ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 29, 2017
ಭಾರತ ವಿರುದ್ಧ ಸರಣಿ ಗೆಲ್ಲಲು ಕಿವೀಸ್ ಗೆ 338ರನ್ ಗುರಿ
ಕಾನ್ಪುರ್: ಗ್ರೀನ್ ಪಾಕರ್್ ಮೈದಾನದಲ್ಲಿ ಇಂದಿನ ಪಂದ್ಯ ಮೂರು ಏಕದಿನ ಪಂದ್ಯಗಳ ಸರಣಿಯ ಅಂತಿಮ ಪಂದ್ಯವಾಗಿದೆ. ಉಭಯ ತಂಡಗಳು ಒಂದೊಂದು ಪಂದ್ಯಗಳನ್ನು ಗೆದ್ದಿದ್ದು, ಈ ಪಂದ್ಯ ಕುತೂಹಲ ಕೆರಳಿಸಿದೆ. ನಿಗದಿತ 50 ಓವರ್ ಗಳಲ್ಲಿ ಭಾರತ 337/6 ಸ್ಕೋರ್ ಮಾಡಿದೆ.
ಲೈವ್ ಸ್ಕೋರ್ ಕಾಡರ್್
ಮೂರನೇ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಎಬಿಡಿ ದಾಖಲೆ ಮುರಿದು, ತ್ವರಿತಗತಿಯಲ್ಲಿ 9 ಸಾವಿರ ರನ್ ಗಳಿಸಿದ ಕೊಹ್ಲಿ
ಭಾರತದ ಪರ ರೋಹಿತ್ ಶರ್ಮ 147 ರನ್ (138 ಎಸೆತಗಳು, 18 ಬೌಂಡರಿ, 2ಸಿಕ್ಸರ್), ವಿರಾಟ್ ಕೊಹ್ಲಿ 113ರನ್ (106 ಎಸೆತಗಳು, 9 ಬೌಂಡರಿ, 1 ಸಿಕ್ಸರ್) ಗಳಿಸಿ ರನ್ ಗತಿ ಹೆಚ್ಚಿಸಿದರು.
ನ್ಯೂಜಿಲೆಂಡ್ ಪರ ನ್ಯೂಜಿಲೆಂಡ್ ಪರ ಟಿಮ್ ಸೌಥಿ, ಆಡಂ ಮಿಲ್ನ್, ಮಿಚೆಲ್ ಸಾಂಟ್ನರ್ ತಲಾ 2 ವಿಕೆಟ್ ಪಡೆದರು.
ನ್ಯೂಜಿಲೆಂಡ್ ನಿಂದ ಭಾರತ ಪ್ರವಾಸ ಸಂಪೂರ್ಣ ವೇಳಾಪಟ್ಟಿ
ಆಡುವ ಹನ್ನೊಂದು ಆಟಗಾರರು: ನ್ಯೂಜಿಲೆಂಡ್: ಮಾಟರ್ಿನ್ ಗಪ್ಟಿಲ್, ಕಾಲಿನ್ ಮನ್ರೋ, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಟಾಮ್ ಲಾಥಮ್ (ವಿಕೆಟ್ ಕೀಪರ್), ಹೆನ್ರಿ ನಿಕೋಲಸ್, ಕಾಲಿನ್ ಡಿ ಗ್ರಾಂಡ್ಹೊಮೆ, ಮಿಚೆಲ್ ಸಾಂಟ್ನರ್, ಆಡಂ ಮಿಲ್ನೆ, ಟಿಮಿ ಸೌಥಿ, ಟ್ರೆಂಟ್ ಬೌಲ್ಟ್ ಭಾರತ: ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ(ನಾಯಕ), ದಿನೇಶ್ ಕಾತರ್ಿಕ್, ಹಾದರ್ಿಕ್ ಪಾಂಡ್ಯ, ಎಂಎಸ್ ಧೋನಿ(ವಿಕೆಟ್ ಕೀಪರ್), ಕೇದಾರ್ ಜಾಧವ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬೂಮ್ರಾ, ಯಜುವೇಂದ್ರ ಚಾಹಲ್.