ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 29, 2017
ಮಂಜೇಶ್ವರ ಉಪಜಿಲ್ಲಾ ವಿಜ್ಞಾನೋತ್ಸವ : ಕುಳೂರು ಶಾಲೆಯ ಸಾಧನೆ
ಮಂಜೇಶ್ವರ: ಕುಳೂರಿನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾತ್ಸವದಲ್ಲಿ ಸಾಧನೆ ಮಾಡಿದ್ದು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮೀಯಪದವು ಹೈಸ್ಕೂಲ್ ಹಾಗೂ ಯು.ಪಿ. ಶಾಲೆಗಳಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸವದ ವೃತ್ತಿ ಪರಿಚಯ ಮೇಳದಲ್ಲಿ ತೆಂಗಿನ ಗೆರಟೆಯ ಉತ್ಪನ್ನಗಳ ನಿಮರ್ಾಣದಲ್ಲಿ ಲಕ್ಷ್ಮಣ `ಎ' ಗ್ರೇಡ್ನೊಂದಿಗೆ ಪ್ರಥಮ ಸ್ಥಾನ, ವಾಲಿಬಾಲ್ ನೆಟ್ ನಿಮರ್ಾಣದಲ್ಲಿ ಹೇಮಂತ್ `ಎ' ಗ್ರೇಡ್ನೊಂದಿಗೆ ಪ್ರಥಮ ಸ್ಥಾನ, ಬರೆಯುವ ಚೋಕ್ ನಿಮರ್ಾಣದಲ್ಲಿ ಶ್ರೇಯಾ ಕಕರ್ೇರ `ಎ' ಗ್ರೇಡ್ನೊಂದಿಗೆ ದ್ವಿತೀಯ ಸ್ಥಾನ, ಮೆಟಲ್ ಎಂಗ್ರೇವಿಂಗ್ನಲ್ಲಿ ಶ್ರವಣ್ ಕುಮಾರ್ `ಎ' ಗ್ರೇಡ್ನೊಂದಿಗೆ ದ್ವಿತೀಯ ಸ್ಥಾನ, ತಾಳೆ ಗರಿಯ ಉತ್ಪನ್ನಗಳ ನಿಮರ್ಾಣದಲ್ಲಿ ವಷರ್ಾ ಬಿ. `ಎ' ಗ್ರೇಡ್ನೊಂದಿಗೆ ದ್ವಿತೀಯ ಸ್ಥಾನ ಹಾಗೂ ಮೆಟಲ್ ವಕರ್್ನಲ್ಲಿ ನಾಗರತ್ನ `ಎ' ಗ್ರೇಡ್ನೊಂದಿಗೆ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗಣಿತ ಜಾಣ್ಮೆ ಪ್ರಶ್ನೆಯ ಸ್ಪಧರ್ೆಯಲ್ಲಿ ಭುವನ ಕೆ. `ಎ' ಗ್ರೇಡ್, ಸಮಾಜ ವಿಜ್ಞಾನ ವಿಭಾಗದ ಮೋಡೆಲ್ನಲ್ಲಿ ಸಾನ್ವಿಕ ಹಾಗೂ ನವ್ಯ `ಎ' ಗ್ರೇಡ್ ಪಡೆದುಕೊಂಡಿದ್ದಾರೆ.
ಇತ್ತೀಚೆಗೆ ಮಣ್ಣಂಗುಳಿ ಮೈದಾನದಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಕ್ರೀಡಾ ಕೂಟದಲ್ಲಿ ಎಲ್.ಪಿ. ವಿಭಾಗದ ಮಿನಿ 50 ಮೀ. ಓಟದ ಸ್ಪಧರ್ೆಯಲ್ಲಿ ನವ್ಯ ತೃತೀಯ ಸ್ಥಾನ ಪಡೆದಿದ್ದಾರೆ. ಕುಳೂರು ಶಾಲೆಯ ಮಕ್ಕಳ ಈ ಪ್ರತಿಭೆಗಳನ್ನು ಕಂಡು ಊರವರು ಕೊಂಡಾಡಿ ಅಭಿನಂದಿಸಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಶಾಲಾ ರಕ್ಷಕ ಶಿಕ್ಷಕ ಸಂಘ, ಮಾತೃ ಮಂಡಳಿ, ಶಾಲಾ ಹಳೆ ವಿದ್ಯಾಥರ್ಿ ಸಂಘ, ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಊರವರು ಅಭಿನಂದಿಸಿದ್ದಾರೆ.