ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 16, 2017
ಮುಳ್ಳೇರಿಯ ಎನ್ಎಸ್ಎಸ್ ಘಟಕದ ವತಿಯಿಂದ ಗಾಂಧಿ ಜಯಂತಿ ವಾರಾಚರಣೆ
ಮುಳ್ಳೇರಿಯ: ಇಲ್ಲಿನ ಸರಕಾರಿ ಹೈಯರ್ ಸೆಕೆಂಡರೀ ಶಾಲೆಯ ಎನ್ಎಸ್ಎಸ್ ಘಟಕವು ಹಮ್ಮಿಕೊಂಡ ಸೇವನಾ ವಾರದ ಸಮಾರೋಪವು ಬೆಳ್ಳೂರು ಪಂಚಾಯಿತಿನ ಬೆಳ್ಳೂರಡ್ಕದಲ್ಲಿ ಇತ್ತೀಚೆಗೆ ನಡೆಯಿತು.
ಪ್ರಾಂಶುಪಾಲ ನಾರಾಯಣ.ಪಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಒಂದು ವಾರಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಶಾಲಾ ಆವರಣ, ಶಾಲಾ ಪ್ರಯೋಗಾಲಯದ ಪರಿಸರ, ರಸ್ತೆ ಬದಿ ಮೊದಲಾದೆಡೆಗಳನ್ನು ಶ್ರಮದಾನದ ಮೂಲಕ ಶುಚಿಗೊಳಿಸಲಾಯಿತು.
ಎಂಡೋಸಲ್ಫಾನ್ ರೋಗಬಾಧಿತ ಸಂತ್ರಸ್ತರಿಗಾಗಿ ಬೆಳ್ಳೂರಡ್ಕದಲ್ಲಿ ಮುಳ್ಳೇರಿಯ ಎನ್ಎಸ್ಎಸ್ ಘಟಕದ ಸಹಕಾರದೊಂದಿಗೆ ನಿಮರ್ಿಸಿದ ಆರು ಮನೆಗಳ ಪರಿಸರವನ್ನು ಶ್ರಮದಾನದ ಮೂಲಕ ಶುಚಿಗೊಳಿಸಲಾಯಿತು. ಎನ್ವಿಸಾಗ್ ಸಮಿತಿ ಪದಾಧಿಕಾರಿಗಳಾದ ಪ್ರೊ.ಎಂ.ಎ.ರಹಮಾನ್, ಹಸನ್ ಮಾಂಗಾಡ್, ಎ.ಕೆ.ಮುಂಡೋಳು, ಮೊಯ್ದೀನ್ ಪೂವಡ್ಕ ಸ್ವಯಂ ಸೇವಕರಿಗೆ ಮಾರ್ಗದರ್ಶನ ನೀಡಿದರು. ಶಾಲೆಯ ಎನ್ಎಸ್ಎಸ್ ಯೋಜನಾ ಅಧಿಕಾರಿ ಡಾ.ಶಶಿರಾಜ್ ನೀಲಂಗಳ, ಶಿಕ್ಷಕರಾದ ಉದಯರಾಜ ಅರಳಿತ್ತಾಯ, ವಿನೋದ್ ನೇತೃತ್ವ ವಹಿಸಿದರು.
ಮೊಯ್ದೀನ್ ಪೂವಡ್ಕ ಸ್ವಾಗತಿಸಿ, ದೇವಿಕಾ ವಂದಿಸಿದರು.