ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 08, 2017
ಇಂಗ್ಲಿಷ್ ಕಾದಂಬರಿಕಾರ ಇಷಿಗುರೊಗೆ `ನೊಬೆಲ್' ಮೆರುಗು
ಸ್ಟಾಕ್ಹೋಮ್: ಬ್ರಿಟನ್ನ ಕಾದಂಬರಿಕಾರ ಕಜುವೊ ಇಷಿಗುರೊ (62) ಅವರಿಗೆ ಈ ಬಾರಿಯ ಸಾಹಿತ್ಯದ ನೊಬೆಲ್ ಪುರಸ್ಕಾರ ಘೋಷಣೆಯಾಗಿದೆ. ಅಮೆರಿಕದ ಗಾಯಕ ಮತ್ತು ಕವಿ ಬಾಬ್ ಡಿಲಾನ್ಗೆ ಕಳೆದ ವರ್ಷ ನೊಬೆಲ್ ಪ್ರಶಸ್ತಿ ನೀಡಿದ್ದು ವಿವಾದ ಸೃಷ್ಟಿಸಿತ್ತು. ಈ ಬಾರಿ `ಅತ್ಯುತ್ತಮ ಕಾದಂಬರಿಕಾರ'ನನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ನೊಬೆಲ್ ಪ್ರಶಸ್ತಿ ನೀಡುವ ಸ್ವೀಡಿಷ್ ಅಕಾಡೆಮಿ ಹೇಳಿದೆ.
ಇಷಿಗುರೊ ಹುಟ್ಟಿದ್ದು ಜಪಾನ್ನ ನಾಗಸಾಕಿಯಲ್ಲಾದರೆ ಬೆಳೆದದ್ದು ಬ್ರಿಟನ್ನಲ್ಲಿ. ಅವರ `ರಿಮೈನ್ಸ್ ಆಫ್ ದ ಡೇ' ಎಂಬ ಕಾದಂಬರಿ 1989ರಲ್ಲಿ ಮ್ಯಾನ್ ಬೂಕರ್ ಪ್ರಶಸ್ತಿಗೆ ಪಾತ್ರವಾಗಿತ್ತು. ಎರಡನೇ ಮಹಾಯುದ್ಧದ ಬಳಿಕದ ಬ್ರಿಟನ್ನಲ್ಲಿ ಜೀವಿಸಿದ್ದ ಸೂಕ್ಷ್ಮ ಮನಸ್ಥಿತಿಯ ದಮನಕ್ಕೊಳಗಾದ ಬಾಣಸಿಗನೊಬ್ಬನ ಕತೆ ಹೇಳುವ ಈ ಕಾದಂಬರಿ ಅದೇ ಹೆಸರಿನಲ್ಲಿ ಸಿನಿಮಾ ಆಗಿತ್ತು. ಆಸ್ಕರ್ಗೆ ನಾಮ ನಿದರ್ೇಶನಗೊಂಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿಯೂ ಭಾರಿ ಗಳಿಕೆ ದಾಖಲಿಸಿತ್ತು.
`ಅವರೊಬ್ಬ ಅತ್ಯುತ್ತಮ ಕಾದಂಬರಿಕಾರ. ಕಾದಂಬರಿಕಾರರಾದ ಜೇನ್ ಆಸ್ಟಿನ್ ಮತ್ತು ಫ್ರಾಂಜ್ ಕಾಫ್ಕಾ ಅವರನ್ನು ಒಂದಾಗಿಸಿದರೆ ನಿಮಗೆ ಇಷಿಗುರೊ ಸಿಗುತ್ತಾರೆ' ಎಂದು ಸ್ವೀಡಿಷ್ ಅಕಾಡೆಮಿಯ ಕಾಯಂ ಕಾರ್ಯದಶರ್ಿ ಸಾರಾ ಡೇನಿಯಸ್ ಹೇಳಿದ್ದಾರೆ.
`ಜಗತ್ತಿನೊಂದಿಗಿನ ನಂಟಿನ ಬಗ್ಗೆ ಮನುಷ್ಯ ಹೊಂದಿರುವ ಭ್ರಾಮಕ ಭಾವದ ಹಿಂದಿನ ಅಗಾಧ ಆಳಕ್ಕೆ ಅವರು ಬೆಳಕು ಚೆಲ್ಲಿದ್ದಾರೆ. ಅವರ ಕಾದಂಬರಿಗಳಲ್ಲಿ ಅಪಾರವಾದ ಭಾವನಾತ್ಮಕ ಚೈತನ್ಯ ಇದೆ' ಎಂದು ಇಷಿಗುರೊ ಅವರನ್ನು ಅಕಾಡೆಮಿ ಹೊಗಳಿದೆ.
