ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 08, 2017
ಪ್ರಧಾನಿ ಹುದ್ದೆ ತ್ಯಜಿಸಲು ತೆರೆಸಾಗೆ ಒತ್ತಡ
ಲಂಡನ್: ಪ್ರಧಾನಿ ಹುದ್ದೆ ತ್ಯಜಿಸುವಂತೆ ತೆರೆಸಾ ಮೇ ಅವರ ಮೇಲೆ ಒತ್ತಡ ಹೆಚ್ಚುತ್ತಿದೆ. ತೆರೆಸಾ ಅವರ ಕನ್ಸವರ್ೇಟಿವ್ ಪಕ್ಷದಲ್ಲೇ ಭಿನ್ನಮತ ಭುಗಿಲೆದ್ದಿದೆ.
ಕನ್ಸವರ್ೇಟಿವ್ ಪಕ್ಷದ ಮಾಜಿ ಅಧ್ಯಕ್ಷ ಗ್ರಾಂಟ್ ಶಾಪ್ಸ್ ಅವರು ಮೇ ಅವರ ನಾಯಕತ್ವಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಂಪುಟದ ಮಾಜಿ ಸಚಿವರು ಸೇರಿದಂತೆ ಪಕ್ಷದ ಸುಮಾರು 30 ಸಂಸದರು ತಮಗೆ ಬೆಂಬಲ ನೀಡಿದ್ದಾರೆ ಎಂದು ಶಾಪ್ಸ್ ಹೇಳಿಕೊಂಡಿದ್ದಾರೆ.
`ನಮಗೆ ಬೆಂಬಲ ನೀಡುವ ಸಂಸದರ ಸಂಖ್ಯೆಯನ್ನು ಶೀಘ್ರ 48ಕ್ಕೆ ಹೆಚ್ಚಿಸಲಾಗುವುದು. ಪಕ್ಷದ ನಾಯಕತ್ವ ಸಮಸ್ಯೆ ಪರಿಹರಿಸಲು ಇದು ಸೂಕ್ತ ಸಮಯವಾಗಿದೆ ಎಂದು ನಾನು ಹಾಗೂ ನನ್ನ ಸಹೋದ್ಯೋಗಿಗಳು ಭಾವಿಸುತ್ತೇವೆ. ಇದನ್ನು ತೆರೆಸಾ ಮೇ ಅವರಿಗೆ ವೈಯಕ್ತಿಕವಾಗಿ ತಿಳಿಸಬೇಕು ಎಂದಿತ್ತು. ಆದರೆ ಈಗ ಈ ವಿಷಯ ಬಹಿರಂಗವಾಗಿದೆ' ಎಂದು ಶಾಪ್ಸ್ ತಿಳಿಸಿದ್ದಾರೆ.
`ಮೇ ನೇತೃತ್ವದಲ್ಲಿ ನಡೆದಿರುವ ಸಾಕಷ್ಟು ಪ್ರಮಾದಗಳನ್ನು ಮರೆಮಾಚಲು ಅವರ ಸಚಿವ ಸಂಪುಟ ಮುಂದಾಗಿದೆ. ಇದರಿಂದ ದೇಶಕ್ಕೂ ನಷ್ಟವಾಗಿದೆ' ಎಂದು ಶಾಪ್ಸ್ ಆರೋಪಿಸಿದ್ದಾರೆ.
ತೀವ್ರಗೊಂಡ ಆಗ್ರಹ: ಜೂನ್ ತಿಂಗಳ ಚುನಾವಣೆಯ ಬಳಿಕ ಅಧಿಕಾರ ವಹಿಸಿಕೊಂಡ ಸಮಯದಿಂದಲೂ ತೆರೆಸಾ ಅವರು ರಾಜೀನಾಮೆ ನೀಡಬೇಕು ಎನ್ನುವ ಒತ್ತಾಯಗಳು ಕೇಳಿಬರುತ್ತಿದೆ. ಈಚೆಗಷ್ಟೇ ಮ್ಯಾಂಚೆಸ್ಟರ್ನಲ್ಲಿ ನಡೆದ ಕನ್ಸವರ್ೇಟಿವ್ ಪಕ್ಷದ ಸಮಾವೇಶದಲ್ಲಿ ತೆರೆಸಾ ಅವರು ಮಾಡಿದ ಗೊಂದಲಕಾರಿ ಭಾಷಣದಿಂದಾಗಿ, ರಾಜೀನಾಮೆಯ ಆಗ್ರಹ ಮತ್ತಷ್ಟು ತೀವ್ರಗೊಂಡಿದೆ.
ಇದೇ 11ರಂದು ಕನ್ಸವರ್ೇಟಿವ್ ಪಕ್ಷದ ಸಮಿತಿ ಸದಸ್ಯರು ಸಭೆ ಸೇರಲಿದ್ದಾರೆ. ಇದು ಪಕ್ಷದ ಭವಿಷ್ಯ ಹಾಗೂ ಮೇ ಅವರ ನಾಯಕತ್ವ ಕುರಿತು ನಿರ್ಣಯ ಕೈಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ.