ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 12, 2017
ವಿಶ್ವ ಹಿರಿಯ ನಾಗರಿಕರ ದಿನಾಚರಣೆ
ಪೆರ್ಲ: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಎಣ್ಮಕಜೆ ಗ್ರಾಮ ಪಂಚಾಯತು ಹಾಲ್ನಲ್ಲಿ ಇತ್ತೀಚೆಗೆ ಜರುಗಿತು.
ಹಿರಿಯರು ನಮ್ಮ ಸನಾತನ ಸಂಸ್ಕೃತಿಯ ಕೊಂಡಿಗಳು. ಉತ್ತಮ ಅನುಭವ ಹಾಗೂ ತಿಳುವಳಿಕೆ ಹೊಂದಿರುವ ಹಿರಿಯರು ನೀಡಿದ ಮಾರ್ಗದರ್ಶನದಲ್ಲಿ ನಾವು ಮುನ್ನಡೆದರೆ ಯಶಸ್ಸು ಖಂಡಿತ. ಅವರನ್ನು ನಿರ್ಲಕ್ಷಿಸದೆ ಗೌರವದಿಂದ ಜೀವನ ನಡೆಸಲು ಅನುವು ಮಾಡಿಕೊಡುವುದೇ ಎಂದೆಂದಿಗೂ ನಮಗೆ ಶ್ರೀರಕ್ಷೆ ಎಂದು ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್. ಭಟ್ ಅವರು ಹಿರಿಯ ನಾಗರಿಕರನ್ನು ಸಮ್ಮಾನಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಪಂಚಾಯತು ಉಪಾಧ್ಯಕ್ಷ ಪುಟ್ಟಪ್ಪ ಖಂಡಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಬ್ಲಾಕ್ ಪಂಚಾಯತು ಅಧ್ಯಕ್ಷ ಟಿಆರ್ಕೆ ಭಟ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಬ್ಲಾಕ್ ಪಂಚಾಯತು ಸದಸ್ಯರಾದ ಸವಿತಾ ಬಾಳಿಕೆ, ಸಫ್ರಿನಾ, ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷ ಆಯಿಷಾ ಎ.ಎ, ಸದಸ್ಯರಾದ ಸತೀಶ್ ಕುಲಾಲ್, ಸಿದ್ದಿಕ್ ಒಳಮೊಗರು, ಶಾರದ ವೈ, ಚಂದ್ರಾವತಿ, ಪ್ರೇಮ ಮೊದಲಾದವರು ಶುಭ ಹಾರೈಸಿದರು. ಜಿಲ್ಲಾ ಬಾರ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಎ.ಎನ್.ಅಶೋಕ್ ಕುಮಾರ್ ಹಿರಿಯರ ಹಕ್ಕುಗಳು ಹಾಗೂ ಕಾನೂನು ಎಂಬ ವಿಷಯದ ಬಗ್ಗೆ ತರಗತಿಯನ್ನು ನಡೆಸಿಕೊಟ್ಟರು. ಪಂಚಾಯತು ಐಸಿಡಿಎಸ್ ಮೇಲ್ವಿಚಾರಕಿ ರಮ್ಲತ್ ಸ್ವಾಗತಿಸಿ, ಅಂಗನವಾಡಿ ಅಧ್ಯಾಪಿಕೆ ಕುಸುಮಾವತಿ ವಂದಿಸಿದರು. ತದನಂತರ ಹಿರಿಯರಿಂದ ಮನೋರಂಜನಾ ಕಾರ್ಯಕ್ರಮ ಜರುಗಿತು.ಈ ಸಂದರ್ಭ ಹಿರಿಯ ನಾಗರಿಕರನ್ನು ಗೌರವಿಸಲಾಯಿತು. ಅಂಗನವಾಡಿ ಅಧ್ಯಾಪಿಕೆಯರು ಹಾಗೂ ಹಿರಿಯ ನಾಗರಿಕರ ಸಹಿತ ಸುಮಾರು 200ಕ್ಕೂ ಮಿಕ್ಕಿದ ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.