`ನನ್ನ ಕಾದಂಬರಿಯ ಪಾತ್ರಗಳು ತಮ್ಮ ನಡವಳಿಕೆ ಬಗ್ಗೆ ಬಳಿಕ ವಿಷಾದಿಸುತ್ತವೆ ಎಂಬುದರ ಬಗ್ಗೆ ನನಗೆ ಆಸಕ್ತಿಯಿಲ್ಲ. ಆದರೆ ಈ ವಿಷಾದವನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದು ನನಗೆ ಮುಖ್ಯ' ಎಂದು `ದ ರಿಮೈನ್ಸ್ ಆಫ್ ದ ಡೇ' ಕಾದಂಬರಿ ಬಿಡುಗಡೆಯಾದಾಗ ಅವರು ಹೇಳಿದ್ದರು.
ಇಷಿಗುರೊ ಅವರು ಸೂಕ್ಷ್ಮ ರಾಜಕೀಯ ಪ್ರಜ್ಞೆ ಹೊಂದಿರುವ ಲೇಖಕ. ಐರೋಪ್ಯ ಒಕ್ಕೂಟದಿಂದ ಹೊರಗೆ ಬರುವುದರ ಪರ ಬ್ರಿಟನ್ನ ಜನರು ಮತ ಹಾಕಿದ ಬಳಿಕ ಅಲ್ಲಿ ವಲಸಿಗರ ಬಗ್ಗೆ ಅಸಹನೆ ಹೆಚ್ಚುತ್ತಿದೆ ಎಂದು ಹೇಳಿ ಅವರು ವಿವಾದ ಸೃಷ್ಟಿಸಿದ್ದರು.
ಬರೆಯುವುದೇ ಬದುಕು:
ಇಷಿಗುರೊ ಐದು ವರ್ಷದ ಬಾಲಕನಾಗಿದ್ದಾಗ ಹೆತ್ತವರು ಬ್ರಿಟನ್ಗೆ ವಲಸೆ ಹೋದರು. ಇಷಿಗುರೊ ಅವರು ಈಸ್ಟ್ ಆ?ಯಂಗ್ಲಿಯಾ ವಿಶ್ವವಿದ್ಯಾಲಯದಲ್ಲಿ ಸೃಜನಶೀಲ ಬರವಣಿಗೆಯನ್ನು ಅಭ್ಯಾಸ ಮಾಡಿದ್ದಾರೆ. 1982ರಲ್ಲಿ ಅವರ ಮೊದಲ ಕಾದಂಬರಿ `ಎ ಪೇಲ್ ವ್ಯೂ ಆಫ್ ದ ಹಿಲ್ಸ್' ಪ್ರಕಟವಾಯಿತು. ಬಳಿಕ ಅವರು ಬರವಣಿಗೆಯನ್ನೇ ವೃತ್ತಿಯಾಗಿ ಮಾಡಿಕೊಂಡರು.
10 ಲಕ್ಷಕ್ಕೂ ಹೆಚ್ಚು ಪ್ರತಿ ಮಾರಾಟ
ದ ರಿಮೈನ್ಸ್ ಆಫ್ ದ ಡೇ ಮತ್ತು ನೆವರ್ ಲೆಟ್ ಮಿ ಗೊ ಇಷಿಗುರೊ ಅವರ ಅತ್ಯಂತ ಜನಪ್ರಿಯ ಕಾದಂಬರಿಗಳು. ಈ ಎರಡೂ ಕೃತಿಗಳ ಹತ್ತು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಇಷಿಗುರೊ ಕವಿಯೂ ಹೌದು. ಜತೆಗೆ ಸಿನಿಮಾಗಳಿಗೆ ಚಿತ್ರಕತೆ ಬರೆದಿದ್ದಾರೆ
ಕಳೆದು ಹೋದ ಕಾಲವನ್ನು ಅರ್ಥ ಮಾಡಿಕೊಳ್ಳುವುದು ಇಷಿಗುರೊ ಅವರ ಆಸಕ್ತಿಯ ವಿಷಯ. ವ್ಯಕ್ತಿ ಅಥವಾ ಸಮಾಜ ತನ್ನ ಅಸ್ತಿತ್ವಕ್ಕಾಗಿ ಏನನ್ನು ಮರೆಯಬೇಕಾಗುತ್ತದೆಯೋ ಅದನ್ನು ಅವರು ಶೋಧಿಸುತ್ತಾರೆ.
