ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 20, 2017
ವೀರೇಂದ್ರ ಸೆಹ್ವಾಗ್ ಗೆ 'ಉಲ್ಟಾ' ಮೆಸೇಜ್ ಟ್ವೀಟ್ ಮಾಡಿದ ಸಚಿನ್
ಬೆಂಗಳೂರು: ನಜಾಫ್ ಘಡದ ನವಾಬ, ಟೀಂ ಇಂಡಿಯಾ ಕಂಡ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸಾಮಾಜಿಕ ಜಾಲ ತಾಣಗಳ ಟ್ರಾಲ್ ಕಿಂಗ್ ಎನಿಸಿಕೊಂಡಿರುವ ಸೆಹ್ವಾಗ್ ಅವರಿಗೆ ವಿಶಿಷ್ಟ ಶೈಲಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರು ಟ್ವೀಟ್ ಮಾಡಿದ್ದಾರೆ.
ವಿಕಟ ಕವಿಯಂತೆ ಎಲ್ಲರ ಕಾಲೆಳೆಯುವ ಸೆಹ್ವಾಗ್ ಸದ್ಯಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಎಲ್ಲರ ಮೆಚ್ಚಿನ ಸೆಲೆಬ್ರಿಟಿ. ಸೆಹ್ವಾಗ್ ಶುಭ ಕೋರಿರುವ ಸಚಿನ್ ಅವರು ಉಲ್ಟಾ ಮೆಸೇಜ್ ಕಳಿಸಿದ್ದಾರೆ. ವಿಶ್ ಮಾಡಿದ ಸ್ನೇಹಿತರಿಗೆಲ್ಲರಿಗೂ ಟ್ವಿಟರ್ ಕಿಂಗ್ ತಮ್ಮದೇ ಆದ ಶೈಲಿಯಲ್ಲಿ ಧನ್ಯವಾದ ತಿಳಿಸಿದ್ದಾರೆ.
ಎಲ್ಲಾ ರೀತಿಯ ಕ್ರಿಕೆಟ್ನಿಂದ ನಿವೃತ್ತಿ ಪಡೆದಿರುವ ಸೆಹ್ವಾಗ್ ತಮ್ಮ 14 ವರ್ಷಗಳ ವೃತ್ತಿ ಬದುಕಿನಲ್ಲಿ 104 ಪಂದ್ಯಗಳಲ್ಲಿ 8586 ಟೆಸ್ಟ್ ರನ್ ಗಳು ಹಾಗೂ 251 ಏಕದಿನ ಪಂದ್ಯಗಳಲ್ಲಿ 8273 ರನ್ ಗಳನ್ನು ಚೆಚ್ಚಿದ್ದಾರೆ. ಅಲ್ಲದೆ ಎರಡು ತ್ರಿಶತಕ ಬಾರಿಸಿರುವ ಭಾರತದ ಏಕೈಕ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.