ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 30, 2017
ಕಲೋತ್ಸವಕ್ಕೆ ಇಂದು ಚಾಲನೆ
ಬದಿಯಡ್ಕ: ಕುಂಬಳೆ ಉಪಜಿಲ್ಲಾ 58ನೇ ಶಾಲಾ ಕಲೋತ್ಸವ ಮಂಗಳವಾರ (ಇಂದಿನಿಂದ) ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲು ವಠಾರದಲ್ಲಿ ಆರಂಭಗೊಳ್ಳುತ್ತಿದ್ದು, ವ್ಯವಸ್ಥೆಗಳು ಪೂರ್ಣಗೊಂಡಿದೆ.
10 ವೇದಿಕೆಗಳಲ್ಲಾಗಿ ವಿವಿಧ ಸ್ಪಧರ್ೆಗಳು ನಡೆಯಲಿದ್ದು, ಉಪಜಿಲ್ಲೆಯ 118 ಶಾಲೆಗಳ 3 ಸಾವಿರಕ್ಕಿಂತಲೂ ಮಿಕ್ಕಿದ ವಿದ್ಯಾಥರ್ಿಗಳು ಪಾಲ್ಗೊಳ್ಳುವರು. ನ.5ರ ವರೆಗೆ ಕಲೋತ್ಸವ ನಡೆಯಲಿದೆ.
ಮಂಗಳವಾರ 1ನೇ ವೇದಿಕೆಯಲ್ಲಿ ಕಿರಿಯ ಪ್ರಾಥಮಿಕ ವಿಭಾಗದ ಸಮೂಹ ಗಾಯನ, 2ರಲ್ಲಿ ಭಾಷಣ ಸ್ಪಧರ್ೆ,3 ರಲ್ಲಿ ಕನ್ನಡ ಒಗಟುಗಳು ಮತ್ತು ಕಥಾ ವಾಚನ, 4ರಲ್ಲಿ ಉಪನ್ಯಾಸ ಸ್ಪಧರ್ೆ, 4ರಲ್ಲಿ ಪೂರಕ್ಕಳಿ, ಮಾರ್ಗಂ ಕಳಿ, ಓಟ್ಟಂತುಳ್ಳಲ್, ಸ್ಕಿಟ್, ಮೂಕಾಭಿನಯ,5 ರಲ್ಲಿ ಹಾಡುಗಾರಿಕೆ, ಅರಬಿ ಗಾನ, ಗುಂಪು ಹಾಡುಗಾರಿಕೆ, ನಾಟಕ, 6ರಲ್ಲಿ ವಯೋಲಿನ್, ಗಿಟಾರ್, ತಬಲಾ, ಮೃದಂಗ, ಚೆಂಡೆ ಸ್ಪಧರ್ೆ, 8 ರಲ್ಲಿ ಕೋಲಾಟ, ದಫ್ ಮುಟ್ಟ್, ವಟ್ಟಪ್ಪಾಟ್, ಅರಬನಮಟ್ಟ್, 9 ರಲ್ಲಿ ಶಾಸ್ತ್ರೀಯ ಸಂಗೀತ, 9 ರಲ್ಲಿ ಅಕ್ಷರ ಶ್ಲೋಕ, ಸಂಸ್ಕೃತ ಭಾಷಣ, ಕಥಾಕಥನಂ, ಹಾಡುಗಾರಿಕೆ ನಡೆಯಲಿದೆ. ಜೊತೆಗೆ 1ನೇ ಮುಖ್ಯ ರಂಗದಲ್ಲಿ ಗಾಡುಗಾರಿಕೆ, ಭರತನಾಟ್ಯ, ಕೂಚಿಪ್ಪುಡಿ, ಮೋಹಿನಿಯಾಟ್ಟಂ, ಕೇರಳ ನಟನಂ, 2ನೇ ರಂಗದಲ್ಲಿಒ ನಾಟಕ, 3ನೇ ರಂಗದಲ್ಲಿ ವಿವಿಧ ಹಾಡುಗಾರಿಕೆ, 4ನೇ ರಂಗದಲ್ಲಿ ಅಷ್ಟಪದಿ ಸ್ಪಧರ್ೆ, ಗುಂಪು ಹಾಡುಗಾರಿಕೆ, ನಾಟಕ ಮತ್ತು ಯಕ್ಷಗಾನ, 5ನೇ ಮುಖ್ಯ ರಂಗದಲ್ಲಿ ಮಾಪಿಳ್ಳೆ ಪಾಟ್ ಸ್ಪಧರ್ೆಗಳು ವಿವಿಧ ದಿನಗಳಲ್ಲಿ ನಡೆಯಲಿದೆ.
ಕೋಲತ್ಸವಕ್ಕೆ ಸಂಬಂಧಿಸಿ ಕಾರ್ಯಕ್ರಮ ಮಾಹಿತಿ ಪತ್ರ(ಶೆಡ್ಯೂಲ್) ನ್ನು ಸೋಮವಾರ ನಿವೃತ್ತ ಮುಖ್ಯೋಪಾಧ್ಯಾಯ ಪಡಿಯಡ್ಪು ಶಂಕರ ಭಟ್ ಕಾರ್ಯಕ್ರಮ ನಿರ್ವಹಣಾಧಿಕಾರಿ ರವಿಶಂಕರ ದೊಡ್ಡಮಾಣಿಯವರಿಗೆ ಹಸ್ತಾಂತರಿಸಿ ಬಿಡುಗಡೆಗೊಳಿಸಿದರು. ಕಲೋತ್ಸವ ಉದ್ಘಾಟನೆ ಅ.2 ರಂದು ಔಪಚಾರಿಕವಾಗಿ ನಡೆಯಲಿದೆ.