ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 11, 2017
ನಾಡಹಬ್ಬ ವಾರಾಚರಣೆ ಸಮಾರೋಪ ಅ.12ರಂದು(ಇಂದು)
ಬದಿಯಡ್ಕ : ಇಲ್ಲಿನ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ಆಶ್ರಯದಲ್ಲಿ ನಡೆಯುತ್ತಿರುವ ದಸರಾ ನಾಡಹಬ್ಬದ ವಾರಾಚರಣೆ ಕಾರ್ಯಕ್ರಮವು ಅ.12ರಂದು ಅಪರಾಹ್ನ 2ರಿಂದ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕೆದಿಲಾಯ ಪ್ರತಿಷ್ಠಾನ ಬೆಂಗಳೂರು ಹಾಗೂ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ 3ನೇ ವರ್ಷದ ಯಕ್ಷಗಾನ ನಾಟ್ಯ ತರಬೇತಿಯನ್ನು ಉದ್ಘಾಟಿಸಲಾಗುವುದು. ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ನಾಟ್ಯಗುರು ಬಾಯಾರು ಸೂರ್ಯನಾರಾಯಣ ಪದಕಣ್ಣಾಯ ಹಾಗೂ ಜಾನಪದ ಪ್ರಶಸ್ತಿ ವಿಜೇತ ಮನು ಪಣಿಕ್ಕರ್ ಅವರನ್ನು ಸನ್ಮಾನಿಸಲಾಗುವುದು. ಕಳೆದ ಒಂದು ವಾರದಿಂದ ನಡೆಯುತ್ತಿರುವ ದಸರಾ ನಾಡಹಬ್ಬ ಆಚರಣೆಯಲ್ಲಿ ಶಾಲಾ ಮಕ್ಕಳಿಂದ ಗಾಯನ, ಸುಶೀಲಾ ಪದ್ಯಾಣ ಹಾಗೂ ಪುಂಡೂರು ಪ್ರಭಾವತಿ ಕೆದಿಲಾಯರಿಂದ ಕಾವ್ಯವಾಚನ ಹಾಗೂ ಪ್ರವಚನ, ವಿರಾಜ್ ಅಡೂರು ಅವರಿಂದ ವ್ಯಂಗ್ಯಚಿತ್ರ ರಚನಾ ತರಬೇತಿ, ಗೀತಾ ಸಾರಡ್ಕ ಅವರಿಂದ ಶಾಸ್ತ್ರೀಯ ಸಂಗೀತ ಮೊದಲಾದ ಕಾರ್ಯಕ್ರಮಗಳು ನಡೆದುವು. ಯಕ್ಷಗಾನ ಕಲಾವಿದ ಕರಿಂಬಿಲ ಲಕ್ಷ್ಮಣ ಪ್ರಭು ದಸರಾ ವಾರಾಚಣೆಯನ್ನು ಉದ್ಘಾಟಿಸಿದ್ದರು. ಅ.12ರಂದು ಅಪರಾಹ್ನ 3ರಿಂದ ರಂಗಸಿರಿ ಸಾಂಸ್ಕೃತಿಕ ವೇದಿಕೆ ಹಾಗೂ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ನರಕಾಸುರ ಮೋಕ್ಷ ಯಕ್ಷಗಾನ ಕೂಟ ನಡೆಯಲಿದೆ.
ವ್ಯಂಗ್ಯಚಿತ್ರ ತರಬೇತಿ ಬದಿಯಡ್ಕದ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಂಗಳವಾರ ದಸರಾ ವಾರಾಚರಣೆಯ ಅಂಗವಾಗಿ ವಿರಾಜ್ ಅಡೂರು ಅವರು ಮಕ್ಕಳಿಗೆ ತರಬೇತಿ ನೀಡಿದರು.