?ಸಾರಾ ಡೇನಿಯಸ್,
ಸ್ವೀಡಿಷ್ ಅಕಾಡೆಮಿಯ ಕಾಯಂ ಕಾರ್ಯದಶರ್ಿ
ಜಗತ್ತು ಬಹಳ ಅನಿಶ್ಚಿತವಾಗಿದೆ. ಎಲ್ಲ ನೊಬೆಲ್ ಪ್ರಶಸ್ತಿಗಳ ಶಕ್ತಿ ಈ ಅನಿಶ್ಚಿತ ಸ್ಥಿತಿಯನ್ನು ಸಕಾರಾತ್ಮಕವಾಗಿ ಪರಿವತರ್ಿಸಲು ನೆರವಾಗಲಿ ಎಂದು ಆಶಿಸುತ್ತೇನೆ.
=ಕಜುವೊ ಇಷಿಗುರೊ
ಒಷಿಗುರೊ ಅವರ ಕಾದಂಬರಿಗಳು::
ಎ ಪೇಲ್ ವ್ಯೂ ಆಫ್ ಹಿಲ್ಸ್ (1982)
ಎನ್ ಆಟರ್ಿಸ್ಟ್ ಆಫ್ ದಿ ಫ್ಲೋಟಿಂಗ್ ವಲ್ಡರ್್ (1986)
ದ ರಿಮೈನ್ಸ್ ಆಫ್ ದ ಡೇ (1989)
ದ ಅನ್ಕನ್ಸೋಲ್ಡ್ (1995)
ವೆನ್ ವಿ ವೆರ್ ಆರ್ಫನ್ಸ್ (2000)
ನೆವರ್ ಲೆಟ್ ಮಿ ಗೊ (2005)
ದ ಬರೀಡ್ ಜೈಂಟ್ (2015)
ಅಣ್ವಸ್ತ್ರ ವಿರೋಧಿ ಆಂದೋಲನಕ್ಕೆ ನೊಬೆಲ್ ಶಾಂತಿ ಪುರಸ್ಕಾರ"::
ಅಣ್ವಸ್ತ್ರ ವಿರೋಧಿ ಅಂತರರಾಷ್ಟ್ರೀಯ ಆಂದೋಲನ (ಐಸಿಎಎನ್) ಸಂಘಟನೆಯು 2017ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾಗಿದೆ.
ಐಸಿಎಎನ್ ಸಂಘಟನೆಯು ಅಣ್ವಸ್ತ್ರ ವಿರೋಧಿ ಚಳವಳಿಯ ಮುಂಚೂಣಿಯಲ್ಲಿದೆ.
ಡಿಸೆಂಬರ್ 10ರಂದು ಓಸ್ಲೊದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ.
ಐಕ್ಯಾನ್'ಗೆ ಶಾಂತಿ ನೊಬೆಲ್ ಪುರಸ್ಕಾರ
ಜಿನೀವಾ : ಅಣು ಬಾಂಬ್ ಬಳಕೆಯ ಅಪಾಯದ ಬಗ್ಗೆ ಎಚ್ಚರಿಕೆ ನೀಡಿರುವ ನೊಬೆಲ್ ಪ್ರಶಸ್ತಿ ಸಮಿತಿಯು, ಶಾಂತಿ ಸ್ಥಾಪನೆಗಾಗಿ ನಡೆಸಿದ ಹೋರಾಟಕ್ಕೆ ನೀಡಲಾಗುವ ನೊಬೆಲ್ ಪುರಸ್ಕಾರವನ್ನು ಜಗತ್ತನ್ನು ಅಣ್ವಸ್ತ್ರಮುಕ್ತಗೊಳಿಸಲು ಶ್ರಮಿಸುತ್ತಿರುವ ಸಂಘಟನೆ `ಐಕ್ಯಾನ್'ಗೆ ನೀಡುವುದಾಗಿ ಘೋಷಿಸಿದೆ.
ಐಕ್ಯಾನ್ ಎಂದರೆ ಇಂಟರ್ನ್ಯಾಷನಲ್ ಕ್ಯಾಂಪೇನ್ ಟು ಅಬಾಲಿಷ್ ನ್ಯೂಕ್ಲಿಯರ್ ವೆಪನ್ಸ್ (ಅಣ್ವಸ್ತ್ರ ನಿಮರ್ೂಲನೆಗಾಗಿ ಅಂತರರಾಷ್ಟ್ರೀಯ ಅಭಿಯಾನ) (ಐಕ್ಯಾನ್).
ಇದು ಅಷ್ಟೊಂದು ಪ್ರಸಿದ್ಧ ಸಂಘಟನೆ ಅಲ್ಲ. ಸಂಘಟನೆಯೇ ಹೇಳಿಕೊಳ್ಳುವಂತೆ, ಇದು ತಳಮಟ್ಟದಲ್ಲಿ ಕೆಲಸ ಮಾಡುವ ಸಕರ್ಾರೇತರ ಸಂಘಟನೆಗಳ ಕೂಟ. ಈಗ ನೂರಕ್ಕೂ ಹೆಚ್ಚು ದೇಶಗಳಲ್ಲಿ ಕೆಲಸ ಮಾಡುತ್ತಿದೆ. 2007ರಲ್ಲಿ ವಿಯೆನ್ನಾದಲ್ಲಿ ಅಧಿಕೃತವಾಗಿ ತನ್ನ ಕಾರ್ಯಚಟುವಟಿಕೆಯನ್ನು ಐಕ್ಯಾನ್ ಆರಂಭಿಸಿತು.
ಅಣ್ವಸ್ತ್ರ ಬಳಕೆಯ ಅಪಾಯ ಬಹಳ ಹೆಚ್ಚಾಗಿರುವ ಜಗತ್ತಿನಲ್ಲಿ ನಾವು ವಾಸಿಸುತ್ತಿದ್ದೇವೆ ಎಂದು ಪ್ರಶಸ್ತಿ ಸಮಿತಿಯ ಪದಾಧಿಕಾರಿ ಬೆರಿಟ್ ರೀಸ್ ಆಯಂಡರ್ಸನ್ ಹೇಳಿದ್ದಾರೆ.
ಅಣ್ವಸ್ತ್ರ ನಿಷೇಧಕ್ಕಾಗಿ ವಿಶ್ವಸಂಸ್ಥೆಯು ರೂಪಿಸಿದ ಒಪ್ಪಂದಕ್ಕೆ ಜುಲೈಯಲ್ಲಿ 122 ದೇಶಗಳು ಸಹಿ ಮಾಡಿವೆ. ಆದರೆ ಈ ಒಪ್ಪಂದಕ್ಕೆ ಅಣ್ವಸ್ತ್ರ ಹೊಂದಿರುವ ದೇಶಗಳಾದ ಅಮೆರಿಕ, ರಷ್ಯಾ, ಚೀನಾ, ಬ್ರಿಟನ್, ಫ್ರಾನ್ಸ್, ಭಾರತ, ಇಸ್ರೇಲ್ ಮತ್ತು ಪಾಕಿಸ್ತಾನ ಸಹಿ ಮಾಡಿಲ್ಲ.
`ಜಾಗತಿಕ ಮಟ್ಟದಲ್ಲಿ ಅತಿಯಾದ ಉದ್ವಿಗ್ನತೆ ಇದೆ. ಭೀತಿ ಸೃಷ್ಟಿಸುವ ಬೆದರಿಕೆ ಮಾತುಗಳು ಬಹಳ ಸುಲಭವಾಗಿ, ನಿಷ್ಕರುಣೆಯಿಂದ ಊಹಿಸಲಾಗದಂತಹ ಕ್ರೌರ್ಯಕ್ಕೆ ನಮ್ಮನ್ನು ತಳ್ಳಬಹುದು. ಅಣ್ವಸ್ತ್ರ ಯುದ್ಧದ ಭೀತಿ ಮತ್ತೆ ಗಾಢವಾಗಿ ಕಾಡುತ್ತಿದೆ. ಅಣ್ವಸ್ತ್ರಗಳಿಗೆ ತಮ್ಮ ವಿರೋಧವನ್ನು ದೇಶಗಳು ದೃಢವಾಗಿ ಸಾರಬೇಕಿರುವ ಸಂದರ್ಭ ಇದ್ದರೆ ಅದು ಈಗಲೇ' ಎಂದು ಐಕ್ಯಾನ್ ಹೇಳಿದೆ.
ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಅಣ್ವಸ್ತ್ರ ಬಳಕೆಯ ಬೆದರಿಕೆಗಳು ವಿನಿಮಯ ಆಗುತ್ತಿದೆ. ಇರಾನ್ ಜತೆಗೆ ಅಮೆರಿಕ ಮತ್ತು ಇತರ ದೇಶಗಳು 2015ರಲ್ಲಿ ಮಾಡಿಕೊಂಡ ಅಣ್ವಸ್ತ್ರ ತಯಾರಿಕೆ ನಿಷೇಧ ಒಪ್ಪಂದ ಅನಿಶ್ಚಿತವಾಗಿದೆ. ಇಂತಹ ಸಂದರ್ಭದಲ್ಲಿ ಅಣು ನಿಶ್ಶಸ್ತ್ರೀಕರಣಕ್ಕೆ ಬಲ ತುಂಬುವುದಕ್ಕಾಗಿ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ ಪ್ರಯತ್ನಿಸಿದೆ.
ಅಚ್ಚರಿ: ಹೆಚ್ಚು ಸದ್ದು ಗದ್ದಲವಿಲ್ಲದೆ ಕೆಲಸ ಮಾಡುತ್ತಿರುವ ಐಕ್ಯಾನ್ಗೆ ಪ್ರಶಸ್ತಿ ಘೋಷಿಸುವ ಮೂಲಕ ನೊಬೆಲ್ ಪ್ರಶಸ್ತಿಯು ಅಚ್ಚರಿ ಮೂಡಿಸಿದೆ. ಅಣ್ವಸ್ತ್ರ ತಯಾರಿಕೆ ತಡೆಯುವುದಕ್ಕೆ ಇರಾನ್ ಜತೆಗೆ ಅತ್ಯಂತ ಸಂಕೀರ್ಣ ಒಪ್ಪಂದವನ್ನು ಹಲವು ಸುತ್ತು ಮಾತುಕತೆ ಮತ್ತು ಸಂಧಾನದ ಮೂಲಕ ಮಾಡಲಾಗಿದೆ. ಹಾಗಾಗಿ ಈ ಒಪ್ಪಂದದ ಹಿಂದೆ ಇದ್ದವರಿಗೆ ಈ ಬಾರಿಯ ಶಾಂತಿ ನೊಬೆಲ್ ಪುರಸ್ಕಾರ ದೊರೆಯಬಹುದು ಎಂಬ ನಿರೀಕ್ಷೆ ಇತ್ತು.
`ಪ್ರಶಸ್ತಿಗೆ ಯಾರನ್ನು ಆಯ್ಕೆ ಮಾಡಬೇಕು ಎಂಬುದಕ್ಕೆ ನೊಬೆಲ್ ಸಮಿತಿಯು ತನ್ನದೇ ಆದ ಮಾನದಂಡಗಳನ್ನು ಹೊಂದಿದೆ. ಹಾಗಿದ್ದರೂ ಇರಾನ್ ಜತೆಗಿನ ಒಪ್ಪಂದ, ಕಾರ್ಯರೂಪಕ್ಕೆ ಬಂದ ದೊಡ್ಡ ಪ್ರಯತ್ನ. ಈ ಒಪ?ಪಂದಕ್ಕಾಗಿ ಕೆಲಸ ಮಾಡಿದವರು ಶಾಂತಿ ನೊಬೆಲ್ಗೆ ಅರ್ಹರು' ಎಂದು ಸ್ವೀಡನ್ನ ಮಾಜಿ ಪ್ರಧಾನಿ ಕಾಲರ್್ ಬಿಲ್ಟ್ ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಿರುಗೇಟು ನೀಡುವುದಕ್ಕಾಗಿಯೇ ಈ ಆಯ್ಕೆ ಮಾಡಲಾಗಿದೆ ಎಂಬ ಆರೋಪವನ್ನು ನೊಬೆಲ್ ಪ್ರಶಸ್ತಿ ಸಮಿತಿ ಅಲ್ಲಗಳೆದಿದೆ. ಅಣು ನಿಶ್ಶಸ್ತ್ರೀಕರಣದ ಭರವಸೆ ಕೊಟ್ಟ ದೇಶಗಳು ಆ ಭರವಸೆಯನ್ನು ಕಾರ್ಯರೂಪಕ್ಕೆ ತರುವುದನ್ನು ನೆನಪಿಸುವುದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಸಮಿತಿ ಹೇಳಿದೆ.
