HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಅತ್ಯಪೂರ್ವ ಯಶಸ್ಸು ಕಂಡ ಪಡ್ರೆ ಯಕ್ಷೊತ್ಸವ- 2017 ಪೆರ್ಲ: ಯಕ್ಷಗಾನ ದೈವಿಕ ಕಲೆ. ಅದನ್ನು ಉಳಿಸಿ ಬೆಳೆಸಿ ಪೋಷಿಸುವುದೆಂದರೆ ಅದು ಕಲಾಮಾತೆ ಶಾರದೆಯ ಆರಾಧನೆಯೆಂದೇ ತಿಳಿಯಬೇಕು.ಶಾರದೆಯ ಆರಾಧನೆಯ ಜೊತೆಗೆ ಕಲಾಸೇವೆಯಲ್ಲಿ ತೊಡಗಿಸಿಕೊಂಡವರ ಮಹಾಸಾಧನೆಯನ್ನು ಗುರುತಿಸಿ ಗೌರವಿಸುವ ಮೂಲಕ ಶಾರದಾ ಮಾತೆಯನ್ನು ಪೂಜಿಸುವ ,ಸಂತೃಪ್ತಿಪಡಿಸುವ ಯಕ್ಷಮಿತ್ರರು ಪಡ್ರೆ ಅವರ ಕೈಂಕರ್ಯ ಮೆಚ್ಚಬೇಕು ಎಂದು ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಮಯ್ಯ ಶ್ರೀಸುಬ್ರಾಯ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಯಕ್ಷಮಿತ್ರರು ಪಡ್ರೆ ಶನಿವಾರ ಪೆರ್ಲದಲ್ಲಿ ಆಯೋಜಿಸಿದ ಹನ್ನೆರಡನೇ ವರ್ಷದ ಸನ್ಮಾನ ಸಮಾರಂಭ ಮತ್ತು ಯಕ್ಷಗಾನ ಬಯಲಾಟವನ್ನು ದೀಪ ಪ್ರಜ್ವಲನೆಗೊಳಿಸಿ ಅವರು ಮಾತನಾಡಿದರು. ಪರಂಪರೆಯ ಅರಿವಿನೊಂದಿಗೆ ಕಲೆಗೆ ನೀಡುವ ಪ್ರೋತ್ಸಾಹ, ಕಲಾವಿದರನ್ನು ಗುರುತಿಸಿ ಗೌರವಿಸುವ ಪ್ರವೃತ್ತಿ ಸದಾಶಯದ ಸಮೃದ್ದ ಸಮಾಜ ನಿಮರ್ಾಣದ ಭಾಗವೇ ಆಗಿದ್ದು, ಯಕ್ಷಮಿತ್ರರು ಪಡ್ರೆ ತಂಡದ ಕಲಾ ಸೇವೆ ಇತರರಿಗೆ ಮಾದರಿ ಎಂದು ಅವರು ತಿಳಿಸಿದರು. ಪತ್ತಡ್ಕ ಗಣಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಪೆರ್ಲ ಸ.ನಾ.ಹೈಸ್ಕೂಲ್ನ ಶಿಕ್ಷಕರೂ, ಭಾಗವತರಾದ ಸತೀಶ್ ಪುಣಿಚಿತ್ತಾಯ ಅಭಿನಂದನಾ ಭಾಷಣ ನೆರವೇರಿಸಿದರು.ಈ ಸಂದರ್ಭದಲ್ಲಿ ಯಕ್ಷರಂಗದಲ್ಲಿ ಮದ್ದಳೆ ವಾದಕರಾಗಿ ವೃತ್ತಿ ಆರಂಭಿಸಿ ತದನಂತರ ಭಾಗವತಿಕೆಯಲ್ಲಿ ಒಲವನ್ನು ತೋರಿದ ಸವ್ಯಸಾಚಿ ಯಕ್ಷಗುರು ದಿ.ದಾಮೋದರ ಮಂಡೆಚ್ಚರರಿಂದ ಸಂಗೀತಾಭ್ಯಾಸಗೈದು ಸುದೀರ್ಘ ಐದುವರೆ ದಶಕಗಳಿಂದ ತನ್ನ ಸುಮಧುರ ಕಂಠಸಿರಿಯಿಂದ ಸಹಸ್ರಾರು ಅಭಿಮಾನಿ ಬಳಗವನ್ನೇ ಸೃಷ್ಠಿಸಿ,ಸಾವಿರ ಧ್ವನಿಸುರುಳಿ ಹಾಗೂ ಏಳುನೂರಕ್ಕೂ ಹೆಚ್ಚು ಯಕ್ಷಗಾನ ಚಿತ್ರೀಕರಣದಲ್ಲಿ ಭಾಗವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿ,ಗಾನಕೋಗಿಲೆ,ಮಧುರ ಗಾನದ ಐಸಿರಿ ಹಾಗೂ ಯಕ್ಷ ಸಂಗೀತ ಕಲಾಕೌಸ್ತುಭ ಬಿರುದುಗಳನ್ನು ತನ್ನ ಮುಡಿಗೇರಿಸಿದ ಅಗ್ರಪಂಕ್ತಿಯ ಭಾಗವತ ಎಂ. ದಿನೇಶ ಅಮ್ಮಣ್ಣಾಯ ಅವರಿಗೆ ಈ ವರ್ಷದ ಯಕ್ಷೊತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಸಿಹಿತ್ಲು ಶ್ರೀಭಗವತಿ ಮೇಳದ ವ್ಯವಸ್ಥಾಪಕ ರಾಜೇಶ್ ಗುಜರನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಡಾ.ವಿಷ್ಣು ಪ್ರಸಾದ್ ಬರೆಕರೆ ಪ್ರಸ್ತಾವಿಕವಾಗಿ ಮಾತನಾಡಿದರು. ಅವಿನಾಶ್ ಶಾಸ್ತ್ರಿ ಕೊಲ್ಲೆಂಕಾನ ಸ್ವಾಗತಿಸಿ,ಶ್ರೀಧರ ಪಡ್ರೆ ವಂದಿಸಿದರು.ಬಳಿಕ ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದರಿಂದ ವಿಶ್ವಾಮಿತ್ರ ಮೇನಕೆ,ಅಭಿಮನ್ಯು,ರತಿಕಲ್ಯಾಣ ಎನ್ನುವ ಯಶಸ್ವೀ ಯಕ್ಷಗಾನ ಪ್ರದರ್ಶನದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries