HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಕೇಂದ್ರಕ್ಕೆ ಸಲಹೆ ಕೇಳಿದ ಸುಪ್ರೀಂ ದೆಹಲಿ:20 ವಾರಗಳ ನಂತರ ಗರ್ಭಪಾತ ಮಾಡಲೇಬೇಕಾದ ಅನಿವಾರ್ಯತೆ ಉಂಟಾದಾಗ ತೆಗೆದುಕೊಳ್ಳಬಹುದಾದ ಕ್ರಮಗಳ ಶಾಶ್ವತ ವ್ಯವಸ್ಥೆಯೊಂದನ್ನು ರೂಪಿಸುವುದಕ್ಕಾಗಿ ಮಾರ್ಗದಶರ್ಿ ಸೂತ್ರಗಳನ್ನು ರಚಿಸಲು ಸುಪ್ರೀಂಕೋಟರ್್ ಕೇಂದ್ರ ಸರಕಾರದ ಸಲಹೆಯನ್ನು ಕೇಳಿದೆ. ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ಅವರ ನೇತೃತ್ವದ ಪೀಠವು ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ, ಭಾರತೀಯ ವೈದ್ಯಕೀಯ ಮಂಡಳಿಗೆ ನೋಟಿಸ್ ನೀಡಿದ್ದು, ನಾಲ್ಕು ವಾರಗಳ ಒಳಗೆ ಉತ್ತರಿಸುವಂತೆ ಸೂಚಿಸಿದೆ. ಆದರೆ, 20 ವಾರಗಳ ನಂತರ ಗರ್ಭಪಾತಕ್ಕೆ ಅನುಮತಿ ನಿರಾಕರಿಸುವ 1971ರ ವೈದ್ಯಕೀಯ ಗರ್ಭಪಾತ ಕಾಯಿದೆಯಲ್ಲಿ ಯಾವುದೇ ತಿದ್ದುಪಡಿ ಮಾಡಲು ನಿರಾಕರಿಸಿದೆ. ಇದೊಂದು ಶಾಸನಾತ್ಮಕ ನಿಧರ್ಾರವಾಗಿದೆ ಎನ್ನುವುದನ್ನು ಉಲ್ಲೇಖಿಸಿದೆ. ಅತ್ಯಾಚಾರ ಸಂತ್ರಸ್ತರು ಮತ್ತು ಸಮಸ್ಯಾತ್ಮಕ ಭ್ರೂಣ ಹೊಂದಿರುವ ಮಹಿಳೆಯರು 20 ವಾರ ಮೀರಿದ ಭ್ರೂಣಗಳ ಗರ್ಭಪಾತಕ್ಕೆ ಅನುಕೂಲವಾಗುವಂತೆ 1971ರ ಕಾಯಿದೆಯಲ್ಲಿ ತಿದ್ದುಪಡಿ ಮಾಡಬೇಕು ಎಂದು ಕೋರಿ ಕನರ್ಾಟಕ ಮೂಲದ ಅನುಷಾ ರವೀಂದ್ರ ಅವರು ಸಲ್ಲಿಸಿದ ಮನವಿಯ ವಿಚಾರಣೆ ನಡೆಸುವ ವೇಳೆ ಸುಪ್ರೀಂ ಕೋಟರ್್ ಈ ಅಭಿಪ್ರಾಯ ವ್ಯಕ್ತಪಡಿಸಿತು. ಇತ್ತೀಚಿನ ದಿನಗಳಲ್ಲಿ 20 ವಾರಗಳ ನಂತರ ಗರ್ಭಪಾತ ಮಾಡುವಂತೆ ಮನವಿ ಮಾಡುವ ವಿದ್ಯಮಾನಗಳು ಹೆಚ್ಚುತ್ತಿದ್ದು, ಬೇಡಿಕೆಯ ಅರ್ಹತೆಯ ಆಧಾರದ ಮೇಲೆ ಹೈಕೋಟರ್್ ಮತ್ತು ಸುಪ್ರೀಂಕೋಟ್ರ್ಗಳು ಆಗಾಗ ತೀಪರ್ುಗಳನ್ನು ಪ್ರಕಟಿಸುತ್ತಿವೆ. ಕಾನೂನು ತಿದ್ದುಪಡಿ ಮಾಡದೆಯೇ ಈ ವಿಶೇಷ ಸಂದರ್ಭಗಳಿಗೆ ಅನುಕೂಲವಾಗುವಂತೆ ಮಾರ್ಗದಶರ್ಿ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಇದೊಂದು ಹೊಸ ಹೆಜ್ಜೆಯಾಗಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries