ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 07, 2017
ಗ್ರಾಮೀಣ ಶಾಲೆಗಳ ಆಧುನೀಕತೆ ಹಾಗೂ ಪ್ರಗತಿ ಅವಶ್ಯಕ: ಟಿ.ಶ್ಯಾಮ್ ಭಟ್
ಉಪ್ಪಳ: ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಹೆಚ್ಚಿನ ಸವಾಲುಗಳಿವೆ. ಆಧುನಿಕ ಕಾಲಘಟ್ಟದಲ್ಲಿ ಪಟ್ಟಣ ಶಾಲೆಗಳತ್ತ ಮುಖ ಮಾಡುತ್ತಿರುವ ಪೋಷಕರ ಒಲಿವಿನ ಮಧ್ಯೆ ಬಾಯಾರು ಪದವಿನಂತಹ ಗ್ರಾಮೀಣ ಪ್ರದೇಶದ ಮುಳಿಗದ್ದೆ ಹೆದ್ದಾರಿ ಶಾಲೆ ಮಾದರಿಯಾಗಿದೆ. ಶಾಲೆಯಲ್ಲಿನ ವಿದ್ಯಾಥರ್ಿಗಳ ಸಂಖ್ಯೆ ಈ ಶಾಲೆಯ ಮಹತ್ವವನ್ನು ಸಾರಿ, ಉತ್ತಮ ಶಿಕ್ಷಣವನ್ನು ನೀಡುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಕನರ್ಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಹೇಳಿದರು.
ಅವರು ಪೈವಳಿಕೆ ಸಮೀಪದ ಬಾಯಾರು ಮುಳಿಗದ್ದೆಯ ಹೆದ್ದಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಗ್ರಾಮೀಣ ಶಾಲೆಗಳು ಪ್ರದೇಶದ ಸಾಂಸ್ಕೃತೀಕತೆಗೆ ಸಾಕ್ಷಿ.ಅಂತಹ ಶಾಲೆಗಳ ಪೈಕಿ ಹೆದ್ದಾರಿ ಶಾಲೆಯು ಒಂದು ಎಂದರು.ಕುರಿಯ ವಿಠಲ ಶಾಸ್ತ್ರಿಗಳ ಮುಂದಾಳುತ್ವದಲ್ಲಿ ಶಾಲಾ ಪರಿಸರದಲ್ಲಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳನ್ನು ಅವರು ಸ್ಮರಿಸಿಕೊಂಡರು. ಚಿಪ್ಪಾರು ಹಾಗೂ ಬಾಯಾರು ಪ್ರದೇಶದ ಶಾಲೆಗಳು ಶತಮಾನದ ಇತಿಹಾಸ ಹಾಗೂ ಶಿಕ್ಷಣ ಕ್ರಾಂತಿಯನ್ನು ನೆನಪಿಸುತ್ತವೆ ಎಂದು ತಿಳಿಸಿದರು. ಹೆದ್ದಾರಿ ಶಾಲೆಯಲ್ಲಿನ ವಿದ್ಯಾಥರ್ಿಗಳ ಸಂಖ್ಯೆ ಹೆಮ್ಮೆ ಹಾಗೂ ಸಂತಸವನ್ನುಂಟು ಮಾಡುತ್ತಿದೆ. ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರ ಸಹಕಾರ ಅತ್ಯಗತ್ಯ.ಕಂಪ್ಯೂಟರ್ ಕಲಿಕೆಯಂತಹ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ನಗರ ಶಾಲೆಗಳಿಗೆ ಸರಿ ಸಮಾನವಾಗಿ ಉತ್ತಮ ಶಿಕ್ಷಣ ವ್ಯವಸ್ಥೆಗಳೊಂದಿಗೆ ಗ್ರಾಮೀಣ ಶಾಲೆಯು ಅಭಿವೃದ್ಧಿಯೆಡೆಗೆ ದಾಪುಗಾಲಿಡಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೈವಳಿಕೆ ಗ್ರಾ.ಪಂ ಅಧ್ಯಕ್ಷೆ ಭಾರತಿ.ಜೆ.ಶೆಟ್ಟಿ ಪ್ರಾಥಮಿಕ ವಿದ್ಯಾಭ್ಯಾಸ ವಿದ್ಯಾಥರ್ಿ ಜೀವನದ ಮಹತ್ತರಘಟ್ಟ, ವಿದ್ಯಾಥರ್ಿಗಳ ವ್ಯಕ್ತಿತ್ವ ರೂಪಿಸುವ ಆರಂಭದ ಹಂತ ಎಂದರು. ಮೂಲಭೂತ ಸೌಕರ್ಯಗಳೊಂದಿಗೆ ಪ್ರದೇಶದ ಶಾಲೆಯು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಸಹಕಾರಿಯಾಗಿದೆ. ಶಾಲೆಯ ಅಭಿವೃದ್ಧಿಯಲ್ಲಿ ಹೆತ್ತವರ, ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದರು.
