ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 13, 2017
ಡಾವಿಂಚಿಯ ಏಸು ಕಲಾಕೃತಿ =658 ಕೋಟಿಗೆ ಹರಾಜಾಗುವ ನಿರೀಕ್ಷೆ !
ನ್ಯೂಯಾಕರ್್: ಪ್ರಸಿದ್ಧ ಚಿತ್ರಕಲಾವಿದ ಲಿಯನಾಡರ್ೊ ಡಾವಿಂಚಿ ಅವರು ರಚಿಸಿರುವ `ಸಾಲ್ವೇಟರ್ ಮುಂಡಿ' (ಜಗದ ರಕ್ಷಕ) ಏಸು ಕ್ರಿಸ್ತನ ಕಲಾಕೃತಿಯು ಸುಮಾರು ?658 ಕೋಟಿಗೆ ಹರಾಜಾಗುವ ನಿರೀಕ್ಷೆಯಿದೆ.
ಆಕಾಶ ನೀಲಿ ಬಣ್ಣದ ನಿಲುವಂಗಿ ತೊಟ್ಟಿರುವ ಏಸು ಕ್ರಿಸ್ತ ಎಡದ ಕೈಯಲ್ಲಿ ಸ್ಫಟಿಕದ ಗೋಲವನ್ನು ಹಿಡಿದಿರುವ ಹಾಗೂ ಬಲಗೈಯಲ್ಲಿ ಆಶೀವರ್ಾದ ಮುದ್ರೆ ತೋರಿರುವ ಈ ಕಲಾಕೃತಿಯು ಡಾವಿಂಚಿಯ ಜಗತ್ಪ್ರಸಿದ್ಧ ಕಲಾಕೃತಿಗಳಲ್ಲೊಂದಾಗಿದೆ.
1958ರಲ್ಲಿ ಈ ಕಲಾಕೃತಿಯು 45 ಪೌಂಡ್ಗೆ ಹರಾಜಾಗಿತ್ತು. ನವೆಂಬರ್ 15ರಂದು ನ್ಯೂಯಾಕರ್್ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಇದರ ಮಾಲೀಕತ್ವ ಹೊಂದಿರುವ ಕ್ರಿಸ್ಟೀಸ್ ಸಂಸ್ಥೆ ಹೇಳಿದೆ