ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 05, 2017
ಉಪಜಿಲ್ಲಾ ಮಟ್ಟದ ಸಂಸ್ಕೃತ ಶಿಬಿರ ಉದ್ಘಾಟನೆ
ಉಪ್ಪಳ: ಮಂಜೇಶ್ವರ ಉಪಜಿಲ್ಲಾ ಮಟ್ಟದ ತ್ರಿ ದಿನ ಸಂಸ್ಕೃತ ವಿಜ್ಞಾನ ವದರ್ಿನಿ 2017 ಶಿಬಿರ ಕಯ್ಯಾರು ಡಾನ್ಬಾಸ್ಕೋ ಎಯುಪಿ ಶಾಲೆಯಲ್ಲಿ ಬುಧವಾರ ಉದ್ಘಾಟನೆಗೊಂಡಿತು.
ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ.ಜೆ.ಶೆಟ್ಟಿ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಪಂ.ಸದಸ್ಯೆ ರಾಜೀವಿ ರೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಸಂಸ್ಕೃತ ಶಿಕ್ಷಕ ಬಾಲಕೃಷ್ಣ ಶರ್ಮ ಭಾಗವಹಿಸಿ ಶಿಬಿರದ ಮಹತ್ವವನ್ನು ತಿಳಿಸಿಕೊಟ್ಟರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯರಾದ ಪ್ರಸಾದ್ ರೈ, ಡಾನ್ಬಾಸ್ಕೋ ಶಾಲಾ ಸಂಚಾಲಕ ವಂದನೀಯ ಸ್ವಾಮಿ ವಿಕ್ಟರ್ ಡಿಸೋಜ, ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ದಿನೇಶ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಿದಾನಂದ ಮಯ್ಯ, ಮಾತೃಮಂಡಳಿ ಅಧ್ಯಕ್ಷೆ ಆಶಾದೇವಿ, ಮಂಜೇಶ್ವರ ಸಂಸ್ಕೃತ ಅಕಾಡೆಮಿಕ್ ಕೌನ್ಸಿಲ್ ಉಪಾಧ್ಯಕ್ಷ ಮಹಾಲಿಂಗ್ ಭಟ್,ಕೌನ್ಸಿಲ್ನ ಕಾರ್ಯದಶರ್ಿ ಸೌಮ್ಯ, ಶಾಲಾ ಮುಖ್ಯೋಪಾಧ್ಯಾಯ ಲುವಿಸ್ ಮೋಂತೆರೋ ಉಪಸ್ಥಿತರಿದ್ದರು.
ತ್ರಿದಿನ ಶಿಬಿರದಲ್ಲಿ ಶಿಬಿರಾಥರ್ಿಗಳಿಗೆ ವಿವಿಧ ತರಗತಿಗಳನ್ನು ನಡೆಸಿ ಅನೇಕ ಚಟುವಟಿಕೆಗಳನ್ನು ನೀಡಲಾಯಿತು. ಸುಮಾರು 250ಕ್ಕೂ ಹೆಚ್ಚು ಶಿಬಿರಾಥರ್ಿಗಳು ಮತ್ತು ಶಿಕ್ಷಕರು ಭಾಗವಹಿಸಿ ಪ್ರಯೋಜನವನ್ನು ಪಡೆದರು.