ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 29, 2017
ಪ್ರಜಾಪ್ರಭುತ್ವದ ಸತ್ವವನ್ನು ಉಳಿಸುವಲ್ಲಿ ವಿದ್ಯಾಥರ್ಿಗಳ ಪಾತ್ರ ಮಹತ್ತರ: ಶಾಸಕ ಪಿಬಿ ಅಬ್ದುಲ್ ರಜಾಕ್.
ಪೆರ್ಲ: ಪ್ರಪಂಚದಲ್ಲಿ ಉತ್ಕೃಷ್ಟ ಮತ್ತು ವ್ಯವಸ್ಥಿತ ಪ್ರಜಾಪ್ರಭುತ್ವ ಹಿನ್ನೆಲೆಯ ನಮ್ಮ ಪ್ರಜಾಸತ್ತಾತ್ಮಕ ಅಸ್ಮಿತೆ ಉಳಿಯಲು ನಿರಂತರವಾದ ಜನಜಾಗೃತಿ ಅತ್ಯಗತ್ಯ. ಪ್ರಜಾಪ್ರಭುತ್ವದ ನೈಜ ತತ್ವಾದರ್ಶಕ್ಕೆ ಅಪಚಾರವಾಗದಂತೆ ಪರಸ್ಪರ ಪ್ರೀತಿ ವಿಶ್ವಾಸದ ಮೂಲಕ ಆಡಳಿತ, ಸಂವಿಧಾನದ ಆಶಯ ಉಳಿಸುವಲ್ಲಿ ಭವಿಷ್ಯದ ಪ್ರಜೆಗಳಾದ ವಿದ್ಯಾಥರ್ಿಗಳ ಪಾತ್ರ ಮಹತ್ತರವೆಂದು ಶಾಸಕ ಪಿ ಬಿ ಅಬ್ದುಲ್ ರಸಾಕ್ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕೇರಳ ಸಕರ್ಾರದ ರಾಜ್ಯ ಸಂಸದೀಯ ಇಲಾಖೆಯ ನೇತೃತ್ವದಲ್ಲಿ ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಶಾಲೆ ಆಯ್ಕೆ ಮಾಡಿಕೊಂಡು ನಡೆಸಲ್ಪಡುವ " ಭಾರತದ ಪ್ರಜಾಪ್ರಭುತ್ವ ಭವಿಷ್ಯ" ಎಂಬ ವಿಚಾರ ಸಂಕಿರಣವನ್ನು ಶೇಣಿ ಶ್ರೀ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ಮತದಾನ ನಿರ್ವಹಿಸಿದಲ್ಲಿಗೆ ಪ್ರಜಾಪ್ರಭುತ್ವದಲ್ಲಿ ಜನರ ಕೆಲಸ ಮುಗಿಯಿತು ಎಂಬ ಧೋರಣೆ ಸರಿಯಲ್ಲ. ಅಡಳಿತ ವ್ಯವಸ್ಥೆಯ ಪಾರದರ್ಶಕತೆ, ಪ್ರಜಾಪ್ರಭುತ್ವದ ಮಹತ್ವವನ್ನು ಎತ್ತಿ ಹಿಡಿಯುವ ಸಲುವಾಗಿ ಜನರಿಂದ ಮುಕ್ತವಾದ ಅಭಿಪ್ರಾಯ ಮೂಡಿಬರಬೇಕು.ಜಾತ್ಯತೀತ ಪ್ರಜಾಪ್ರಭುತ್ವ ಎಂಬುದು ಒಂದು ಆಡಳಿತ ರೀತಿ ಎಂಬುದಕ್ಕಿಂತ ಮುಖ್ಯವಾಗಿ ವೈವಿಧ್ಯಮಯ ಸಮಾಜದಲ್ಲಿನ ಜನರ ಚಿಂತನಾ ಮನೋಭಾವವಾಗಿ ಅದು ಬದಲಾಗಬೇಕೆಂದು ಶಾಸಕರು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ವ್ಯವಸ್ಥಾಪಕ ಸೋಮಶೇಖರ ಜೆ ಎಸ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವ ನಾಡಿಗಳಾದ ರಾಜಕೀಯ ಪಕ್ಷಗಳು ಜನಪರ ಬದ್ದತೆಯಿಂದ ಕೆಲಸ ಮಾಡಿದರೆ ಅದು ಪ್ರಜಾಪ್ರಭುತ್ವಕ್ಕೆ ಶಕ್ತಿದಾಯಕ. ಅಧಿಕಾರಗಳ ವಿಕೇಂದ್ರೀಕರಣವೇ ಹೊರತು ಅಧಿಕಾರದ ಧ್ರುವೀಕರಣವಾಗಿದ್ದು, ಪ್ರಜಾಪ್ರಭುತ್ವದ ಆಶಯವೂ ಅದೆ ಎಂದು ತಿಳಿಸಿದರು. ಜಾತೀಯತೆ,ಪ್ರಾದೇಶಿಕತೆ, ಅನಕ್ಷರತೆ ಮೊದಲಾದ ಹಲವಾರು ಸಂಕುಚಿತ ಯೋಚನೆ ಮತ್ತು ಸವಾಲುಗಳ ಪ್ರಜಾಪ್ರಭುತ್ವದ ಮೇಲಿನ ತೂಗುಕತ್ತಿಗಳಾಗಿವೆ. ಇಂತಹ ಸಂಕೀರ್ಣತೆಗಳಿಂದ ಮುನ್ನಡೆಯಬೇಕಾದರೆ ಜನಜಾಗೃತಿ ಅನಿವಾರ್ಯ. ನಮ್ಮ ಪರಂಪರೆ ಮತ್ತು ವೈವಿಧ್ಯತೆಯನ್ನು ಗೌರವಿಸಿದರೆ ಮಾತ್ರ ದೇಶದ ಪ್ರಜಾತಾಂತ್ರಿಕತೆ ಅರ್ಥಪೂರ್ಣವಾಗುವುದೆಂದು ಅವರು ತಿಳಿಸಿದರು.
ಕಾಸರಗೋಡು ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷ ಸನ್ನಿ ಜೋಸೆಫ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಪಂಚಾಯತಿ ಸದಸ್ಯೆ ಪುಷ್ಪಾ ಎಮ್, ಪ್ರಾಂಶುಪಾಲ ಗಣಪತಿ ರಮಣ ಪಿ, ಕಿರಿಯ ಪ್ರಾಥಮಿಕ ಶಾಲಾ ವ್ಯವಸ್ಥಾಪಕಿ ಶಾರದ ವೈ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಪೆರ್ದನೆ, ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರನಾಥ ನಾಯಕ್ , ಅಧ್ಯಾಪಕ ಶಾಸ್ತಕುಮಾರ್ ಮೊದಲಾದವರು ಮಾತನಾಡಿದರು.ವಿಧ್ಯಾಥರ್ಿಗಳಾದ ಖದೀಜತ್ ಶಮ್ನಾ, ಸಾಜಿದ, ಖದೀಜತ್ ಶಾಮಿಲ, ಕ್ಷಿತೇಶ್ ಭಾರತದ ಪ್ರಜಾಪ್ರಭುತ್ವದ ಭವಿಷ್ಯ ಎಂಬ ವಿಷಯದಲ್ಲಿ ವಿಚಾರ ಗೋಷ್ಠಿ ಮಂಡಿಸಿದರು. ಶಿಕ್ಷಕ ಅಶ್ರಫ್ ಮತ್ರ್ಯ ಸ್ವಾಗತಿಸಿ, ಶಿಕ್ಷಕಿ ವಿಜಯಲಕ್ಷ್ಮಿ ವಂದಿಸಿದರು.