ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 15, 2017
ಶ್..ಶ್ಆರಂಭವಾಯ್ತು ರಿ ಬಿಗ್ ಬಾಸ್ ಕನ್ನಡ-5':
'ದೊಡ್ಮನೆ'ಯೊಳಗೆ ಸ್ಪಧರ್ಿಗಳ ಪ್ರವೇಶ
ಬೆಂಗಳೂರು:ಕಿರುತೆರೆ ಲೋಕದ ಅತಿ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್' ಕಾರ್ಯಕ್ರಮದ ಐದನೇ ಆವೃತ್ತಿಗೆ ಅಧಿಕೃತ ಚಾಲನೆ ಭಾನುವಾರ ನೀಡಲಾಗಿದ್ದು, ಕಲಸರ್್ ಸೂಪರ್ ವಾಹಿನಿಯಲ್ಲಿ 'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಓಪನ್ನಿಂಗ್ ಪ್ರಸಾರ ಆಗುತ್ತಿದ್ದು, ಸ್ಪಧರ್ಿಗಳನ್ನ 'ದೊಡ್ಮನೆ'ಯೊಳಗೆ ಕಳುಹಿಸಿಕೊಡುವ ಕಾರ್ಯದಲ್ಲಿ ಕಿಚ್ಚ ಸುದೀಪ್ ತೊಡಗಿದ್ದಾರೆ.
ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಹೊರಗಿನಿಂದ 'ಅರಮನೆ'ಯಂತೆ ಕಾಣುವ 'ಬಿಗ್ ಬಾಸ್' ಮನೆಯೊಳಗೆ ಭಾನುವಾರ 17 ಸ್ಪಧರ್ಿಗಳು ಬಲಗಾಲಿಟ್ಟು ಒಳಗೆ ಹೋಗಲಿದ್ದಾರೆ.
'ಮನಸೇ.. ಮನಸೇ.. ಥ್ಯಾಂಕ್ಯು..' ಹಾಡನ್ನು ಹಾಡುತ್ತಾ 'ಬಿಗ್ ಬಾಸ್ ಕನ್ನಡ-5' ವೇದಿಕೆಗೆ ಕಾಲಿಟ್ಟ ಕಿಚ್ಚ ಸುದೀಪ್, ಈ ಬಾರಿ ಯಾಯರ್ಾರನ್ನ 'ಬಿಗ್ ಬಾಸ್' ಮನೆಯೊಳಗೆ ಕಳುಹಿಸಿದರು ಎಂಬುದನ್ನ ತಿಳಿಯುವ ಕುತೂಹಲ ಇದ್ದರೆ, ಒಮ್ಮೆ ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ....
'ಬಿಗ್ ಬಾಸ್' ಗೃಹಪ್ರವೇಶ ಮಾಡಿದ ಸುದೀಪ್:
ಸ್ಪಧರ್ಿಗಳು 'ಬಿಗ್ ಬಾಸ್' ಮನೆಯೊಳಗೆ ಬಲಗಾಲಿಡುವ ಮುನ್ನ ಕಿಚ್ಚ ಸುದೀಪ್ ಗೃಹಪ್ರವೇಶ ಮಾಡಿದರು. ಈ ಬಾರಿ 'ಬಿಗ್ ಬಾಸ್' ಮನೆಯ ಒಳಾಂಗಣ ಹೇಗಿದೆ ಎಂಬುದನ್ನ ವೀಕ್ಷಕರಿಗೆ ಸುದೀಪ್ ಪರಿಚಯ ಮಾಡಿಕೊಟ್ಟರು. ಹಿಂದೆಂದಿಗಿಂತಲೂ ದೊಡ್ಡದಾಗಿ ಕಾಣಿಸುತ್ತಿರುವ 'ಬಿಗ್ ಬಾಸ್' ಮನೆಯನ್ನ ಎಲ್ಲರಿಗೂ ದರ್ಶನ ಮಾಡಿಸಿದ ಬಳಿಕ ಸ್ಪಧರ್ಿಗಳನ್ನ ಪರಿಚಯಿಸಲು ಸುದೀಪ್ ಆರಂಭಿಸಿದರು.
