ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 29, 2017
2018 ನವೆಂಬರ್ 4-17ರವರಗೆ ಗೋವಾದಲ್ಲಿ ನ್ಯಾಷನಲ್ಸ್ ಗೇಮ್ಸ್
ಪಣಜಿ: ಸಾಕಷ್ಟು ವಿಳಂಬದ ನಂತರ ಗೋವಾದ ಕ್ರೀಡಾ ಪ್ರಾಧಿಕಾರ 36 ನೇ ರಾಷ್ಟ್ರೀಯ ಕ್ರೀಡೋತ್ಸವ ದಿನಾಂಕವನ್ನು ಅಂತಿಮಗೊಳಿಸಿದ್ದು, ಮುಂದಿವ ವರ್ಷ ನವೆಂಬರ್ 4-17 ವರೆಗೆ ನಡೆಯಲಿದೆ.
2011 ರಿಂದ ಕ್ರೀಡೋತ್ಸವ ನಡೆಸುವ ದಿನಾಂಕದ ಬಗ್ಗೆ ಗೊಂದಲಗಳಿದ್ದವು. ಈ ಹಿಂದೆ ಜಾರ್ಖಂಡ್ ಹಾಗೂ ಕೇರಳದಲ್ಲಿ ನಡೆದಿದ್ದ 34 ಹಾಗೂ 35 ನೇ ಆವೃತ್ತಿಯ ಕ್ರೀಡೋತ್ಸವದ ದಿನಾಂಕದ ಬಗ್ಗೆ ಮೂಡಿದ್ದ ಗೊಂದಲಗಳು ಗೋವಾದ ಕಾರ್ಯಕ್ರಮಕ್ಕೂ ಪರಿಣಾಮ ಬೀರಿದ್ದು, ವಿಳಂಬವಾಗಿದೆ.
36 ನೇ ಕ್ರೀಡೊತ್ಸವ 2016 ರಲ್ಲಿ ನಡೆಯಬೇಕಿತ್ತು. ಆದರೆ ಗೋವಾದ ಆದಳಿತ ಕಾರ್ಯಕ್ರಮವನ್ನು ಮುಂದೂಡುವಂತೆ ಐಒಎ ಎಜಿಎಂ ಗೆ ಮನವಿ ಮಾಡಿತ್ತು.