ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 16, 2017
ಮುಜುಂಗಾವು ಕಾವೇರಿ ಸ್ನಾನ ಮಂಗಳವಾರ-ಸಿದ್ದತೆಗಳು ಪೂರ್ಣ-ಹೊಸ ವ್ಯವಸ್ಥೆಯ ಬದಲಾವಣೆ
ಕುಂಬಳೆ: ಕುಂಬಳೆ ಸೀಮೆಯ ಪ್ರಸಿದ್ಧ ನಾಲ್ಕು ದೇವಸ್ಥಾನಗಳಲ್ಲಿ ಒಂದಾದ ಮುಜುಂಗಾವು ಶ್ರೀ ಪಾರ್ಥಸಾರಥೀಕೃಷ್ಣ ದೇವಸ್ಥಾನದ ಕೆರೆಯಲ್ಲಿ ಕಾವೇರಿ ತೀರ್ಥ ಸ್ನಾನ ಅ. 17 ರಂದು ಜರುಗಲಿದೆ. 60 ಸಹಸ್ರಕ್ಕೂ ಮಿಕ್ಕಿ ಭಕ್ತಾದಿಗಳು ಅಂದು ತೀರ್ಥಸ್ನಾನದಲ್ಲಿ ಪಾಲ್ಗೊಳ್ಳಲಿರುವುದಾಗಿ ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳಾದ ತಿಳಿಸಿದ್ದಾರೆ.
ದೇವಸ್ಥಾನದ ಕೆರೆಯಲ್ಲಿ ಕಾವೇರಿ ಸಂಕ್ರಮಣದಂದು ಪುಣ್ಯ ಸ್ನಾನಗೈದರೆ ಚರ್ಮರೋಗಗಳೆಲ್ಲವೂ ವಾಸಿಯಾಗುತ್ತದೆ ಎಂಬ ನಂಬಿಕೆ ಭಕ್ತಾದಿಗಳಲ್ಲಿ ಬಲವಾಗಿ ಬೇರೂರಿರುವುದರಿಂದ ಈ ದಿನದ ತೀರ್ಥ ಸ್ನಾನಕ್ಕೆ ಇಲ್ಲಿ ವಿಶೇಷ ಪ್ರಾತಿನಿಧ್ಯ ಕಲ್ಪಿಸಲಾಗಿದೆ. ಮುಜುಂಗಾವು ತೀರ್ಥದ ಕೆರೆ ಹಾಗೂ ಮಡಿಕೇರಿ ಭಾಗಮಂಡಲದ ಕಾವೇರಿ ಉದ್ಭವ ಸ್ಥಾನದ ಕೆರೆಗೂ ನೇರ ಸಂಪರ್ಕವಿರುವ ಬಗ್ಗೆಯೂ ಐತಿಹ್ಯವಿದೆ. ಬೆಳಗ್ಗೆ 4ಗಂಟೆಗೆ ಆರಂಭಗೊಳ್ಳುವ ತೀರ್ಥ ಸ್ನಾನ ಮಧ್ಯಾಹ್ನ ಮಹಾಪೂಜೆಯ ವರೆಗೂ ನಡೆದುಬರುತ್ತಿದೆ. ಕೆಲವೊಂದು ಚರ್ಮರೋಗಗಳಲ್ಲಿ ಬಳಲುತ್ತಿರುವವರು ತೀರ್ಥ ಸ್ನಾನದಲ್ಲಿ ಪಾಲ್ಗೊಂಡು ಮುಕ್ತಿ ಹೊಂದಿದವರಿದ್ದಾರೆ. ವರ್ಷಪೂತರ್ಿ ಇಲ್ಲಿನ ಕೆರೆಯಲ್ಲಿ ನೀರು ತುಂಬಿಕೊಂಡಿರುವುದು ಇನ್ನೊಂದು ವಿಷೇಶ.
ಅಂದು ಬೆಳಗ್ಗೆ ಬೆಳಗ್ಗೆ 4ಕ್ಕೆ ದೇವಸ್ಥಾನದ ಅರ್ಚಕರು ದೇವಸ್ಥಾನದ ಕೆರೆಯಿಂದ ಬೆಳ್ಳಿಕೊಡಪಾನದಲ್ಲಿ ತೀರ್ಥವನ್ನು ವಾದ್ಯಘೋಷಗಳೊಂದಿಗೆ ತಂದು ಶ್ರೀ ದೇವರಿಗೆ ಅಭಿಷೇಕ ಮಾಡಿದ ನಂತರ ತೀರ್ಥ ಸ್ನಾನ ಆರಂಭಗೊಳ್ಳುವುದು. ಬೆಳಗ್ಗೆ ಮಿಂದು ಶುಚಿಭರ್ೂತರಾಗಿ ಆಗಮಿಸುವ ಭಕ್ತಾದಿಗಳು ದೇವಸ್ಥಾನದ ಕೆರೆಯಲ್ಲಿ ಮುಳುಗೇಳುವ ಮೂಲಕ ತೀರ್ಥಸ್ನಾನ ಕೈಗೊಳ್ಳುತ್ತಾರೆ. ನಂತರ ಬೆಳ್ತಿಗೆ ಅಕ್ಕಿ, ಹುರಳಿ ಸಹಿತ ಧಾನ್ಯಗಳ ಮಿಶ್ರಣವನ್ನು ಕೆರೆಗೆ ಚೆಲ್ಲುವ ಮೂಲಕ ಪ್ರದಕ್ಷಿಣೆ ಬಂದು ಉಳಿದ ಧಾನ್ಯಗಳನ್ನು ದೇವಸ್ಥಾನದ ಎದುರಿನ ಪಾತ್ರೆಯಲ್ಲಿ ಸುರಿದು ಶ್ರೀ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ತೀರ್ಥ ಸ್ನಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಬೆಳಗ್ಗೆ 10ರಿಂದಲೇ ಭೋಜನ ಪ್ರಸಾದ ವಿತರಣೆ ಆರಂಭಗೊಳ್ಳುತ್ತದೆ. ತೀರ್ಥ ಸ್ನಾನದ ದಿನದಂದು ಪೆರ್ಲ, ಮುಳ್ಳೇರಿಯಾ ಭಾಗದಿಂದ ಕುಂಬಳೆಗೆ ತೆರಳುವ ಹಾಗೂ ವಾಪಸಾಗುವ ಎಲ್ಲ ಬಸ್ಗಳು ನಾಯ್ಕಾಪು ಹಾಗೂ ಸೂರಂಬೈಲು ಮುಖ್ಯರಸ್ತೆಯಿಂದ ಒಂದು ಕಿ.ಮೀ ದೂರದಲ್ಲಿರುವ ದೇವಸ್ಥಾನದ ಮೂಲಕವೇ ಹಾದು ಹೋಗುತ್ತದೆ.
