ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 02, 2017
ಕುಳೂರು ಶಾಲೆಯಲ್ಲಿ ದಸರಾ ಆಚರಣೆ
ಮಂಜೇಶ್ವರ: ಕುಳೂರಿನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಸರಾ ನಾಡಹಬ್ಬ ಆಚರಿಸಲಾಯಿತು.
ಆ ಪ್ರಯುಕ್ತ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳು ಹಾಗೂ ಮನೋರಂಜನಾ ಆಟಗಳನ್ನು ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಸದಸ್ಯೆ ಚಂದ್ರಾವತಿ ವಿ.ಪಿ., ಮಧೂರು ಶಾಲೆಯ ಮುಖ್ಯೋಪಾಧ್ಯಾಯ ವಿನೋದ್ ಕುಮಾರ್ ಬಿ. ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾಥರ್ಿ ಸಂಘದ ಕಾರ್ಯದಶರ್ಿ ಹರಿರಾಮ ಕುಳೂರು, ಶಾಲಾ ಮಾತೃ ಮಂಡಳಿ ಅಧ್ಯಕ್ಷೆ ಆಶಾಲತಾ ಕುಳೂರು, ಉಪಾಧ್ಯಕ್ಷೆ ಸೌಮ್ಯಲತಾ, ಹಳೆ ವಿದ್ಯಾಥರ್ಿ ಸಂಘದ ಸದಸ್ಯರಾದ ಸುಬ್ರಾಯ ಆಚಾರ್ಯ, ಜಯರಾಜ ಶೆಟ್ಟಿ ಚಾರ್ಲ, ಜನಾರ್ದನ ಪೂಜಾರಿ, ಶಶಿ ಕುಮಾರ್ ಕುಳೂರು, ರಘುನಾಥ ಕೆ., ಅಧ್ಯಾಪಿಕೆಯರಾದ ಶ್ವೇತಾ, ರೇಶ್ಮಾ, ಶಾಲಾ ರಕ್ಷಕ ಶಿಕ್ಷಕ ಸಂಘ ಹಾಗೂ ಮಾತೃ ಸಂಘದ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶಮರ್ಾ ಸ್ವಾಗತಿಸಿ, ಸೌಮ್ಯಾ ಪಿ. ವಂದಿಸಿದರು. ಅಧ್ಯಾಪಕರಾದ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಡೆಸಿಕೊಟ್ಟರು.