ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 11, 2017
ಭಾಷಾಂತರಕಾರ ಕೇಳು ಮಾಸ್ತರ್ರ 'ಕಥಕ್ಕಳಿ' ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ
ಬದಿಯಡ್ಕ: ಕನರ್ಾಟಕ ಸರಕಾರದ ಕನ್ನಡ ಸಾಹಿತ್ಯ ಪರಿಷತ್ತು 2016 -17 ಸಾಲಿನಲ್ಲಿ ವಿವಿಧ ಪುಸ್ತಕಗಳಿಗೆ ನೀಡುವ ದತ್ತಿ ಪ್ರಶಸ್ತಿ ಪುರಸ್ಕಾರಕ್ಕೆ ಸಾಹಿತಿ, ಭಾಷಾಂತರಕಾರ ಕೇಳು ಮಾಸ್ತರ್ ಅಗಲ್ಪಾಡಿ ಅವರ ಕಥಕ್ಕಳಿ ಕೃತಿಯು ಆಯ್ಕೆಯಾಗಿದೆ.
ಸುಬ್ಬಯ್ಯಕಟ್ಟೆಯ ಕೈರಳಿ ಪ್ರಕಾಶನವು ಹೊರತಂದಿರುವ ಕಥಕ್ಕಳಿ ಕೃತಿಯ ಪ್ರಥಮಾವೃತ್ತಿಯನ್ನು ಕನರ್ಾಟಕ ಸರಕಾರದ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರ ಮೂತರ್ಿ ಮತ್ತು ದ್ವಿತೀಯಾವೃತ್ತಿಯನ್ನು ಕೇರಳ ಸರಕಾರದ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಬಿಡುಗಡೆಗೊಳಿಸಿದ್ದರು.
ಕೇಳು ಮಾಸ್ತರ್ರ 'ಕೇರಳದ ತೆಯ್ಯಂ' ಕೃತಿಯು ಕನರ್ಾಟಕ ಜಾನಪದ ಅಕಾಡೆಮಿಯ ಶ್ರೇಷ್ಠ ಜಾನಪದ ಕೃತಿ ಪ್ರಶಸ್ತಿ ಪಡೆದಿದೆ. ಇದೀಗ ಕಥಕ್ಕಳಿ ಕೃತಿಗೆ ಸಾಹಿತ್ಯ ಪರಿಷತ್ತು `ಜಾನಪದ ಸಾಹಿತ್ಯ ಕೃತಿ'ಗೆ ನೀಡಲಾಗುವ ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ ಪ್ರಶಸ್ತಿಯು ಲಭಿಸಿದೆ.
ಪ್ರಶಸ್ತಿ ಪ್ರದಾನವು ಅ.15 ರಂದು ಬೆಂಗಳೂರು ಸಾಹಿತ್ಯ ಪರಿಷತ್ನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಜರಗಲಿರುವುದು. ಪ್ರಶಸ್ತಿಯು ನಗದು ಪುರಸ್ಕಾರ, ಪ್ರಶಸ್ತಿ ಪತ್ರ, ಫಲಕಗಳನ್ನೊಳಗೊಂಡಿರುವುದಾಗಿ ಸಾಹಿತ್ಯ ಪರಿಷತ್ನ ಪ್ರಕಟಣೆಯು ತಿಳಿಸಿದೆ.