ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 31, 2017
ಸೆಟ್ಟೇರಿತು ದ್ವಾರಕೀಶ್ ಬ್ಯಾನರ್ ನ 51ನೇ ಸಿನಿಮಾ 'ಅಮ್ಮ ಐ ಲವ್ ಯು'
ನಟಿ ಮೇಘನಾ ರಾಜ್ ಜೊತೆ ನಿಶ್ಚಿತಾರ್ಥ ನೆರವೇರಿದ ಬಳಿಕ ಚಿರಂಜೀವಿ ಸಜರ್ಾ ರವರ ಹೊಸ ಚಿತ್ರ ಸೆಟ್ಟೇರಿದೆ. ದ್ವಾರಕೀಶ್ ಬ್ಯಾನರ್ ನ 51ನೇ ಸಿನಿಮಾದಲ್ಲಿ ಚಿರಂಜೀವಿ ಸಜರ್ಾ ನಟಿಸುತ್ತಿದ್ದು, ಚಿತ್ರಕ್ಕೆ 'ಅಮ್ಮ ಐ ಲವ್ ಯು' ಎಂದು ಹೆಸರಿಡಲಾಗಿದೆ.
ನಿಶ್ಚಿತಾರ್ಥದ ಬಳಿಕ ಚಿರಂಜೀವಿ ಸಜರ್ಾ ಮುಂದಿನ ಸಿನಿಮಾ ಶುರು
ದ್ವಾರಕೀಶ್ ನಿಮರ್ಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ವೆಸ್ಟ್ ಆಫ್ ಕಾಡರ್್ ರೋಡ್ ನಲ್ಲಿ ಇರುವ ಗಣಪತಿ ದೇವಸ್ಥಾನದಲ್ಲಿ ನೆರವೇರಿದೆ.
'ಅಮ್ಮ ಐ ಲವ್ ಯೂ' ಚಿತ್ರದಲ್ಲಿ ಬದಲಾದ ಮಗ.!
'ಅಮ್ಮ ಐ ಲವ್ ಯು' ಹೆಸರಿನ ಈ ಚಿತ್ರ ತಮಿಳಿನ 'ಪಿಚ್ಚಕಾರನ್' ಸಿನಿಮಾದ ರೀಮೇಕ್ ಆಗಿದ್ದು, 50 ದಿನಗಳ ಕಾಲ ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ವಿದೇಶಗಳಲ್ಲಿ ಚಿತ್ರೀಕರಣಗೊಳ್ಳಲಿದೆ.
ಚಿರಂಜೀವಿ ಸಜರ್ಾ, ಸಿತಾರಾ, ಪ್ರಕಾಶ್ ಬೆಳವಾಡಿ, ಗಿರೀಶ್ ದ್ವಾರಕೀಶ್ ಮುಂತಾದವರು 'ಅಮ್ಮ ಐ ಲವ್ ಯು' ತಾರಾಗಣದಲ್ಲಿದ್ದು, ಚಿತ್ರಕ್ಕೆ ಕೆ.ಎಂ.ಚೈತನ್ಯ ಆಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸಲಿದ್ದಾರೆ.