ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 12, 2017
ಮೊಬೈಲು ಟವರ್ ನಿಮರ್ಾಣ=ನಾಗರಿಕರು ಹೋರಾಟದತ್ತ
ಕುಂಬಳೆ: ಕಳತ್ತೂರು ಸಮೀಪದ ಶಿವಗಿರಿ ಅಮೇರಿಕ ಎಂಬಲ್ಲಿಯ ಖಾಸಗೀ ವ್ಯಕ್ತಿಯೋರ್ವರ ನಿವೇಶನ ಬಳಸಿ ಖಾಸಗೀ ಮೊಬೈಲು ಕಂಪೆನಿಯೊಂದು ಟವರ್ ನಿಮರ್ಿಸಲು ಹೊರಟಿರುವುದು ಜನಾಕ್ರೋಶಕ್ಕೆ ಕಾರಣವಾಗಿದ್ದು, ಹೋರಾಟ ನಡೆಸುವ ಮುನ್ನೆಚ್ಚರಿಕೆ ನೀಡಿದ್ದಾರೆ.
ಶಿವಗಿರಿ ಅಮೇರಿಕ ಪರಿಸರ ಗ್ರಾಮೀಣ ಪ್ರದೇಶವಾಗಿದ್ದು, ಬಡ-ಮಧ್ಯಮ ವರ್ಗದ ಜನರು ವಾಸಿಸುವ ಪ್ರದೇಶವಾಗಿದೆ. ಬಹುತೇಕ ಕೃಷಿ ಕೂಲಿ ಕಾಮರ್ಿಕರಾಗಿ ದುಡಿಯುತ್ತಿರುವ ಇಲ್ಲಿನ ಜನರು ಪರಿಸರ ಮತ್ತು ಜೀವ ಸಂಕುಲಗಳಿಗೆ ವಿನಾಶವಾಗುವ ಮೊಬೈಲು ಟವರ್ ನಿಮರ್ಿಸಲು ಬಿಡೆವು ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ. ಇದೇ ಪರಿಸರದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ದೇವಸ್ಥಾನ, ಮಸಿದಿಗಳಿದ್ದು ನೂರಾರು ಕುಟುಂಬಗಳು ವಾಸಿಸುತ್ತಿವೆ. ಹಳ್ಳಿ ಪ್ರದೇಶವಾಗಿರುವುದರಿಂದ ಕಾಡುಗಳಿಂದ ವ್ಯಾಪಿಸಿರುವ ಈ ಪ್ರದೇಶದಲ್ಲಿ ಅನೇಕಾನೇಕ ಪಕ್ಷಿ, ಪ್ರಾಣಿ ಸಂತತಿಗಳು ವಾಸಿಸುತ್ತಿವೆ. ಜೀವಸಂಕುಲಗಳನ್ನು ವಿನಾಶದತ್ತ ಕೊಂಡೊಯ್ಯುವ ಯಾವುದೇ ಚಟುವಟಿಕೆಗಳಿಗೆ ತಮ್ಮ ಹಳ್ಳಿಯನ್ನು ಬಿಟ್ಟು ಕೊಡೆವು ಎಂದು ಸ್ಥಳೀಯರು ಪತ್ರಿಕೆಗೆ ತಿಳಿಸಿರುವರು.
ಈ ಪರಿಸರದಲ್ಲಿ ಈಗಾಗಲೇ ಹೆಚ್ಚಿನ ಮೊಬೈಲ್ ಕಂಪೆನಿಗಳ ಸಂಪರ್ಕ ಸಿಗ್ನಲ್ ಗಳು ಲಭ್ಯವಾಗುತ್ತಿದ್ದು, ಭಾರತ್ ಸಂಚಾರ್ ನಿಗಮದ ಟವರ್ ಈ ಪರಿಸರ ಸನಿಹವಿರುವುದರಿಂದ ಇನ್ನು ಬೇರೆ ಯಾವುದೇ ಟವರ್ ನಿಮರ್ಾಣಕ್ಕೆ ಆಸ್ಪದ ನೀಡಲಾರೆವು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಗ್ರಾ.ಪಂ. ಕಾರ್ಯದಶರ್ಿ, ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಟವರ್ ನಿಮರ್ಾಣಕ್ಕೆ ತಡೆನೀಡಬೇಕೆಂದು ಮನವಿ ನೀಡಲಾಗಿದೆ. ಅಪಾಯಕಾರಿ ಟವರ್ ನಿಮರ್ಾಣದಿಂದ ಹಿಂದೆ ಸರಿಯಬೇಕು. ಅದಿಲ್ಲದಿದ್ದರೆ ಪ್ರಭಲ ಹೋರಾಟ ನಡೆಸುವೆವು ಎಂದು ಎಚ್ಚರಿಕೆ ನೀಡಿದ್ದಾರೆ.
ಏನಂತಾರೆ ಹಿರಿಯರು?:
ಪರಿಸರ, ಜೀವಸಂಕುಲಗಳಿಗೆ ಕಾರಣವಾಗುವ ಯಾವುದೇ ಚಟುವಟಿಕೆಗಳಿಗೆ ಇನ್ನಾದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು.ಅನೇಕ ಪಕ್ಷಿ ಪ್ರಬೇಧಗಳು ಈಗಾಗಲೇ ನಾಶಗೊಂಡಿದ್ದು, ಮತ್ತೆ ಹಲವು ಅದರ ಸನಿಹದಲ್ಲಿದೆ. ಪರಿಸರ, ಪಶುಪಕ್ಷಿಗಳಿಗೆ ಹಾನಿಯಾಗುವ ಮೊಬೈಲ್ ಟವರ್ ನಿಮರ್ಾಣ ಶಿವಗಿರಿ ಪರಿಸರದಲ್ಲಿ ಖಂಡಿತಾ ಬೇಡ.
ರಾಜು ಮಾಸ್ತರ್. ಕಿದೂರು.
ಪರಿಸರ-ಪಕ್ಷಿ ಪ್ರೇಮಿ. ಶಿಕ್ಷಕ.