ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 05, 2017
ದಸರಾ ನಾಡ ಹಬ್ಬ, ಶಾರದಾ ಮಹೋತ್ಸವ
ಬದಿಯಡ್ಕ: ಏತಡ್ಕದ ಎ.ಯು.ಪಿ. ಶಾಲೆಯಲ್ಲಿ ದಸರಾ ನಾಡಹಬ್ಬ ಹಾಗು ಶಾರದಾ ಮಹೋತ್ಸವ ವೈವಿಧ್ಯಮಯವಾದ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿದ್ಯಾಥರ್ಿಗಳಿಂದ ಯಕ್ಷಗಾನ ತಾಳಮದ್ದಳೆ `ಗದಾಯುದ್ಧ' ಪ್ರಸ್ತುತಗೊಂಡಿತು. ಬಳಿಕ ಲಕ್ಷ್ಮೀಶ ಕಡಂಬಳಿತ್ತಾಯರ ನೇತೃತ್ವದಲ್ಲಿ ಶ್ರೀ ಶಾರದಾ ಪೂಜೆ ಹಾಗು ಚಿಣ್ಣರಿಗೆ ವಿದ್ಯಾರಂಭ ಕಾರ್ಯಕ್ರಮವು ನಡೆಯಿತು. ಅಪರಾಹ್ನ ನಾಡಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರಗಿತು. ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳಿಂದ ನಾಡಗೀತೆ ಗಾಯನ ನಡೆಯಿತು. ಶಾಲೆಯ ನಿವೃತ್ತ ಅಧ್ಯಾಪಕ ಗೋಪಾಲ ಕೃಷ್ಣ ಭಟ್ರ ಜಾನಪದ ಗೀತೆ ಪ್ರಸ್ತುತಿ ಶೋತೃಗಳನ್ನು ಭಾವುಕರನ್ನಾಗಿಮಾಡಿತು. ಹಿರಿಯ ಸಾಹಿತಿ ಸಾವಿತ್ರಿ ಕೆ.ಭಟ್ ತಮ್ಮ ಸ್ವರಚಿತ ಕವನದ ಮೂಲಕ ಶುಭಹಾರೈಸಿದರೆ ಶಾಲಾ ಮಾತೃಮಂಡಳಿ ಅಧ್ಯಕ್ಷೆ ಸೌಮ್ಯ ನೆಲ್ಲಿಮೂಲೆ ದಸರಾ ಆಚರಣೆಯ ಹಿನ್ನಲೆ ಬಗ್ಗೆ ಮಾತನಾಡಿ ಶುಭಹಾರೈಸಿದರು. ನಾಡಹಬ್ಬದ ಅಂಗವಾಗಿ ವಿದ್ಯಾಥರ್ಿಗಳಿಗೆ ಏರ್ಪಡಿಸಲಾಗಿದ್ದ ಸ್ಪಧರ್ೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು. ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ.ಬೇ.ಸೀ.ಗೋಪಾಲಕೃಷ್ಣ ಭಟ್ ಮಾತನಾಡಿ ಇಂದಿನ ಹಾಗು ಹಿಂದಿನ ಕಾಲದ ನಾಡಹಬ್ಬದ ಆಚರಣೆಯ ಮಹತ್ವ ಮತ್ತು ಕಾಸರಗೋಡಿನ ನೆಲದಲ್ಲಿ ದಸರಾ ನಾಡಹಬ್ಬ ಕನ್ನಡಿಗರ ಏಕೀಕರಣಕ್ಕೆ ಸೂಕ್ತ ವೇದಿಕೆಯಾಗಿ ನಿರ್ವಹಿಸಿದ ಚಟುವಟಿಕೆಯ ಬಗ್ಗೆ ತಿಳಿಸಿದರು. ಹಾಗಾಗಿ ಭುವನೇಶ್ವರಿಯ ಸೇವೆಯಲ್ಲಿ ಕೃತಕೃತ್ಯತೆಯನ್ನು ಕಾಣೋಣ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಕಿಶೋರ್ ರೈ ಕುಂಡಾಪು ವಹಿಸಿದ್ದರು.