ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 02, 2017
ಉಪ್ಪಳ: ಪೈವಳಿಕೆ ಸಮೀಪದ ಕುರುಡಪದವಿನ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ನ 5 ನೇ ವಾಷರ್ಿಕೋತ್ಸವ ಹಾಗೂ ಯಕ್ಷವೈಭವವು ಶ್ರೀ ರಾಮ ಭಜನಾಮಂದಿರದ ವಠಾರದಲ್ಲಿ ನವರಾತ್ರಿಯ ಆಯುಧ ಪೂಜಾ ವಿಶೇಷ ದಿನದಂದು ನಡೆಯಿತು.
ವಾಹನ ಪೂಜೆಯ ಬಳಿಕ ಭಜನಾ ಮಂಗಳಾರತಿ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಮುರಳೀಧರ ಶೆಟ್ಟಿ ವಹಿಸಿದರು. ಮುಖ್ಯ ಅತಿಥಿಯಾಗಿ ಡಾ.ಶ್ರೀ ರಾಮ್ ಭಟ್ ಮಂಗಳೂರು, ಆರ್.ಕೆ ಭಟ್ ಬೆಂಗಳೂರು ಉಪಸ್ಥಿತರಿದ್ದು ಶುಭಹಾರೈಸಿದರು. ಗಣಪತಿ ಭಟ್ ಮೈರುಗ,ಪರಮೇಶ್ವರ ಭಟ್ ಕಾಡೂರು,ಸೇಸಪ್ಪ ಆಚಾರ್ಯ ಕುರುಡಪದವು, ಲೋಹಿತ್ ಭಂಡಾರಿ ಕುರಿಯಗುತ್ತು, ತಾರಾ ವಿ. ಶೆಟ್ಟಿ ಕುರಿಯ,ಕಬ್ಬಿನ ಅಧ್ಯಕ್ಷರಾದ ಮಾಧವ ಮೂಕೋಡಿ ಮತ್ತಿತರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜ ಸೇವಕ,ಕಲಾಪೋಷಕ, ಯಕ್ಷಗಾನ ಸಂಘಟಕ ಕುರಿಯ ಗೋಪಾಲಕೃಷ್ಣ ಭಟ್ ಇವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ರವಿ ಕುಲಾಲ್ ಮೂಕೋಡಿ ಸನ್ಮಾನ ಪತ್ರವನ್ನು ವಾಚಿಸಿದರು.ನ್ಯಾಯವಾದಿ ರಾಮಕೃಷ್ಣ ಭಟ್ ಪೆವರ್ೊಡಿ ಅಭಿನಂದನಾ ಭಾಷಣ ಮಾಡಿದರು. ರಂಜಿತ್ ಕುಮಾರ್ ಸ್ವಾಗತಿಸಿ, ಪ್ರಶಾಂತ್ ಕುಮಾರ್ ವಂದಿಸಿದರು.ಹರ್ಷ ಕುಮಾರ್ ನಿರೂಪಣೆ ಮಾಡಿದರು. ಬಳಿಕ ಪಟ್ಲ ಸತೀಶ್ ಶೆಟ್ಟಿ ಮತ್ತು ರವಿಚಂದ್ರ ಕನ್ನಡಿಕಟ್ಟೆ ಭಾಗವತಿಕೆಯಲ್ಲಿ ಸುದಾನ್ವಜರ್ುನ, ಜಿ ಕೆ ನಾವಡ ಬಾಯಾರು ಭಾಗವತಿಕೆಯಲ್ಲಿ ಕಂಸವಧೆ ಹಾಗೂ ಕುರಿಯ ಗಣಪತಿ ಶಾಸ್ತ್ರಿ ಮತ್ತು ಜಿ ಕೆ ನಾವಡ ಬಾಯಾರು ಭಾಗವತಿಕೆಯಲ್ಲಿ ಕೊಲ್ಲೂರು ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಿತು.