ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 16, 2017
ಕಲಾಂ ನೆನಪುಗಳ ಹೊತ್ತಗೆ ಪ್ರಕಟ
ಲಕ್ನೋ: ದೇಶದ ಯುವಮನಸುಗಳ ಕನಸುಗಳು ಹಾಗೂ ಕೈಬರಹದ ಪತ್ರಗಳನ್ನು ಒಳಗೊಂಡ ಮತ್ತು ಕಲಾಂ ಚಿಂತನೆಗಳನ್ನು ತಿಳಿಸುವ ವಿವರಣಾತ್ಮಕ ಪುಸ್ತಕವೊಂದನ್ನು ಅವರ 86 ನೇ ಜನ್ಮದಿನದ ನಿಮಿತ್ತ ಹೊರತರಲಾಗಿದೆ .
`ಡ್ರೀಮ್ನೇಷನ್ : ಯುನೈಟಿಂಗ್ ಎ ಕಂಟ್ರಿ ವಿತ್ ಹ್ಯಾಂಡ್ರಿಟನ್ ಡ್ರೀಮ್ಸ್ ' ಪುಸ್ತಕದಲ್ಲಿ 200ಕ್ಕೂ ಹೆಚ್ಚು ಕೈಬರಹದ ಪೋಸ್ಟ್ಕಾಡ್ರ್ಗಳನ್ನು ಮುದ್ರಿಸಲಾಗಿದೆ .
ಲೇಖಕರಾದ ಸಾಜಿ ಮ್ಯಾಥ್ಯೂ ಮತ್ತು ಜುಬಿ ಜಾನ್ ಅವರು ಈ ಪುಸ್ತಕದಲ್ಲಿ, ಕಲಾಂ ಅವರ ಸ್ಫೂತರ್ಿದಾಯಕ ಮಾತುಗಳನ್ನು ವಿವರಿಸುತ್ತಾ ಹೋಗುತ್ತಾರೆ . ಪುದುಚೇರಿಯ ಗವರ್ನರ್ ಕಿರಣ್ ಬೇಡಿ ಅವರು ಮುನ್ನುಡಿ ಬರೆದಿದ್ದಾರೆ .
ಇದರಲ್ಲಿ 4 ಭಾಗಗಳಿವೆ . ಪ್ರತಿ ಭಾಗವೂ ಕಲಾಂ ಅವರ ಕನಸುಗಳ ಉಲ್ಲೇಖದಿಂದ ಕೂಡಿವೆ.ವಿವಿಧ ಭಾಷೆಗಳಲ್ಲಿ, ದೇಶದ ನಾನಾ ಮೂಲೆಗಳಿಂದ ಸಾವಿರಾರು ಜನರು ಬರೆದ ಅಂಚೆಪತ್ರಗಳಲ್ಲಿ ಆಯ್ದವನ್ನು ಇಲ್ಲಿ ಪ್ರಕಟಿಸಲಾಗಿದೆ . ಯುವ ಭಾರತದ ಕನಸುಗಳು ಇಲ್ಲಿ ವ್ಯಕ್ತವಾಗಿವೆ.
ಬಾಲಕಾಮರ್ಿಕ ಪದ್ಧತಿ ತಡೆ, ಮಹಿಳಾ ಸಬಲೀಕರಣ , ವರದಕ್ಷಿಣೆ ಬೇಡ , ಆಥರ್ಿಕ ಸಬಲೀಕರಣ , ಸ್ವಚ್ಛ ದೇಶ, ಸಾಂಸ್ಕೃತಿಕ ಐಕ್ಯತೆ , ಧಾಮರ್ಿಕ ಸಾಮರಸ್ಯ ಮೊದಲಾದ ವಿಷಯಗಳ ಬಗ್ಗೆ ಜನರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಲಾಭಾಪೇಕ್ಷೆಯಿಲ್ಲದ ಲೆಟಫರ್ಾಮ್ಸರ್್ ಅಂಡ್ ಬ್ಲೂಮ್ಸ್ಬರಿ ಸಂಘಟನೆಯು ಇದನ್ನು ಪ್ರಕಟಿಸಿದೆ .
ಕಲಾಂ ಸ್ಮರಿಸಿದ ರಾಷ್ಟ್ರಪತಿ
ಅಬ್ದುಲ್ ಕಲಾಂ ಅವರು ಯುವಜನರ ಮನಸುಗಳನ್ನು ಬೆಳಗಿಸಿದ ಮಹಾನ್ ದೂರದೃಷ್ಟಿಯುಳ್ಳ ವ್ಯಕ್ತಿ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸ್ಮರಿಸಿದರು .
ಡಾ. ಕಲಾಂ ಅವರ ಜನ್ಮದಿನಾಚರಣೆ ನಿಮಿತ್ತ ರಾಮೇಶ್ವರದಿಂದ ರಾಷ್ಟ್ರಪತಿ ಭವನಕ್ಕೆ ಬಂದಿದ್ದ ವಿದ್ಯಾಥರ್ಿಗಳ ಸಮೂಹವನ್ನು ಉದ್ದೇಶಿಸಿ ಭಾನುವಾರ ಅವರು ಮಾತನಾಡಿದರು .
ಪರಮಾಣು ತಂತ್ರಜ್ಞಾನದಿಂದ ಹಿಡಿದು ಕಡಿಮೆ ವೆಚ್ಚದ ಸ್ಟೆಂಟ್ಗಳ ವಿನ್ಯಾಸದವರೆಗೆ ವಿಜ್ಞಾನದ ಹಲವು ಕ್ಷೇತ್ರಗಳಲ್ಲಿ ಕಲಾಂ ತಮ್ಮ ಅಭೂತಪೂರ್ವ ಕೊಡುಗೆ ನೀಡಿದ್ದಾರೆ ಎಂದು ಕೋವಿಂದ್ ಅವರು ಸ್ಮರಿಸಿದರು .
ಕಲಾಂ ಸಂದೇಶ ವಾಹಿನಿ:
`ಕಲಾಂ ಸಂದೇಶ ವಾಹಿನಿ ' ಬಸ್ನಲ್ಲಿ ಕಲಾಂ ಅವರ ಜೀವನಚಿತ್ರವನ್ನು ಕಾಣಬಹುದು . ಇಲ್ಲಿ ಕಲಾಂ ಅವರ ವೈಜ್ಞಾನಿಕ ಕೊಡುಗೆಗಳು , ರಾಷ್ಟ್ರಪತಿಯಾಗ ಅವರ ಸೇವೆ ಹಾಗೂ ಪ್ರಮುಖ ಘಟನೆಗಳ ಸಮಗ್ರ ಮಾಹಿತಿ ಸಿಗುತ್ತದೆ . ಜುಲೈ 27 ರಂದು ರಾಮೇಶ್ವರಂನಲ್ಲಿ ಕಲಾಂ ಸ್ಮಾರಕ ಉದ್ಘಾಟನೆ ವೇಳೆ ಪ್ರಧಾನಿ ಮೋದಿ ಅವರು ಸಂದೇಶ ವಾಹಿನಿಯನ್ನು ಉದ್ಘಾಟಿಸಿದ್ದರು . ಹಲವು ರಾಜ್ಯಗಳಲ್ಲಿ ಸಂಚರಿಸಿರುವ ಈ ಬಸ್ , ರಾಷ್ಟ್ರಪತಿ ಭವನವನ್ನು ತಲುಪಿದೆ