ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 14, 2017
ಪದವಿಯಾದ ಯುವತಿಯರಿಗೆ ವಿವಾಹವಾಗಲು ಭರಪೂರ ಧನ!
ನವದೆಹಲಿ: ಮುಸ್ಲಿಂ ಯುವತಿಯರು ವಿವಾಹಕ್ಕೆ ಮುನ್ನ ಪದವಿ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿದರೆ ಕೇಂದ್ರ ಸಕರ್ಾರದಿಂದ ಅವರಿಗೆ 51 ಸಾವಿರ ರೂ. ನಗದು ಬಹುಮಾನ ದೊರೆಯಲಿದೆ. ಅಲ್ಪಸಂಖ್ಯಾತರನ್ನು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಶಾದಿ ಶುಗುನ್ ಹೆಸರಿನ ಈ ಯೋಜನೆಗೆ ಅಲ್ಪಸಂಖ್ಯಾತ ಸಚಿವಾಲಯ ಅನುಮೋದನೆ ನೀಡಿದೆ.
ಮೌಲಾನಾ ಅಜಾದ್ ಶಿಕ್ಷಣ ಪ್ರತಿಷ್ಠಾನವು ಇಂಥದೊಂದು ಪ್ರಸ್ತಾವವನ್ನು ಕಳೆದ ಜುಲೈನಲ್ಲಿ ಅಲ್ಪಸಂಖ್ಯಾತ ಖಾತೆ ಸಚಿವ ಮುಖ್ತಾರ್ ಅಬಾಸ್ ನಖ್ವಿ ಅವರ ಮುಂದಿರಿಸಿತ್ತು. ಮೌಲಾನಾ ಆಜಾದ್ ಪ್ರತಿಷ್ಠಾನ ನೀಡುವ ಬೇಗಮ್ ಹಜ್ರತ್ ಮಹಲ್ ವಿದ್ಯಾಥರ್ಿ ವೇತನ ಪಡೆಯುತ್ತಿರುವ ಎಲ್ಲಾ ವಿದ್ಯಾಥರ್ಿನಿಯರೂ ಈ ನೂತನ ಯೋಜನೆಗೆ ಅರ್ಹರಾಗಿದ್ದಾರೆ.