ಮಂಜೇಶ್ವರ ಬ್ಲಾಕ್.ಪಂ ಅಧ್ಯಕ್ಷ ಎ.ಕೆ.ಎಂ ಆಶ್ರಫ್, ಕಾಸರಗೋಡು ಜಿ.ಪಂ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಬ್ಲಾ.ಪಂ ಸದಸ್ಯ ಕೆ.ಆರ್ಜಯಾನಂದ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದಶರ್ಿ ಸೋಮಶೇಖರ ಜೆ.ಎಸ್, ಸಿ.ಪಿ.ಐ ಜಿಲ್ಲಾ ಜೊತೆ ಕಾರ್ಯದಶರ್ಿ ಬಿ.ವಿ ರಾಜನ್, ಪೈವಳಿಕೆ ಗ್ರಾ.ಪಂ ಸದಸ್ಯೆ ಭವ್ಯ.ಬಿ ಮೊದಲಾದವರು ಶುಭಾಸಂಶನೆಗೈದರು. ಮಾತೃ ಶಿಕ್ಷಕ ರಕ್ಷಕ ಸಂಘದ ಭಾಗೀರಥಿ, ಹಳೆ ವಿದ್ಯಾಥರ್ಿ ಸಂಘದ ಮೋನಪ್ಪ ಶೆಟ್ಟಿ ಉಪಸ್ಥಿತರಿದ್ದರು. ಶಾಲಾ ಕಟ್ಟಡ ನಿಮರ್ಾಣಕ್ಕೆ ಸಹಕರಿಸಿದ ಮಾಸ್ಟರ್ ಪ್ಲಾನ್ ಪುತ್ತೂರು ಇಂಜಿನಿಯರ್ ಆನಂದಕುಮಾರ್ ಎಸ್.ಕೆ ಅತಿಥಿಯಾಗಿ ಭಾಗವಹಿಸಿದ್ದರು. ಶಾಲಾ ಪ್ರಬಂಧಕ ಎನ್.ರಾಮಕೃಷ್ಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ವರದಿ ವಾಚಿಸಲಾಯಿತು.ಮುಖ್ಯೋಪಾಧ್ಯಾಯ ಆದಿನಾರಾಯಣ ಭಟ್.ಎಂ ಸ್ವಾಗತಿಸಿ, ಶಿಕ್ಷಕ ರಕ್ಷಕ ಸಂಘದ ಶಂಕರ ಭಟ್ ಉಳುವಾನ ವಂದಿಸಿದರು. ವಿದ್ವಾನ್. ಹಿರಣ್ಯ ವೆಂಕಟೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.ಶಾಲಾ ವಾಷರ್ಿಕೋತ್ಸವದ ಅಂಗವಾಗಿ ವಿದ್ಯಾಥರ್ಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಹಳೆ ವಿದ್ಯಾಥರ್ಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಸಂಜೆ ಯಕ್ಷಗಾನ ಬಯಲಾಟ ನಡೆಯಿತು.