ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 12, 2017
ಮುಳ್ಳೇರಿಯ ಶಿವಳ್ಳಿ ಬ್ರಾಹ್ಮಣ ವಲಯ ಸಭೆ
ಮುಳ್ಳೇರಿಯ : ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಮಾಸಿಕ ಸಭೆಯು ಅಡೂರು ಪರಪ್ಪೆ ಗೋಪಾಲಕೃಷ್ಣ ಕಲ್ಲೂರಾಯರ ಮನೆಯಲ್ಲಿ ಇತ್ತೀಚೆಗೆ ನಡೆಯಿತು. ವಲಯ ಅಧ್ಯಕ್ಷ ಕೋಟೆಗದ್ದೆ ದಿನೇಶ್ ಕುಮಾರ್ ಅಡಿಗ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕೇರಳ ರಾಜ್ಯ ಮಾದ್ವ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ನೀಡಲಾಗುವ ವಿವಿಧ ಶೈಕ್ಷಣಿಕ ಪುರಸ್ಕಾರ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳ ಬಗ್ಗೆ ಸಂವಾದ ನಡೆಯಿತು. ಮುಳ್ಳೇರಿಯ ವಲಯದಿಂದ ಶೈಕ್ಷಣಿಕ ಪುರಸ್ಕಾರ ಹಾಗೂ ಪ್ರಶಸ್ತಿಗಳಿಗೆ ವಿವಿಧ ಸಾಧಕರನ್ನು ಗುರುತಿಸಿ ಜಿಲ್ಲಾ ಸಮಿತಿಗೆ ವರದಿ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ಕೃಷ್ಣ ಸರಳಾಯ, ಅಶೋಕ ಸರಳಾಯ, ಉದಯ ಸರಳಾಯ, ಪ್ರಕಾಶ್ ಪಾಂಙಣ್ಣಾಯ, ಶ್ರೀಪ್ರಸಾದ ಭಾರಿತ್ತಾಯ, ಪ್ರೇಮಾ ಭಾರಿತ್ತಾಯ, ಸತ್ಯವತಿ ಕಲ್ಲೂರಾಯ, ಶ್ರೀಧರ ಕಾರಂತ, ಪ್ರಶಾಂತ ರಾಜ ವಿ ತಂತ್ರಿ, ಪೆಲಮರ್ವ ಸದಾಶಿವ ಕಡಂಬಳಿತ್ತಾಯ, ಬಾಲಕೃಷ್ಣ ಮೂಡಿತ್ತಾಯ, ಮಹಾದೇವ ಕಲ್ಲೂರಾಯ ಮೊದಲಾದವರು ಭಾಗವಹಿಸಿದ್ದರು. ಅ.22ರಂದು ಬೆಳಗ್ಗೆ 9.30ರಿಂದ ಅಡೂರಿನ ವಿದ್ಯಾಭಾರತೀ ವಿದ್ಯಾಲಯದಲ್ಲಿ ದೀಪೋತ್ಸವ ಕಾರ್ಯಕ್ರಮ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಂಘಟನೆಯ ಮುಂದಿನ ಸಭೆಯು ಮುಳ್ಳೇರಿಯ ಸಮೀಪದ ಆಲಂತಡ್ಕದ ಪರಮೇಶ್ವರ ಕೇಕುಣ್ಣಾಯರ ಮನೆಯಲ್ಲಿ ನವೆಂಬರ್ 5ರಂದು ಅಪರಾಹ್ನ 2 ಗಂಟೆಯಿಂದ ನಡೆಸಲು ನಿರ್ಧರಿಸಲಾಗಿದೆ. ಡಾ. ನಾಗರಾಜ ಕಲ್ಲೂರಾಯ ಸ್ವಾಗತಿಸಿ, ಅನಂತರಾಮ ಕಡಂಬಳಿತ್ತಾಯ ವಂದಿಸಿದರು. ಕಾರ್ಯಕ್ರಮದಲ್ಲಿ ಶಿವಳ್ಳಿ ಬ್ರಾಹ್ಮಣ ಸಮುದಾಯದ ಅನೇಕ ಮಂದಿ ಭಾಗವಹಿಸಿದ್ದರು.