ರೋಗ ನಿವಾರಣೆ ನಂಬಿಕೆ:
ದೇವಸ್ಥಾನದ ತೀರ್ಥದ ಕೆರೆಯಲ್ಲಿಸ್ನಾನ ಮಾಡುವುದರಿಂದ ಚರ್ಮರೋಗ ವಾಸಿಯಾಗುತ್ತಿರುವ ಬಗೆಗಿನ ನಂಬಿಕೆ ಇಲ್ಲಿ ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚುವಂತೆಮಾಡಿದೆ. ತೀರ್ಥ ಸ್ನಾನದ ಕೆರೆಯಲ್ಲಿ ಕೆಲವೊಂದು ವೈಜ್ಞಾನಿಕ ಅಂಶವೂ ಅಡಕವಾಗಿರುವ ಬಗ್ಗೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೆರೆಯ ಆಸು ಪಾಸು ಬೆಳೆದು ನಿಂತಿರುವ ಕೆಲವೊಂದು ಔಷಧೀಯಗುಣವುಳ್ಳ ಸಸ್ಯಗಳ ಬೇರುಗಳು ನೀರಿನ ಸಂಪರ್ಕ ಹೊಂದುವುದರಿಂದ ಆ ನೀರಿಗೆ ವಿಶೇಷ ಗುಣ ಪ್ರಾಪ್ತಿಯಾಗುತ್ತದೆ. ಅಲ್ಲದೆ, ನೀರಿಗೆ ಚೆಲ್ಲುವ ಧಾನ್ಯಗಳಿಂದಲೂ ನೀರಿನಲ್ಲಿ ಔಷಧೀಯ ಸತ್ವ ಬೆಳವಣಿಗೆ ಹೊಂದಲು ಕಾರಣವಾಗಬಲ್ಲದು. ಬಾವಿ ನೀರಿಗಿಂತ ಕಾಡಿನ ಮೂಲಕ ಹರಿದು ಬರುವ ನೀರು ಹೆಚ್ಚು ಸತ್ವಯುತ ಅಂಶಗಳನ್ನು ಒಳಗೊಂಡಿರುತ್ತದೆ ಎಂಬುದಾಗಿ ತಜ್ಞರು ಅಭಿಪ್ರಾಯಪಡುತ್ತಾರೆ.
ಈ ವರ್ಷ ಸ್ನಾನಕ್ಕೆ ಸೇವಾ ಶುಲ್ಕ:ಹೌಹಾರಬೇಡಿ-ಅಭಿವೃದ್ದಿಗೆ ಬಳಕೆ-ಅರಸರ ಹೇಳಿಕೆ:
ಈವರೆಗೆ ಮುಜುಂಗಾವು ಶ್ರೀಕ್ಷೇತ್ರದ ಕಾವೇರಿ ಸಂಕ್ರಮಣದ ಪುಣ್ಯ ಸ್ನಾನಕ್ಕೆ ಮುಕ್ತ ಅವಕಾಶವಿತ್ತು. ಆದರೆ ಈ ವರ್ಷದಿಂದ ಶ್ರೀಕ್ಷೇತ್ರದ ಆಡಳಿತ ಜವಾಬ್ದಾರಿ ವಹಿಸಿರುವ ಕುಂಬಳೆ ಸೀಮೆಯ ಅರಸು ಪರಂಪರೆಯ ಮಾಯಿಪ್ಪಾಡಿ ಅರಮನೆಯವರು ಕ್ಷೇತ್ರ ಅಭಿವೃದ್ದಿ ಚಟುವಟಿಕೆಗೆ ಪ್ರತಿಯೊಬ್ಬ ಭಕ್ತರಿಂದ(ಪುಣ್ಯ ಸ್ನಾನಗೈಯುವ) 30 ರೂ. ಸೇವಾ ಶುಲ್ಕ ಪಡೆಯುವ ಹೊಸ ಕ್ರಮಕ್ಕೆ ಆರಂಭ ನೀಡಲಿದ್ದಾರೆ. ಇದು ಶ್ರೀಕ್ಷೇತ್ರದ ಉತ್ಸವ ನಿರ್ವಹಣೆಯ ವೆಚ್ಚಕ್ಕೆ ಭರಿಸಲಾಗುವುದೆಂದು ಅಧಿಕೃತರು ವಿಜಯವಾಣಿಗೆ ತಿಳಿಸಿದ್ದಾರೆ. 50 ಸಾವಿರಕ್ಕಿಂತಲೂ ಅಧಿಕ ಮಂದಿ ಆಗಮಿಸುವ ಕಾವೇರಿ ಪುಣ್ಯ ಸ್ನಾನಕ್ಕೆ ನಿರ್ವಹಣೆಯಲ್ಲಿ ಕೊರತೆಯಾಗಬಾರದು. ಆಥರ್ಿಕವಾಗಿ ಅತಿ ಹಿಂದುಳಿದಿರುವ ಕ್ಷೇತ್ರದ ಉತ್ಸವ ಆಚರಣೆಗೆ ಭಕ್ತರ ಕೊಡುಗೆ ಅಗತ್ಯವೆಂದು ಅಧಿಕೃತರು ತಿಳಿಸುತ್ತಾರೆ.
