ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 20, 2017
ಮುಳ್ಳೇರಿಯ : ಸುನಾದ ಸಂಗೀತ ಕಲಾ ಶಾಲೆ ಇದರ ವತಿಯಿಂದ ಸಂಗೀತ ವಾಷರ್ಿಕೋತ್ಸವವು ಅ.22ರಂದು ಬದಿಯಡ್ಕ ಭಾರತೀ ನಗರದಲ್ಲಿ ನಡೆಯಲಿದೆ. ಪೂವರ್ಾಹ್ನ 8 ಗಂಟೆಗೆ ಮಲ್ಲ ಶ್ರೀ ದುಗಾಪರಮೇಶ್ವರಿ ಕ್ಷೇತ್ರದ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ದೀಪಜ್ವಲನೆಮಾಡಲಿದ್ದಾರೆ. ಬಳಿಕ ಶಾಲಾ ವಿದ್ಯಾಥರ್ಿಗಳಿಂದ ಗುರುವಂದನೆ, ಸಂಗೀತ ಶಾಲಾವಿದ್ಯಾಥರ್ಿಗಳಿಂದ ಕನರ್ಾಟಕ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮವು ಜರಗಲಿದೆ. ಈ ಕಾರ್ಯಕ್ರಮದಲ್ಲಿ ಪಕ್ಕವಾದ್ಯದಲ್ಲಿ ವಯಲಿನ್ನಲ್ಲಿ ಪ್ರಭಾಕರ ಕುಂಜಾರು, ಕು.ಧನ್ಯಶ್ರೀ ಪುತ್ತೂರು, ಮೃದಂಗದಲ್ಲಿ ವಿ.ಶ್ಯಾಂ ಭಟ್ ಸುಳ್ಯ, ವೆಂಕಟಯಶಸ್ವಿ ಕಬೆಕ್ಕೋಡು ಸಹಕರಿಸಲಿದ್ದಾರೆ.
ಸಂಜೆ 5.30ರಿಂದ ಕನರ್ಾಟಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಹಾಡುಗಾರಿಕೆಯಲ್ಲಿ ವಿ. ಮಾತಂಗಿ ಸತ್ಯಮೂತರ್ಿ ಚೆನೈ, ವಯಲಿನ್ನಲ್ಲಿ ವಿ.ರಘುರಾಮ ಬಿ ಬೆಂಗಳೂರು, ಮೃದಂಗದಲ್ಲಿ ವಿ.ಕಾಂಚನ ಎ ಈಶ್ವರ ಭಟ್ ಪುತ್ತೂರು, ಮೋಚರ್ಿಂಗ್ನಲ್ಲಿ ವಿ. ಪಯ್ಯನ್ನೂರು ಗೋವಿಂದ ಪ್ರಸಾದ್ ಪಕ್ಕವಾದ್ಯದಲ್ಲಿ ಸಹಕರಿಸಲಿದ್ದಾರೆ.
ಸಂಗೀತ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸಂಗೀತ ಶಿಕ್ಷಕಿ ವಾಣಿಪ್ರಸಾದ್ ಕಬೆಕ್ಕೋಡ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.