ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 30, 2017
ಕೊಂಡೆವೂರಿನಲ್ಲಿ ರಕ್ತದಾನ ಶಿಬಿರ
ಉಪ್ಪಳ: ಕೊಂಡೆವೂರಿನ ಜಗದ್ಗುರು ಶ್ರೀ ನಿತ್ಯಾನಂದ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಮಂಗಳೂರಿನ ಕೆ.ಎಂ.ಸಿ.ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಭಾನುವಾರ "ರಕ್ತದಾನ ಶಿಬಿರ"ವು ಇಲ್ಲಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ನಡೆಯಿತು.
ಶಿಬಿರದ ಉದ್ಘಾಟನೆಯನ್ನು ದೀಪ ಬೆಳಗಿ ನೆರವೇರಿಸಿದ ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು 'ಒಳ್ಳೆಯ ಕೆಲಸಗಳಿಂದ ಮನಶ್ಶಾಂತಿ ದೊರೆಯುತ್ತದೆ. ರಕ್ತದಾನದಂತಹ ಶ್ರೇಷ್ಠ ದಾನದಿಂದ ನಮ್ಮೊಳಗಿನ ಭಗವಂತನ್ನು ಸಂತೋಷ ಪಡಿಸೋಣ' ಎಂದು ಕರೆನೀಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕೆ.ಎಂ.ಸಿ.ಆಸ್ಪತ್ರೆಯ ರಕ್ತನಿಧಿ ಕೇಂದ್ರ ವೈದ್ಯಾಧಿಕಾರಿ ಡಾ.ಶ್ರೀದೇವಿ ಯಾರೆಲ್ಲ,ಯಾಕೆ ರಕ್ತದಾನ ಮಾಡಬೇಕು ಎನ್ನುವ ವಿವರ ನೀಡಿದರು. ಬಂದ್ಯೋಡಿನ ಖ್ಯಾತ ವೈದ್ಯ ಡಾ. ರಾಧಾಕೃಷ್ಣ ಶೆಟ್ಟಿ, ಮಂಗಲ್ಪಾಡಿ ಗ್ರಾಮ ಪಂಚಾಯತು ಸದಸ್ಯೆ ಸುಜಾತ ಶೆಟ್ಟಿ ಉಪಸ್ಥಿತರಿದ್ದು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪಿ.ಆರ್.ಶೆಟ್ಟಿ ಕುಳೂರು ಮಾತನಾಡಿ ಇಂತಹ ಮಹಾನ್ ಸೇವಾಕಾರ್ಯದಲ್ಲಿ ಪಾಲ್ಗೊಳ್ಳುವುದು ಒಳ್ಳೆಯ ಕಾರ್ಯ ಎಂದರು. ಅನಿಲ್ ಕೊಂಡೆವೂರು ಪ್ರಾರ್ಥನಾಗೀತೆ ಹಾಡಿದರು. ಮೋಹನದಾಸ್ ಕೊಂಡೆವೂರು ಸ್ವಾಗತಿಸಿ, ರಾಮಚಂದ್ರ ಬಲ್ಲಾಳ್ ವಂದಿಸಿದರು. ಅರವಿಂದಾಕ್ಷ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ನೂರಾರು ಮಂದಿ ಭಾಗವಹಿಸಿ ರಕ್ತದಾನ ಮಾಡಿ ಶಿಬಿರವನ್ನು ಯಶಸ್ವಿಗೊಳಿಸಿದರು.