ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 11, 2017
ಡಿಸೆಂಬರ್ನಲ್ಲಿ ಪಿಲಿಕುಳದಲ್ಲಿ ತುಳುನಾಡೋಚ್ಚಯ-2017
ಬದಿಯಡ್ಕ: ತುಳುನಾಡಿನಲ್ಲಿ ಜಾತಿ ಮತ ಭಾಷಾ ಸೌಹಾರ್ಧತೆ ಎಂಬ ನೆಲೆಗಟ್ಟಿನಲ್ಲಿ 2016 ಡಿಸೆಂಬರ್ 9ರಿಂದ 13ರ ವರೆಗೆ 5ದಿನಗಳ ಕಾಲ 5 ವೇದಿಕೆಗಳಲ್ಲಾಗಿ ವಿಶ್ವ ತುಳುವೆರೆ ಆಯನೊ 2016 ಎಂಬ ಕಾರ್ಯಕ್ರಮವು ಬದಿಯಡ್ಕದಲ್ಲಿ ವಿಜೃಂಭಣೆಯಿಂದ ಜರಗಿತು. ಈ ಸಂದರ್ಭದಲ್ಲಿ ಮಂಡಿಸಿದ ಠರಾವಿನಂತೆ ತುಳುನಾಡಿನ ಐಕ್ಯತೆ ಮತ್ತು ಆಭಿವೃದ್ಧಿಗಾಗಿ ಜಾತಿ,ಮತ,ಭಾಷಾ ಸೌಹಾರ್ಧತೆ ಅಗತ್ಯ ಮತ್ತು ಅದರ ಉಳಿವಿಗಾಗಿ ಪ್ರತಿವರ್ಷವೂ ತುಳುನಾಡಿನ ಬೇರೆ ಬೇರೆ ಸ್ಥಳಗಳಲ್ಲಿ "ತುಳುನಾಡೋಚ್ಚಯ" ಎಂಬ ಕಾರ್ಯಕ್ರಮ ನಡೆಸಲು ತೀಮರ್ಾನಿಸಲಾಗಿದೆ. ಈ ನಿಟ್ಟಿನಲ್ಲಿ ಈ ವರ್ಷ ವಿಶ್ವತುಳುವೆರೆ ಆಯನೊ ಕೂಟ ಇದರ ನೇತೃತ್ವದಲ್ಲಿ ಮಂಗಳೂರಿನ ಪಿಲಿಕುಳ ಡಾ.ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ಡಿಸೆಂಬರ್ ತಿಂಗಳ ಕೊನೆಯಲ್ಲಿ ತುಳುನಾಡೋಚ್ಚಯ ಕಾರ್ಯಕ್ರಮ ನಡೆಸಲು ತೀಮರ್ಾನಿಸಲಾಗಿದೆ. ಪಿಲಿಕುಳ ಪರಿಸರದಲ್ಲಿನ ತುಳುನಾಡಿನ ಗತವೈಭವವನ್ನು ಸಾರುವ ಸೌಂದರ್ಯರಾಶಿಯನ್ನು ಬಳಸಿಕೊಂಡು ತುಳುನಾಡೋಚ್ಚಯಕ್ಕೆ ರಂಗೇರಿಸಲು ತೀಮರ್ಾನಿಸಲಾಗಿದೆ. ಈ ಕಾರ್ಯಕ್ರಮದ ಆಯೋಜನೆಯ ಬಗ್ಗೆ ಚಚರ್ಿಸಲು ಪೂರ್ವಭಾವೀ ಸಭೆಯನ್ನು ಅ. 13 ರಂದು ಶುಕ್ರವಾರ ಅಪರಾಹ್ನ 3 ಗಂಟೆಗೆ ಪಿಲಿಕುಳ ನಿಸರ್ಗಧಾಮದಲ್ಲಿರುವ ಗುತ್ತಿನಮನೆಯಲ್ಲಿ ನಡೆಸಲು ತೀಮರ್ಾನಿಸಿದ್ದು ತುಳುನಾಡಿಗರು, ತುಳು ಸಂಘಟನೆಗಳ ಪದಾಧಿಕಾರಿಗಳು, ತುಳುಭಾಷಾ ಪ್ರೇಮಿಗಳು ಸಭೆಯಲ್ಲಿ ಉಪಸ್ಥಿತರಿದ್ದು ಸೂಕ್ತ ಮಾರ್ಗದರ್ಶನವನ್ನು ನೀಡಬೇಕೆಂದು ಸಂಘಟಕರು ವಿನಂತಿಸಿಕೊಂಡಿದ್ದಾರೆ.