಿಸಲು ಸಮರ್ಪಕ ವ್ಯವಸ್ಥೆ ಅಗತ್ಯ ಎಂದು ಅವರು ಹೇಳಿದ್ದಾರೆ.
`ಲಕ್ಷಾಂತರ ವಾಹನಗಳು ಈ ಬ್ಯಾಟರಿ ಬಳಸಿದರೆ ಬಳಕೆಯ ಬಳಿಕ ಈ ಬ್ಯಾಟರಿಗಳನ್ನು ಏನು ಮಾಡುವುದು? ಅವು ಅಪಾಯಕಾರಿ ಮಾಲಿನ್ಯ ಸೃಷ್ಟಿಸುತ್ತವೆ' ಎಂದು ಅವರು ಎಚ್ಚರಿಸಿದ್ದಾರೆ. ಜತೆಗೆ, ಲಿಥಿಯಂ ಲಭ್ಯತೆ ಸೀಮಿತವಾಗಿದೆ. ಹಾಗಾಗಿಯೇ ಇಂತಹ ವಾಹನಗಳು ದುಬಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜಲಜನಕ ಆಧರಿತ ಇಂಧನ ಬಳಕೆಯಿಂದ ವಾಹನಗಳು ಮಾಲಿನ್ಯ ಸೃಷ್ಟಿಸುವುದಿಲ್ಲ. ಇಂತಹ ವಾಹನಗಳು ನೀರಿನ ಆವಿಯನ್ನು ಮಾತ್ರ ಹೊರಗೆ ಉಗುಳುತ್ತವೆ ಎಂದು ಅವರು ಹೇಳಿದ್ದಾರೆ.
ಜಲಜನಕ ಬಳಕೆ ಹೇಗೆ
ವಾಹನದಲ್ಲಿ ಜಲಜನಕವನ್ನು ಸಾಂದ್ರೀಕೃತ ರೂಪದಲ್ಲಿ ಇರಿಸಲಾಗುತ್ತದೆ. ವಾತಾವರಣದಲ್ಲಿರುವ ಆಮ್ಲಜನಕದ ಜತೆ ಸಂಯೋಜನೆಗೊಳ್ಳುವ ಇದು ವಾಹನದಲ್ಲಿರುವ ಇಂಧನ ಕೋಶಗಳಿಗೆ ಶಕ್ತಿ ಒದಗಿಸುತ್ತದೆ. ಈ ಕೋಶಗಳು ವಾಹನದ ಮೋಟರ್ಗೆ ಇಂಧನ ಒದಗಿಸುತ್ತವೆ.
ಲಿಥಿಯಂ ಬಳಕೆ ಕಷ್ಟ
ಲಿಥಿಯಂ ನಿರ್ವಹಣೆ ಬಹಳ ಕಷ್ಟ. ಅದಕ್ಕೆ ತೇವಾಂಶ ಇಲ್ಲದ ಪರಿಸರವೇ ಬೇಕು. ಲಿಥಿಯಂ ಬ್ಯಾಟರಿಗಳ ಗರಿಷ್ಠ ಬಾಳಿಕೆ 10 ವರ್ಷ. ವಾಹನಗಳ ಬ್ಯಾಟರಿಯಷ್ಟೇ ಗಾತ್ರದ ಸಾಧನವು ಜಲಜನಕವನ್ನು ವಿದ್ಯುತ್ತಾಗಿ ಪರಿವತರ್ಿಸುತ್ತದೆ