ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 13, 2017
ಸಮರಸ ಸುದ್ದಿ ಚೂರು
ಕೇಂದ್ರ ಸಕರ್ಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಮಹತ್ವಾಕಾಂಕ್ಷಿ *"ವಿಸಿಟಿಂಗ್ ಅಡ್ವಾನ್ಸ್ ಜಾಯಿಂಟ್ ರೀಸಚರ್್ -ವಜ್ರ ಯೋಜನೆಗೆ* 260 ಮಂದಿ ವಿದೇಶಿ ವಿಜ್ಞಾನಿಗಳು ಆಸಕ್ತಿ ತೋರಿ ಅಜರ್ಿ ಸಲ್ಲಿಸಿದ್ದಾರೆ. ಈ ಪೈಕಿ 70 ಮಂದಿಯ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಈ ಯೋಜನೆಯು ಮುಖ್ಯವಾಗಿ ಅಂತರರಾಷ್ಟ್ರೀಯ ಪ್ರತಿಭೆಗಳನ್ನು ದೇಶದ ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರಕ್ಕೆ ಆಕಷರ್ಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.
ಗ್ರೀಸ್ನ ಥೆಸಲೊಂಕಿಯಲ್ಲಿ ಇತ್ತೀಚೆಗೆ ನಡೆದ *"ಲಿಟಲ್ ಮಿಸ್ ವಲ್ಡರ್್ ?2017"* ಅಂತರಾಷ್ಟ್ರೀಯ ಸೌಂದರ್ಯ ಮತ್ತು ಪ್ರತಿಭಾ ಸ್ಪಧರ್ೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕನರ್ಾಟಕದ ಪೂವರ್ಿ ಜಿ.ಬಿ. `ಬೆಸ್ಟ್ ಟ್ಯಾಲೆಂಟ್ ಪರ್ಫಾರ್ಮನ್ಸ್' ಕಿರೀಟ ಮುಡಿಗೇರಿಸಿಕೊಂಡಿದ್ದಾಳೆ.
ಭಾರತದಲ್ಲಿ ಅತಿಹೆಚ್ಚು ಸಂಖ್ಯೆಯ *"ಕಡಿಮೆ ತೂಕದ ಮಕ್ಕಳು"* ಇದ್ದಾರೆ ಎಂದು ಅಧ್ಯಯನವೊಂದು ಹೇಳಿದೆ. ಭಾರತದಲ್ಲಿ 2016ರಲ್ಲಿ ಕಡಿಮೆ ತೂಕದ ಸಮಸ್ಯೆ ಎದುರಿಸುತ್ತಿದ್ದ 9.70 ಕೋಟಿ ಮಕ್ಕಳು ಇದ್ದರು ಎಂದು ಲ್ಯಾನ್ಸೆಟ್ ಜರ್ನಲ್ ವರದಿ ಮಾಡಿದೆ. ಲಂಡನ್ನ ಇಂಪೀರಿಯಲ್ ಕಾಲೇಜ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳು ಜಂಟಿಯಾಗಿ ಈ ಅಧ್ಯಯನ ನಡೆಸಿವೆ. ಕಳೆದ ನಾಲ್ಕು ದಶಕಗಳಲ್ಲಿ 19 ವರ್ಷದೊಳಗಿನ ಹದಿಹರೆಯದವರಲ್ಲಿ ಬೊಜ್ಜಿನ ಸಮಸ್ಯೆಯು ಹತ್ತುಪಟ್ಟು ಹೆಚ್ಚಿದೆ ಎಂದೂ ಹೇಳಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಡಿಸೆಂಬರ್ನಲ್ಲಿ *"ಪಿಎಸ್ಎಲ್ವಿ ರಾಕೆಟ್"* ಮೂಲಕ *"ಕಾಟರ್ೊಸ್ಯಾಟ್?2"* ಸರಣಿಯ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಒಂದೂವರೆ ತಿಂಗಳ ಹಿಂದೆ ಉಪಗ್ರಹವೊಂದನ್ನು ಕಕ್ಷೆಗೆ ಸೇರಿಸಲು ವಿಫಲವಾದ ಬಳಿಕ ಇಸ್ರೊ ನಡೆಸುತ್ತಿರುವ ಮೊದಲ ಉಡಾವಣೆ ಇದು.
*"ಎನ್ವಿರಾನ್ಮೆಂಟಲ್ ಪೊಲ್ಯೂಶನ್"* ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಒಂದು ಅಧ್ಯಯನ ವರದಿಯ ಪ್ರಕಾರ, ವಾಯುಮಾಲಿನ್ಯದ ಪ್ರದೇಶದಲ್ಲಿ ವಾಸಿಸುವ ಮಕ್ಕಳ ಅರಿವಳಿಕೆ ಅಭಿವೃದ್ಧಿಯ ಮೇಲೆ ಇದು ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಹಾಗೂ ಅವರ ಸ್ಮರಣಶಕ್ತಿಯನ್ನು ಕುಂಠಿತವಾಗಿಸುತ್ತದೆ.
*``ನಾಗರೀಕತೆಯ ಸಂವಾದ-4''* ಕುರಿತ ಅಂತರರಾಷ್ಟ್ರೀಯ ಸಮಾವೇಶವನ್ನು ಸಂಸ್ಕೃತಿ ಖಾತೆ ರಾಜ್ಯ ಸಚಿವ ಮಹೇಶ್ ಶಮರ್ಾ ನವದೆಹಲಿಯಲ್ಲಿ ಉದ್ಘಾಟಿಸಿದರು. ಕೇಂದ್ರದ ಸಂಸ್ಕೃತಿ ಸಚಿವಾಲಯದಡಿ ಕಾರ್ಯನಿರ್ವಹಿಸುವ ಭಾರತದ ಪ್ರಾಚ್ಯವಸ್ತು ಸವರ್ೇಕ್ಷಣಾಲಯ, ರಾಷ್ಟ್ರೀಯ ಭೌಗೋಳಿಕ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಇದನ್ನು ಹಮ್ಮಿಕೊಂಡಿದೆ. ಇದು ಅಕ್ಟೋಬರ್ 8ರಿಂದ 15ರವರೆಗೆ *"ದೆಹಲಿ, ಗಾಂಧಿನಗರ ಮತ್ತು ಧೊಲಾವಿರದಲ್ಲಿ ನಡೆಯುತ್ತಿದೆ."*