ಪ್ರತಿಭಟನೆಯ ಕೂಗು: ಹೊಸತು ಸ್ವೀಕರಿಸಲು ಕಷ್ಟ!
ಈ ವರ್ಷದಿಂದ ಆರಂಭಿಸಲುದ್ದೇಶಿಸಿರುವ ಈ ಸೇವಾ ಶುಲ್ಕದ ಬಗ್ಗೆ ಕೆಲವರು ಈಗಾಗಲೇ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶ್ರೀದೇವರ ಅಚಲ ನಂಬಿಕೆಯಿಂದ ಆಗಮಿಸಿ ಪುಣ್ಯ ತೀರ್ಥ ಸ್ನಾನಗೈಯುವ ವ್ಯವಸ್ಥೆಯ ಪಾವಿತ್ರ್ಯತೆಯನ್ನು ಸೇವಾ ಶುಲ್ಕಪದ್ದತಿ ನಾಶಗೊಳಿಸುವುದೆಂದು ಪತ್ರಿಕೆಯೊಂದಿಗೆ ಕೆಲವರು ತಿಳಿಸಿದ್ದಾರೆ.
ಏನಂತೆ ಅರಮನೆಯ ಅಪ್ಪಣೆ: ಕೋಟ್ಸ್:
ಮುಜುಂಗಾವು ಶ್ರೀಕ್ಷೇತ್ರದ ಸಮಗ್ರ ಅಭಿವೃದ್ದಿಯಲ್ಲಿ ದಿ.ಸುಬ್ರಾಯ ಭಟ್ ಮೂಡುಕೋಣಮ್ಮೆಯವರ ಕೊಡುಗೆ ಮಹತ್ತರವಾಗಿದ್ದು, ಅವರ ದಿಗ್ದರ್ಶನದಂತೆ, ಅವರು ಈ ಹಿಂದೆ ಹಾಕಿಕೊಟ್ಟ ಮಾಲ್ಪಂಕ್ತಿಯನುಸಾರ ಇನ್ನಷ್ಟು ಅಭಿವೃದ್ದಿ ನಡೆಸಲು ಅರಮನೆ ಉತ್ಸುಕವಾಗಿದೆ. ಈ ಹಿನ್ನೆಲೆಯಲ್ಲಿ ಊರು&ಪರವೂರಿಂದ ಆಗಮಿಸುವ ಭಕ್ತರ ಸುಗಮ ವ್ಯವಸ್ಥೆಗೆ ವಿವಿಧ ಕಾರ್ಯಯೋಜನೆ ಅನುಷ್ಠಾನಗೊಳಿಸಬೇಕಿದೆ. ಆದಾಯ ತೀವ್ರ ಕುಸಿತವಿರುವ ಶ್ರೀಕ್ಷೇತ್ರದ ಕಾವೇರಿ ಸಂಕ್ರಮಣದ ವ್ಯವಸ್ಥೆಗೆ ಸೇವಾ ಶುಲ್ಕ 30 ನ್ನು ಕ್ಷೇತ್ರ ಅಭಿವೃದ್ದಿ ಸಮಿತಿಯ ತೀಮರ್ಾನದಂತೆ ಕೈಗೊಳ್ಳಲಾಗುತ್ತಿದೆ. ಸತ್ ಚಿಂತನೆಯ ಭಕ್ತರು ಸಹಕರಿಸುವರು.
ರಾಜೇಂದ್ರ ಅರಸರು.
ಮಾಯಿಪ್ಪಾಡಿ ಅರಮನೆಯ ದಾನ ಮಾತರ್ಾಂಡವರ್ಮ ಅರಸರ ಪ್ರತಿನಿಧಿ.
ಮಾಯಿಪ್ಪಾಡಿ ಅರಮನೆ.