ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 29, 2017
ಸಮುದಾಯ ಭವನ ಶಿಲಾನ್ಯಾಸ
ಪೆರ್ಲ: ಜಿಲ್ಲಾ ಮೊಗೇರ ಸಂಘದ ನೂತನ ಸಮುದಾಯ ಭವನ ಶಿಲಾನ್ಯಾಸ ಕಾರ್ಯಕ್ರಮ ಪೆರ್ಲದಲ್ಲಿ ಶುಕ್ರವಾರ ನಡೆಯಿತು.
ಬೆಳಗ್ಗೆ ಸಂಘಟನೆಯ ಹಿರಿಯರಾದ ತುಕ್ರ ಬಂದ್ಯೋಡು ಅವರ ದೇವತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಯುವ ಮುಖಂಡ ರವಿಕಾಂತ ಕೇಸರಿ ಕಡಾರು ಸಮಾಜದ ಏನೇ ಕಾರ್ಯಕ್ರಮವಾದರೂ ಇತರ ಕಟ್ಟಡಗಳನ್ನು ಆಶ್ರಯಿಸಿ ಅನಗತ್ಯ ದುಂದುವೆಚ್ಚ ಮಾಡುವ ಬದಲು ಸ್ವಂತ ಕಟ್ಟಡ ನಿಮರ್ಿಸಲು ಉತ್ಸುಕರಾಗಿರುವುದು ಆಶಾದಾಯಕ ಬೆಳವಣಿಗೆ.ಒಗ್ಗಟ್ಟಿನ ಕಾರ್ಯತಂತ್ರಗಳ ಮೂಲಕ ಯಶಸ್ಸು ಸಾಫಲ್ಯಗೊಳ್ಳುವದು ಎಂದು ಅಭಿಪ್ರಾಯಪಟ್ಟರು.
ಮೊಗೇರ ಸಂಘದ ರಾಜ್ಯ ಅಧ್ಯಕ್ಷ ಅಂಗಾರ ಅಜಕ್ಕೋಡು, ಜಿಲ್ಲಾ ಮೊಗೇರ ಸಂಘದ ಗೌರವಾಧ್ಯಕ್ಷ ಜಯರಾಮಪ್ಪ, ಸ್ಥಳದಾನಿಗಳಾದ ಪೆರ್ಮಲೆ ಪಡ್ರೆ ಉಪಸ್ಥಿತರಿದ್ದರು. ಮದರು ಮಹಾಮಾತೆ ಸಂಘದ ಅಧ್ಯಕ್ಷ ಆನಂದ ಮವ್ವಾರು,ಮದರು ಮಾತೆ ಸಂಘಟನೆಯ ಕಾರ್ಯದಶರ್ಿ ಶಂಕರ.ಡಿ,ಮದರು ಮಹಾಮಾತೆ ಸಂಘಟನೆ ಕೋಶಾಧಿಕಾರಿ ಕೃಷ್ಣದಾಸ್,ಸಲಹಾ ಸಮಿತಿ ಸದಸ್ಯ ಪದ್ಮನಾಭ ಚೇನೆಕ್ಕೋಡು,ಜಿಲ್ಲಾ ಮೊಗೇರ ಸಂಘದ ಕೋಶಾಧಿಕಾರಿ ಗೋಪಾಲ .ಡಿ,ಮೊಗೇರ ಸಂಘದ ಜಿಲ್ಲಾ ಸದಸ್ಯ ಉಮಾ ಪಟ್ಟಾಜೆ, ಚಂದಪ್ಪ ಕಕ್ವೆ,ಬಾಬು ಬಂದ್ಯೋಡು,ನಿಟ್ಟೋಣಿ ಬಂದ್ಯೋಡು,ಸುಂದರ ,ಸುಧಾಕರ ಬೆಳ್ಳಿಗೆ,ಎಂ.ಎಸ್ ಶಂಕರ ಶೇಣಿ,ಕೃಷ್ಣ ದಬರ್ೆತ್ತಡ್ಕ,ಸುಂದರಿ, ಸುಂದರ ಅಪ್ಪಯ್ಯಮೂಲೆ, ಸುಂದರ ದೇವರೆಕೆರೆ ,ಐತ್ತಪ್ಪ ಚೆನ್ನೆಗುಳಿ, ಗಂಗಾಧರ ಗೋಳಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.