ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 10, 2017
ತ್ರಿಭಾಷೆಯಲ್ಲಿ ವಿದೇಶಿ ಭಾಷೆ ಇಲ್ಲ
ದೆಹಲಿ: ಸಿಬಿಎಸ್ಇಯ ಮಾನ್ಯತೆ ಪಡೆದ ಶಾಲೆಗಳಲ್ಲಿ ತ್ರಿಭಾಷಾ ಕಲಿಕೆ ಸೂತ್ರದ ಅಡಿಯಲ್ಲಿ ವಿದೇಶಿ ಭಾಷೆ ಕಲಿಕೆಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಅವಕಾಶ ಇರುವುದಿಲ್ಲ ಎಂದು ತಿಳಿದು ಬಂದಿದೆ.
ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್ಇ) ಮಾನವ ಸಂಪನ್ಮೂಲ ಸಚಿವಾಲಯವು ಈಗಾಗಲೇ ಈ ಬಗ್ಗೆ ಪತ್ರ ಬರೆದಿದೆ. ವಿದೇಶಿ ಭಾಷೆ ಕಲಿಯಬೇಕು ಎಂಬ ಇಚ್ಛೆ
ವಿದ್ಯಾಥರ್ಿಗಳಲ್ಲಿ ಇದ್ದರೆ ನಾಲ್ಕು ಅಥವಾ ಐದನೇ ಭಾಷೆಯಾಗಿ ಅದನ್ನು ಕಲಿಯಬೇಕು ಎಂದು ಈ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
`ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ನಮೂದಿಸಲಾಗಿರುವ ಭಾಷೆಗಳನ್ನು ಮಾತ್ರ ತ್ರಿಭಾಷಾ ಸೂತ್ರದ ಅಡಿಯಲ್ಲಿ ಕಲಿಸಬೇಕು. ವಿದೇಶಿ ಭಾಷೆ ಕಲಿಕೆ ಐಚ್ಛಿಕ. ಈ ಬಗ್ಗೆ ಸಿಬಿಎಸ್ಇಯಲ್ಲಿ ಸಮಾಲೋಚನೆಗಳು ಆರಂಭವಾಗಿವೆ. ಮುಂದಿನ ಶೈಕ್ಷಣಿಕ ವರ್ಷದ ಹೊತ್ತಿಗೆ ಇದಕ್ಕೆ ಸಂಬಂಧಿಸಿದ ಸ್ಪಷ್ಟ ನೀತಿ ರೂಪುಗೊಳ್ಳುವ ನಿರೀಕ್ಷೆ ಇದೆ' ಎಂದು ಮೂಲಗಳು ಹೇಳಿವೆ.
ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರದ ಪ್ರಕಾರ, ಹಿಂದಿ ಭಾಷೆಯ ರಾಜ್ಯಗಳ ವಿದ್ಯಾಥರ್ಿಗಳು ಹಿಂದಿ ಮತ್ತು ಇಂಗ್ಲಿಷ್ ಜತೆಗೆ ಭಾರತದ ಮತ್ತೊಂದು ಭಾಷೆ ಕಲಿಯಬೇಕು. ಹಿಂದಿಯೇತರ ರಾಜ್ಯಗಳ ವಿದ್ಯಾಥರ್ಿಗಳು ಹಿಂದಿ, ಇಂಗ್ಲಿಷ್ ಜತೆಗೆ ರಾಜ್ಯ ಭಾಷೆಯನ್ನು ಕಲಿಯಬೇಕು.
ಆದರೆ ಸಿಬಿಎಸ್ಇಯಿಂದ ಮಾನ್ಯತೆ ಪಡೆದಿರುವ 18 ಸಾವಿರ ಶಾಲೆಗಳ ಪೈಕಿ ಹೆಚ್ಚಿನವುಗಳಲ್ಲಿ ಎಂಟನೇ ತರಗತಿವರೆಗೆ ಸ್ಥಳೀಯ ಭಾಷೆ ಅಥವಾ ಹಿಂದಿ, ಇಂಗ್ಲಿಷ್ ಭಾಷೆಗಳ ಜತೆಗೆ ಮೂರನೇ ಭಾಷೆಯಾಗಿ ಜರ್ಮನಿ, ಮ್ಯಾಂಡರಿನ್ನಂತಹ ವಿದೇಶಿ ಭಾಷೆಗಳನ್ನು ಕಲಿಸಲಾಗುತ್ತಿದೆ.
ತ್ರಿಭಾಷಾ ಸೂತ್ರದ ಪ್ರಸ್ತಾವವನ್ನು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಸಿಬಿಎಸ್ಇ ಕಳೆದ ಡಿಸೆಂಬರ್ನಲ್ಲಿ ಸಲ್ಲಿಸಿತ್ತು.ಎಂಟನೇ ತರಗತಿವರೆಗೆ ಮಾತ್ರ ಅನ್ವಯವಾಗುವ ತ್ರಿಭಾಷಾ ಸೂತ್ರವನ್ನು ಹತ್ತನೇ ತರಗತಿವರೆಗೆ ವಿಸ್ತರಿಸಬೇಕು ಮತ್ತು ತ್ರಿಭಾಷಾ ಸೂತ್ರದಲ್ಲಿ ವಿದೇಶಿ ಭಾಷೆ ಕಲಿಸಬಾರದು ಎಂಬುದು ಈ ಪ್ರಸ್ತಾವದ ಮುಖ್ಯ
ಅಂಶಗಳಾಗಿದ್ದವು