ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 16, 2017
ಮನ ರಂಜಿಸಿದ ಯಕ್ಷಗಾನ ಕಾರ್ಯಕ್ರಮ
ಮುಳ್ಳೇರಿಯ: ಯಕ್ಷಮಿತ್ರರು ಮುಳ್ಳೇರಿಯ ಇದರ 5ನೇ ವಾಷರ್ಿಕೋತ್ಸವದ ಅಂಗವಾಗಿ ಮುಳ್ಳೇರಿಯ ಶಾಲೆಯ ಪರಿಸರದಲ್ಲಿ ನಡೆದ ಯಕ್ಷಗಾನ ಬಯಲಾಟ ಚಿತ್ರಾಕ್ಷಿ ಕಲ್ಯಾಣ-ಚೂಡಾಮಣಿ ಜನರಂಜನೆಯನ್ನು ನೀಡಿತು.
ಕಾರ್ಯಕ್ರಮದ ಅಂಗವಾಗಿ ನಡೆದ ಸಮಾರಂಭದಲ್ಲಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಅವರಿಗೆ ಆದೂರು ಜಯಚಂದ್ರ ಆಚಾರ್ಯ ಅವರು ರಚಿಸಿದ ಮರದ ಕೆತ್ತನೆಯ ಉಬ್ಬು ಚಿತ್ರವನ್ನು ನೀಡಿ ಗೌರವಿಸಲಾಯಿತು. ಸಂಘದ ಪದಾಧಿಕಾರಿಗಳಾದ ಗಿರೀಶ್ ಮುಳ್ಳೇರಿಯ, ಗಿರೀಶ್ ಜಯನಗರ, ಸುಧಾಕರ ಬೀರಂಗೋಳು, ನಾರಾಯಣ ಜಯನಗರ ಉಪಸ್ಥಿತರಿದ್ದರು. ಪ್ರಸಿದ್ಧ ಕಲಾವಿದರು ಭಾಗವಹಿಸಿದ್ದರು.