ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 02, 2017
ಗಿಳಿವಿಂಡು ಕವಿ ಭವನದಲ್ಲಿ ದೀಪಾವಳಿ ಸಾಂಸ್ಕೃತಿಕ ಉತ್ಸವ
ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಹಾಗೂ ಕೇರಳ ರಾಜ್ಯ ತುಳು ಅಕಾಡೆಮಿಯ ಜಂಟಿ ಸಭೆಯು ರಾಷ್ಟ್ರಕವಿ ಗೋವಿಂದ ಪೈ ನಿವಾಸ ಗಿಳಿವಿಂಡುವಿನಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕೆ.ಜೀವನ್ ಬಾಬು ಅಧ್ಯಕ್ಷತೆಯಲ್ಲಿ ನಡೆಯಿತು.
ದೀಪಾವಳಿ ಹಬ್ಬದ ಅಂಗವಾಗಿ ಅ.18,19ರಂದು ಗಿಳಿವಿಂಡಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಪ್ರೌಢಶಾಲೆ, ಉನ್ನತ ಪ್ರೌಢಶಾಲೆ, ಮಹಾವಿದ್ಯಾಲಯಗಳ ವಿದ್ಯಾಥರ್ಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕುಟುಂಬಶ್ರೀ ಹಾಗೂ ಹವ್ಯಾಸಿ ಕಲಾ ತಂಡಗಳಿಂದ ಜಾನಪದ ಸಂಸ್ಕೃತಿ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಕನರ್ಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಬೆಂಗಳೂರಿನ ರಂಗಪಯಣ ತಂಡದಿಂದ ನಾಟಕ ಪ್ರದರ್ಶನ ನಡೆಸಲು ತೀಮರ್ಾನಿಸಲಾಯಿತು.
ಸಭೆಯಲ್ಲಿ ತುಳು ಅಕಾಡೆಮಿ ಅಧ್ಯಕ್ಷ ಪಿ.ಎಸ್.ಪುಣಂಚಿತ್ತಾಯ, ಸದಸ್ಯರು, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಮಿತಿ ಕೋಶಾಧಿಕಾರಿ ಬಿ.ವಿ.ಕಕ್ಕಿಲ್ಲಾಯ, ಕಾರ್ಯದಶರ್ಿ ಕೆ.ಆರ್.ಜಯಾನಂದ, ತುಳು ಅಕಾಡೆಮಿ ಕಾರ್ಯದಶರ್ಿ ಬಾಲಕೃಷ್ಣ ಶೆಟ್ಟಿಗಾರ್, ಆಡಳಿತ ನಿರ್ವಹಣಾಧಿಕಾರಿ ಡಾ.ಕೆ.ಕಮಲಾಕ್ಷ ಮೊದಲಾದವರು ಭಾಗವಹಿಸಿದ್ದರು.