ಜ್ಯೋತಿಷಿ ಜಯಶ್ರೀನಿವಾಸನ್
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಮೊಟ್ಟ ಮೊದಲ ಸ್ಪಧರ್ಿಯಾಗಿ 'ದೊಡ್ಮನೆ'ಯೊಳಗೆ ಎಂಟ್ರಿ ಕೊಟ್ಟವರು ಕನ್ನಡದ ಕಿರುತೆರೆಯ ಜನಪ್ರಿಯ ಜ್ಯೋತಿಷಿ ಜಯಶ್ರೀನಿವಾಸನ್. ಸಂಖ್ಯಾಶಾಸ್ತ್ರದ ಪ್ರಕಾರ, ಜಯಶ್ರೀನಿವಾಸನ್ ರವರಿಗೆ ನಂಬರ್ 6 ಲಕ್ಕಿ. 'ಬಿಗ್ ಬಾಸ್' ಕಾರ್ಯಕ್ರಮ ಶುರು ಆಗುತ್ತಿರುವುದು 15ನೇ ತಾರೀಖು (1+5=6). ಹೀಗಾಗಿ, ಗೆದ್ದೆ ಗೆಲ್ಲುವೆ ಎಂಬ ವಿಶ್ವಾಸದ ಮೇಲೆ ಜಯಶ್ರೀನಿವಾಸನ್ 'ಬಿಗ್ ಬಾಸ್' ಮನೆಗೆ ಕಾಲಿಟ್ಟಿದ್ದಾರೆ.
ಕೊಡಗಿನ ಕುವರಿ ಮೇಘ
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಮೊಟ್ಟ ಮೊದಲ 'ಜನಸಾಮಾನ್ಯ ಸ್ಪಧರ್ಿ'ಯಾಗಿ ಎಂಟ್ರಿ ಕೊಟ್ಟವರು ಕೊಡಗಿನ ಕುವರಿ, ಶನಿವಾರಸಂತೆಯ ಸುಂದರಿ ಮೇಘ. 'ಡೆವಿಲ್ ಈಸ್ ಹಿಯರ್' ಎನ್ನುತ್ತಲೇ 'ಬಿಗ್' ಮನೆಗೆ ಕಾಲಿಟ್ಟಿದ್ದಾರೆ ಮೇಘ.
ದಯಾಳ್ ಪದ್ಮನಾಭನ್
ಕನ್ನಡ ಚಿತ್ರರಂಗದಲ್ಲಿ ನಿಮರ್ಾಪಕರಾಗಿ ನಿದರ್ೇಶಕರಾಗಿ ಗುರುತಿಸಿಕೊಂಡಿರುವ ದಯಾಳ್ ಪದ್ಮನಾಭನ್ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಮೂರನೇ ಸ್ಪಧರ್ಿಯಾಗಿ 'ದೊಡ್ಮನೆ'ಯೊಳಗೆ ಕಾಲಿಟ್ಟಿದ್ದಾರೆ.
ಸಿಹಿ ಕಹಿ ಚಂದ್ರು
ಬೊಂಬಾಟ್ ಭೋಜನ ಮಾಡುವುದರಲ್ಲಿ ಪಫರ್ೆಕ್ಟ್ ಆಗಿರುವ ಸಿಹಿ ಕಹಿ ಚಂದ್ರು 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ನಾಲ್ಕನೇ ಸ್ಪಧರ್ಿಯಾಗಿ ಎಂಟ್ರಿಕೊಟ್ಟಿದ್ದಾರೆ.
ಶ್ರುತಿ ಪ್ರಕಾಶ್
ಗಾಯಕಿ ಹಾಗೂ ನಟಿ ಆಗಿರುವ ಶ್ರುತಿ ಪ್ರಕಾಶ್ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಐದನೇ ಸ್ಪಧರ್ಿ. ಬೆಳಗಾವಿಯಲ್ಲಿ ಹುಟ್ಟಿದ ಶ್ರುತಿ ಮುಂಬೈನಲ್ಲಿ ನೆಲೆ ಕಂಡುಕೊಂಡಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಿಂಚುವ ಆಸೆ ಶ್ರುತಿ ಪ್ರಕಾಶ್ ರವರಿಗಿದೆ. ಹೀಗಾಗಿ ಅವರಿಗೆ 'ಬಿಗ್ ಬಾಸ್' ಒಂದು ಒಳ್ಳೆಯ ವೇದಿಕೆ.
'ಅಕ್ಕ' ಅನುಪಮಾ ಗೌಡ
'ಅಕ್ಕ' ಧಾರಾವಾಹಿ ಖ್ಯಾತಿಯ ಅನುಪಮಾ ಗೌಡ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಆರನೇ ಸ್ಪಧರ್ಿಯಾಗಿ 'ಬಿಗ್ ಬಾಸ್' ಮನೆಗೆ ಕಾಲಿಟ್ಟಿದ್ದಾರೆ.
ಇನ್ನೇನಿದ್ದರೂ ನಾವು ನೋಡುತ್ತನೇ ಇರ್ತೀವಿಅಲ್ವಾ ಮತ್ತೆ!