ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 16, 2017
ತುಳುನಾಡೋಚ್ಚಯ-2017 ಅಧ್ಯಕ್ಷರಾಗಿ ಡೆವಿಡ್ ಫ್ರಾಂಕ್ ಪೆನರ್ಾಂಡಿಸ್
ಬದಿಯಡ್ಕ: ವಿಶ್ವ ತುಳುವೆರೆ ಆಯನೊ ಕೂಟ ಮತ್ತು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಹಾಗು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಡಿ.23,24 ರಂದು ಪಿಲಿಕುಳದಲ್ಲಿ ``ತುಳುನಾಡಿನಲ್ಲಿ ಜಾತಿ,ಮತ,ಭಾಷಾ ಸೌಹಾರ್ದತೆ" ಎಂಬ ನೆಲೆಗಟ್ಟಿನಲ್ಲಿ ನಡೆಯುವ ``ತುಳುನಾಡೋಚ್ಚಯ 2017"ರ ಸಮಿತಿ ರೂಪೀಕರಿಸಲಾಯಿತು.
ಗೌರವಾಧ್ಯಕ್ಷರಾಗಿ ವಿಶ್ವ ತುಳುವೆರೆ ಆಯನೊ ಕೂಟದ ಮತ್ತು ಯು.ಎ.ಇ. ಕನ್ನಡಿಗರ ಸಂಘದ ಅಧ್ಯಕ್ಷ ಸವರ್ೋತ್ತಮ ಶೆಟ್ಟಿ, ಅಧ್ಯಕ್ಷರಾಗಿ ಮೊಸ್ಕೋ ಪ್ಪಿಂಗ್ ಸಿ.ಇ.ಒ, ಡೆವಿಡ್ ಫ್ರಾಂಕ್ ಪೆನರ್ಾಂಡಿಸ್, ಕಾರ್ಯಧ್ಯಕ್ಷರಾಗಿ ದುಬೈ ಬ್ಯಾರಿ ಅಸೋಸಿಯೆಷನ್ ಪ್ರಧಾನ ಕಾರ್ಯದಶರ್ಿ ಎಂ. ಇ. ಮೂಲೂರು ಮತ್ತು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್. ಯು. ದೇವಾಡಿಗ., ಪ್ರಧಾನ ಕಾರ್ಯದಶರ್ಿಯಾಗಿ ಮುಲ್ಕಿ ವಿಜಯ ಕಾಲೇಜಿನ ಅಧ್ಯಕ್ಷೆ ಶಮೀನಾ ಆಳ್ವ, ಖಜಾಂಜಿಯಾಗಿ ಪಿ.ಎ.ಪೂಜಾರಿ ಅಯ್ಕೆಯಾಗಿದ್ದಾರೆ.
ಕಾರ್ಯಕ್ರಮದ ಪ್ರಧಾನ ಸಂಚಾಲಕರಾಗಿ ಅಖಿಲ ಭಾರತ ತುಳು ಒಕ್ಕೂಟ ಕಾರ್ಯದಶರ್ಿ ಶಶಿಧರ ಶೆಟ್ಟಿ ನಿಟ್ಟೆ, ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಕಾರ್ಯದಶರ್ಿಗಳಾಗಿ ಪ್ರಶಾಂತ್ ಭಟ್ ಕಡಬ, ಶರತ್ ಶೆಟ್ಟಿ ಪಡುಪಳ್ಳಿ, ಗೀತಾ ಜೆ ಹೆಗ್ಡೆ ಮುಲ್ಕಿ, ಭಾರತಿ ರೈ ಕಿನ್ನಿಗೋಳಿ, ಅಬ್ದುಲ್ ರಶೀದ್, ಶಿವ ಶೆಟ್ಟಿ, ಶಂಕರ ಸ್ವಾಮಿಕೃಪ, ಹರ್ಷ ರೈ ಪುತ್ರಕಳ ಹಾಗೂ ಗೌರವ ಮಾರ್ಗದರ್ಶಕರಾಗಿ ಪಿಲಿಕುಳ ತುಳು ಸಂಸ್ಕೃತಿ ಗ್ರಾಮದ ಅಧ್ಯಕ್ಷ ಡಾ.ಚಿನ್ನಪ್ಪ ಗೌಡ, ಕಾರ್ಯನಿವರ್ಾಹಕ ನಿದರ್ೇಶಕ ಪ್ರಸನ್ನ ವಿ, ಆಡಳಿತಾಧಿಕಾರಿ ಬಾಬು ದೇವಾಡಿಗ, ಪಿಲಿಕುಳ ಜೈವಿಕ ಉದ್ಯಾನವನದ ನಿದರ್ೇಶಕ ಜಯಪ್ರಕಾಶ್ ಭಂಡಾರಿ, ಪಿಲಿಕುಳ ಸಂಸ್ಕೃತಿ ಗ್ರಾಮದ ಯೋಜನಾಧಿಕಾರಿ ಡಾ.ನಿತಿನ್, ಮತ್ತು ಸಮನ್ವಯಕಾರನಾಗಿ ಆಯನೊಕೂಟದ ಸಂಚಾಲಕ ಡಾ. ರಾಜೇಶ್ ಆಳ್ವರನ್ನು ಆಯ್ಕೆಮಾಡಲಾಯಿತು. ಸಮಿತಿಯ ವಿಸ್ತರಣೆ ಮತ್ತು ವಿವಿಧ ಉಪಸಮಿತಿಗಳನ್ನು ರೂಪೀಕರಿಸಲು ಅ.18ರಂದು ಸಂಜೆ 3 ಗಂಟೆಗೆ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿಯಿರುವ ತುಳುನಾಡ ರಕ್ಷಣಾ ವೇದಿಕೆ ಕಛೇರಿಯಲ್ಲಿ ಸಭೆ ನಡೆಯಲಿದೆ.