ಇಷಿಗುರೊ ಪುಸ್ತಕಗಳಿಗೆ ಭಾರಿ ಬೇಡಿಕೆ
ಟೋಕಿಯೊ: ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾದ ಬಳಿಕ, ಬ್ರಿಟನ್ನ ಕಾದಂಬರಿಕಾರ ಕಜುವೊ ಇಷಿಗುರೊ ಅವರ ಪುಸ್ತಕಗಳಿಗೆ ಭಾರಿ ಬೇಡಿಕೆ ಉಂಟಾಗಿದೆ.
`ಕಳೆದ ರಾತ್ರಿಯಿಂದ ಇಷಿಗುರೊ ಅವರ ಪುಸ್ತಕಗಳಿಗೆ ಭಾರಿ ಬೇಡಿಕೆ ಬರುತ್ತಿದೆ. ನಮಗೆ ತೀವ್ರ ಸಂತೋಷವಾಗುತ್ತಿದೆ. ಈಗಾಗಲೇ ಜಪಾನಿ ಭಾಷೆಯಲ್ಲಿ ಪ್ರಕಟವಾಗಿರುವ ಅವರ ಎಂಟು ಪುಸ್ತಕಗಳನ್ನು ಮರುಮುದ್ರಣ ಮಾಡಲು ನಿರ್ಧರಿಸಲಾಗಿದೆ' ಎಂದು ಜಪಾನ್ನಲ್ಲಿ ಅವರ ಪುಸ್ತಕಗಳನ್ನು ಪ್ರಕಟಿಸುವ ಸಂಸ್ಥೆಯ ವಕ್ತಾರೆ ಹಯಕಾವಾ ಹೇಳಿದ್ದಾರೆ.
ಇಷಿಗುರೊ ಅವರ ಸುಪ್ರಸಿದ್ಧ ಕಾದಂಬರಿ `ದಿ ರಿಮೇನ್ಸ್ ಆಫ್ ದಿ ಡೇ' ಕಾದಂಬರಿ ಜಪಾನಿಗೆ ಅನುವಾದವಾಗಿರುವ ಕೃತಿಗಳಲ್ಲಿ ಸೇರಿದೆ.
'ಜಪಾನ್ ತನ್ನ ಪುತ್ರನನ್ನು ಮನಸಿನ ಆಳದಿಂದ ಅಭಿನಂದಿಸುತ್ತದೆ' ಎಂದು ಸಕರ್ಾರಿ ವಕ್ತಾರ ಯೊಶಿಹೈಡ್ ಸುಗ ತಿಳಿಸಿದ್ದಾರೆ. ಪ್ರಸಿದ್ಧ ಕಾದಂಬರಿಕಾರ ಹರುಕಿ ಮುರಕಾಮಿ ಅವರು ನೊಬೆಲ್ಗೆ ಆಯ್ಕೆಯಾಗಬಹುದು ಎಂದು ಜಪಾನ್ ಜನತೆ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಇಷಿಗುರೊ ಅವರು ನೊಬೆಲ್ಗೆ ಆಯ್ಕೆಯಾದರು.
ಮಧ್ಯರಾತ್ರಿಯಲ್ಲಿ ಪುಸ್ತಕದ ಅಂಗಡಿಗಳು, ತಮ್ಮ ಬಳಿ ಇರುವ ಇಷಿಗುರೊ ಅವರ ಪುಸ್ತಕಗಳನ್ನು ಹುಡುಕಿ ಹರುಕಿ ಮುರಕಾಮಿ ಅವರ ಪುಸ್ತಕಗಳ ಮೇಲ್ಭಾಗದಲ್ಲಿ ಜೋಡಿಸಿಡುವ ದೃಶ್ಯಗಳನ್ನು ಅಲ್ಲಿನ ಮಾಧ್ಯಮಗಳು ಪ್ರಸಾರ ಮಾಡಿವೆ.