ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 10, 2017
ಪೆಟ್ರೋಲ್ ಲೀಡರ್ಸ್ ತರಬೇತಿ ಶಿಬಿರ ಶುಕ್ರವಾರದಿಂದ
ಬದಿಯಡ್ಕ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪೆಟ್ರೋಲ್ ಲೀಡರ್ಸ್ ತರಬೇತಿ ಶಿಬಿರ ಅ. 13 ರಿಂದ 16ರ ವರೆಗೆ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ.
ತರಬೇತಿ ಶಿಬಿರದ ಅಂಗವಾಗಿ ಅ.13 ರಂದು ಬೆಳಿಗ್ಗೆ 9 ಕ್ಕೆ ಹೆಸರು ನೋಂದಾವಣೆ, 10ಕ್ಕೆ ಧ್ವಜಾರೋಹಣ ನಡೆದು 10.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಕೇರಳ ಸರಕಾರದ ಪಾತರ್ಿಸುಬ್ಬ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು ಅಧ್ಯಕ್ಷತೆ ವಹಿಸುವರು. ಚೆಂಗಳ ಗ್ರಾಮ ಪಂಚಾಯತು ಅಧ್ಯಕ್ಷೆ ಶಾಹಿನಾ ಸಲೀಂ ಉದ್ಘಾಟಿಸುವರು. ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಕಾಸರಗೊಡು ಬ್ಲಾಕ್ ಪಂಚಾಯತು ಉಪಾಧ್ಯಕ್ಷೆ ಮಲ್ಲಿಕಾ ಟೀಚರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಚೆಂಗಳ ಗ್ರಾ.ಪಂ. ಉಪಾಧ್ಯಕ್ಷೆ ಇ.ಶಾಂತಕುಮಾರಿ ಟೀಚರ್, ಸ್ಕೌಟ್ಸ್ ಜಿಲ್ಲಾ ಕಮಿಷನರ್ ಗುರುಮೂತರ್ಿ ನಾಯ್ಕಾಪು, ಗೈಡ್ಸ್ ಜಿಲ್ಲಾ ಕಮಿಷನರ್ ಭಾರ್ಗವಿ ಟೀಚರ್, ದಾಮೋದರನ್ ಕೆ, ಸರೋಜಿನಿ ಕೆ, ಕಿರಣ್ ಪ್ರಸಾದ್ ಕೆ.ಜಿ.ಕೂಡ್ಲು, ವಿನೋದ್ ಕುಮಾರ್, ಭುವನೇಂದ್ರನ್ ನಾಯರ್, ಆಶಲತಾ ಟೀಚರ್ ಮೊದಲಾದವರು ಶುಭಾಶಂಸನೆಗೈಯ್ಯುವರು. ಶಿಬಿರಾಗ್ನಿಯನ್ನು ಅ.13 ರಂದು ನಿವೃತ್ತ ಪ್ರಾಂಶುಪಾಲ ರಾಜೇಂದ್ರ ಕಲ್ಲೂರಾಯ ಹಾಗು 14 ರಂದು ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ವೇಣುಗೋಪಾಲನ್ ಇ. ಉದ್ಘಾಟಿಸುವರು. ಸ್ಕೌಟ್ಸ್ ತರಬೇತುದಾರ ಸಾಬು ಥೋಮಸ್, ಗೈಡ್ಸ್ ತರಬೇತುದಾರೆ ಪಿ.ಟಿ.ಉಷಾ, ಅನಿತಾ ಎಂ.ನಾಯರ್ ತರಬೇತಿ ಶಿಬಿರದ ನೇತೃತ್ವ ವಹಿಸುವರು. ಪಿ.ಸುಬ್ರಹ್ಮಣ್ಯ ಭಟ್ ಎಡನೀರು ಶಿಬಿರ ನಿದರ್ೇಶಕರಾಗಿ ಕಾರ್ಯನಿರ್ವಹಿಸುವರು.